ಫ್ಯಾಕ್ಟ್‌ಚೆಕ್ : ಬೆಂಗಳೂರಿನಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬ ಪಾಪ್ ಕಾರ್ನ್ ತಯಾರಿಸಲು ಉಪ್ಪಿನ ಬದಲು ಮೂತ್ರ ಬೆರಸಿದ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಬೆಂಗಳೂರಿನಲ್ಲಿ ಉಪ್ಪಿನ ಬದಲು ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸುವಾಗ ಪಾಪ್ ಕಾರ್ನ್ ಸ್ಟಾಲ್ ನ ನಯಾಸ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ! ಮುಸ್ಲಿಮರನ್ನು ಸುಧಾರಿಸಲು ಸಾಧ್ಯವಿಲ್ಲ. ಬಂಜೆತನ ಚಿಕಿತ್ಸಾ ಕೇಂದ್ರಗಳು ಹೆಚ್ಚಾಗಲು ಕಾರಣವೇನು? ಮುಸ್ಲಿಮರ ಬಿರಿಯಾನಿ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿದೆ. ಬಿರಿಯಾನಿ, ಚಿಕನ್ ಪಕೋಡ ಇತ್ಯಾದಿಗಳನ್ನು ಮೂತ್ರದೊಂದಿಗೆ ಬೆರೆಸಿ ಉಗುಳುವುದನ್ನು ಧಾರ್ಮಿಕ ಕರ್ತವ್ಯ ಎನ್ನುತ್ತಾರೆ.
ಇದಕ್ಕಾಗಿಯೇ ನಾವು “ಯಾವುದೇ ಸಂದರ್ಭದಲ್ಲೂ ಮುಸ್ಲಿಂ ಬೇಕರಿಗಳು, ಹೋಟೆಲ್‌ಗಳು ಅಥವಾ ಔಷಧಿ ಅಂಗಡಿಗಳಿಂದ ಏನನ್ನೂ ಖರೀದಿಸಬೇಡಿ” ಎಂದು ಏಕೆ ಹೇಳುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷದ ಹಿನ್ನಲೆಯಂತೆ ಕಾಣುವ ಪೋಸ್ಟ್‌ಅನ್ನು ಸಂಘಪರಿವಾರದ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಮುಸ್ಲಿಮರು ಆಹಾರದಲ್ಲಿ ಉಗುಳಿದ್ದಾರೆ, ಮೂತ್ರ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಉಪ್ಪಿನ ಬದಲು ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸುವಾಗ ಪಾಪ್ ಕಾರ್ನ್ ಸ್ಟಾಲ್ ನ ನಯಾಸ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ!
ಮುಸ್ಲಿಮರನ್ನು ಸುಧಾರಿಸಲು ಸಾಧ್ಯವಿಲ್ಲ.
ಇದಕ್ಕಾಗಿ ಯಾವುದೇ ಸಂದರ್ಭದಲ್ಲೂ ಮುಸ್ಲಿಂ ಬೇಕರಿ ಹೋಟೆಲ್ ಅಥವಾ ಔಷಧಿ ಅಂಗಡಿಗಳಿಂದ ಏನನ್ನೂ ಖರೀದಿಸಬೇಡಿ.
ಆಮೇಲೆ ನಿಮ್ಮಿಷ್ಟ… pic.twitter.com/a2I0UOznRJ— Sudhakar Rao (@ImSudhakarRao) January 12, 2024
ಬೆಂಗಳೂರಿನ ಲಾಲ್ ಬಾಗ್ ಪ್ರದೇಶದಲ್ಲಿ ನಡೆದ ಘಟನೆ ಎಂದು ಟಿವಿ9 ವರದಿ ಮಾಡಿದ ವಿಡಿಯೋವೊಂದರ ಕ್ಲಿಫ್‌ಅನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡುತ್ತಿದ್ದು, ಅಲ್ಲಿ ಕಂಡುಬರುವ ದೃಶ್ಯಾವಳಿಗಳ ಪ್ರಕಾರ, ಪಾಪ್‌ಕಾರ್ನ್ ಮಾಡಲು ಇಟ್ಟಿರುವ ಎಣ್ಣೆಯ ಬಾಟಲಿಯಲ್ಲಿ ಮೂರು ಬಾರಿ ಉಗುಳುವುದನ್ನು ನೋಡಿದ್ದೇನೆ ಎಂದು ವ್ಯಕ್ತಿಯೊಬ್ಬರು ಆರೋಪಿಸುತ್ತಿರುವುದನ್ನು ಕೇಳಬಹುದು. ಅಂಗಡಿಯವನು ಮುಸ್ಲಿಂ ಎಂದು ಆ ವ್ಯಕ್ತಿ ಹೇಳುತ್ತಿರುವುದು ಕೂಡ ಕೇಳಿಬರುತ್ತಿದೆ. ಪಾಪ್ ಕಾರ್ನ್‌ಗೆ ಬಳಸಲು ಇಟ್ಟ ಎಣ್ಣೆಯ ಬಾಟಲಿಯನ್ನು ಪೊಲೀಸರು ಪರೀಕ್ಷೆಗೆಂದು ವಶಪಡಿಸಿಕೊಳ್ಳುವುದನ್ನು ನೋಡಬಹುದು. ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಸೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಪ್ರಕಾರ ನಯಾಜ್ ಪಾಷಾ ಎಂಬ ಮುಸ್ಲಿಂ ಯುವಕ ಪಾಪ್ ಕಾರ್ನ್ ತಯಾರಿಸುವಾಗ ಉಪ್ಪಿನ ಬದಲು ಮೂತ್ರ ಮಾಡಿದ್ದಾನೆ ಎಂಬ ಆರೋಪ ಒಂದು ಕಡೆಯಾದರೆ, ಪಾಪ್ ಕಾರ್ನ್‌ಗೆ ಬಳಸುವ ಎಣ್ಣೆಯ ಬಾಟಲಿಗೆ ಮೂರು ಬಾರಿ ಉಗುಳಿದ್ದಾನೆ ಎಂಬುದು ಮತ್ತೊಂದು ಆರೋಪ. ಪೋಸ್ಟ್ ಮತ್ತು ವಿಡಿಯೋದಲ್ಲಿ ಈ ರೀತಿ ಬೇರೆ ಬೇರೆ ಆರೋಪಗಳನ್ನು ನೋಡಬಹುದು. ಇದರಲ್ಲಿ ಯಾವುದು ನಿಜ?

ಈ ಎರಡು ಆರೋಪಗಳು ನಿಜವೇ?
ಈ ಘಟನೆ ಕುರಿತು ವಿವರಣೆಗಾಗಿ ಸರ್ಚ್ ಮಾಡಿದಾಗ, ಜೂನ್ 14, 2022 ರಂದು ‘ದಿ ನ್ಯೂಸ್ ಮಿನಿಟ್’ ನ ಸುದ್ದಿ ಪೋರ್ಟ್‌ಲ್‌ನಲ್ಲಿ ಈ ಕುರಿತು ಒಂದು ಸುದ್ದಿಯನ್ನು ಪ್ರಕಟಿಸಿರುವುದು ಕಂಡುಬಂದಿದೆ. ವರದಿಯ ಪ್ರಕಾರ ಸೋಮೇಶ್ವರನಗರದ ನಿವಾಸಿ ನಯಾಜ್ ಪಾಷಾ ಎಂಬ ಯುವಕ ಲಾಲ್ ಬಾಗ್ ನಲ್ಲಿ ಪಾಪ್ ಕಾರ್ನ್ ಅಂಗಡಿ ನಡೆಸುತ್ತಿರುತ್ತಾನೆ. ಅಲ್ಲಿಗೆ ವಾಯು ವಿಹಾರಕ್ಕೆಂದು ಬರುವ ವ್ಯಕ್ತಿಯೊಬ್ಬ ಈ ಆರೋಪವನ್ನು (ಎಣ್ಣೆಯ ಬಾಟಲಿಗೆ ಮೂರು ಬಾರಿ ಉಗುಳಿದ್ದಾನೆ ಎಂಬ ಆರೋಪ) ಮಾಡುವುದನ್ನು ಕೇಳಬಹುದು.

ಘಟನೆಯನ್ನು ವರದಿ ಮಾಡುವ ಸಲುವಾಗಿ ನ್ಯೂಸ್ ಮಿನಿಟ್ ನಯಾಜ್ ಪಾಷಾನನ್ನು ಸಂದರ್ಶಿಸಿದ್ದು, ನಾಯಾಜ್ ಘಟನೆ ಬಗ್ಗೆ ಮಾತನಾಡುತ್ತಾ, ಬೆಳಗ್ಗೆ ಸುಮಾರು 9.30ಕ್ಕೆ ಪಾಪ್ ಕಾರ್ನ್ ಹುರಿಯುವಾಗ ಅಡುಗೆ ಎಣ್ಣೆಯ ಪ್ಯಾಕೆಟ್‌ಅನ್ನು ಬಾಯಿಂದ ಕೀಳುತ್ತಿದ್ದೆ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು, ನಿನ್ನ ಹೆಸರೇನು ಎಂದು ಕೇಳಿದರು ನಾನು ನಯಾಜ್ ಪಾಷಾ ಎಂದು ಹೇಳಿದೆ ಅಷ್ಟೆ. ನೀನು ಮುಸ್ಲಿಮ್ಮಾ ಎಂದು ಕೇಳಿದರು, ನಾನು ಹೌದು ಎಂದು ಹೇಳಿದೆ. ತಕ್ಷಣ ಜೋರಾಗಿ ಮಾತನಾಡಲು ಶುರು ಮಾಡಿದರು, ಎಣ್ಣೆಯಲ್ಲಿ ಉಗುಳುತ್ತಿದ್ದೀಯಾ ಎಂದು ಅಲ್ಲಿ ಸುತ್ತಮುತ್ತ ಇದ್ದ ಅನೇಕರನ್ನು ಕರೆದು, ಇವನ್ನು ಎಣ್ಣೆಯಲ್ಲಿ ಮೂರು ಬಾರಿ ಉಗುಳುವುದನ್ನು ನಾನು ನೋಡಿ, ಪ್ರಶ್ನಿಸಿದೆ, ಅಕ್ಕೆ ಅವಸು ತಪ್ಪಾಯ್ತು ಎಂದು ಕೇಳಿದ ಎಂದು ನನ್ನ ಮೇಲೆ ಗಲಾಟೆ ಮಾಡಿದರು.
ನಾನು ಎಣ್ಣೆಯ ಪ್ಯಾಕೆಟ್‌ಅನ್ನು ಬಾಯಿಂದ ಕಿತ್ತಿದ್ದು ನಿಜ ಅದಕ್ಕೆ ಸ್ಸಾರಿ ಅಂತ ಹೇಳಿದೆ, ಆದರೆ ನಾನು ಎಣ್ಣೆಯ ಬಾಟಲಿಯಲ್ಲಿ ಉಗುಳಿಲ್ಲ ಬೇಕಿದ್ದರೆ ಅದನ್ನು ಪರೀಕ್ಷೆ ಮಾಡಲಿ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ವಿರುದ್ದ ಆರೋಪ ಮಾಡಿದ ವ್ಯಕ್ತಿ ಠಾಣೆಗೆ ಬಂದು ದೂರನ್ನು ಸಹ ನೀಡಲಿಲ್ಲ, ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡರು ಎಂದು ನ್ಯೂಸ್ ಮಿನಿಟ್‌ಗೆ ವಿವರಣೆ ನೀಡಿದ್ದಾರೆ. ಈ ಘಟನೆ 14 ಜೂನ್ 2022ರಂದು ನಡೆದಿದ್ದು, ಇಲ್ಲಿ ಆರೋಪವನಷ್ಟೆ ಮಾಡಲಾಗಿತ್ತು ಎಂಬುದು ವಾಸ್ತವ.
ಪಾಪ್ ಕಾರ್ನ್ ಬಳಸುವ ಎಣ್ಣೆಯಲ್ಲಿ ಉಪ್ಪಿನ ಬದಲು ಮೂತ್ರ ಬೆರೆಸಿದ್ದಾರೆ ಎಂಬ ವಿಡಿಯೋ ಇದೀಗ ವೈರಲ್ ಆಗಿದೆ. ಆದರೆ ಘಟನೆ ಸಂಭವಿಸಿದಾಗ (2022) ಅವರು ಎಣ್ಣೆಯಲ್ಲಿ ಉಗುಳಿದರು ಎಂದು ಹೇಳಲಾಗಿದೆ. ತಾನು ಮುಸ್ಲಿಂ ಎಂಬ ಕಾರಣಕ್ಕೆ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿದೆ , ಈ ಆರೋಪವನ್ನು ನವಾಜ್ ಈ ಹಿಂದೆಯೇ ನಿರಾಕರಿಸಿದ್ದಾರೆ.
ಈ ಹಿಂದೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರು ಆಹಾರಕ್ಕೆ ಉಗುಳುವುದನ್ನು ಸಮರ್ಥಿಸಿದ್ದಾರೆ ಎಮದು ಸುಳ್ಳು ಹೇಳಿಕೆಗಳೊಂದಿಗೆ ಪೋಸ್ಟ್‌ಅನ್ನು ಪ್ರಸಾರ ಮಾಡಲಾಗಿತ್ತು. ಅದನ್ನು ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್ : ಹಲಾಲ್ ಎಂದರೆ ಆಹಾರಕ್ಕೆ ಉಗುಳುವುದು ಎಂದು ಮುಸ್ಲಿಮರು ಹೇಳಿಲ್ಲ! ಹಾಗಿದ್ದರೆ ಈ ಪ್ರಕರಣವೇನು?
ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸಂಬಂಧವಿಲ್ಲ ವಿಡಿಯೋಗಳನ್ನು ಸಾಮಾಜಿಕ ಮಜಾಲತಾಣಗಳಲ್ಲಿ ಪ್ರಸಾರ ಮಾಡಿದಾಗ ಏನ್‌ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ಮೂಲಕ ವಾಸ್ತವವನ್ನು ಜನರ ಮುಂದಿಟ್ಟಿದೆ.
Fact check: ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಸುಳ್ಳು ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ
ಒಟ್ಟಾರೆಯಾಗಿ ಹೇಳುವುದಾದರೆ, ಲಾಲ್ ಬಾಗ್ ಬಳಿ ನಯಾಜ್ ಪಾಷಾ ಎಂಬ ಮುಸ್ಲಿಂ ಯುವಕ ಪಾಪ್ ಕಾರ್ನ್ ಅಂಗಡಿಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಮುಂಜಾನೆ ವಾಕಿಂಗ್‌ಗೆಂದು ಬಂದಿದ್ದ ವ್ಯಕ್ತಿಯೊಬ್ಬರು ಪಾಕ್ ಕಾರ್ನ್ ಎಣ್ಣೆಗೆ ನಯಾಜ್ ಮೂರು ಬಾರಿ ಉಗುಳಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಿದ್ದರು ಈ ಘಟನೆ ನಡೆದಿರುವುದು 2022 ಜೂನ್‌ನಲ್ಲಿ ಆದರೆ ಈ ಆರೋಪ ಕೇವಲ ಮುಸ್ಲಿಂ ದ್ವೇಷದಿಂದ ಮಾಡಲಾಗಿತ್ತು ಎಂದು ನಯಾಜ್ ಪಾಷಾ ದಿ ನ್ಯೂಸ್ ಮಿನಿಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ.
ಈ ಹಳೆಯ ಘಟನೆಯನ್ನು ಪಾಪ್ ಕಾರ್ನ್‌ಗೆ ಬಳಸುವ ಎಣ್ಣೆಗೆ ಉಪ್ಪಿನ ಬದಲು ಮೂತ್ರ ಬೆರೆಸಿ ಪಾಪ್‌ಕಾರ್ನ್‌ಅನ್ನು ತಯಾರಿಸುತ್ತಿದ್ದ ನಯಾಜ್ ಎಂಬ ಮುಸ್ಲಿಂ ವ್ಯಕ್ತಿ ರೆಡ್ ಹ್ಯಾಂಡ್‌ಆಗಿ ಸಿಕ್ಕಿ ಬಿದ್ದಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಕೋಮು ದ್ವೇಷದ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ. ಇಂತಹ ಸುಳ್ಳು ಪೋಸ್ಟ್ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಿ ಜನರನ್ನು ತಪ್ಪುದಾರಿಗೆಳೆಯುವವರ ವಿರುದ್ದ ಸರ್ಕಾರ ನಿರ್ಧಾಕ್ಷಣ್ಯ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೆಂಗಳೂರಿನಲ್ಲಿ ಮುಸ್ಲಿಮರಿಂದ ಹಿಂದೂ ಹುಡುಗಿಯರ ಅಪಹರಣ ಎಂದು ಸುಳ್ಳು ಪೋಸ್ಟ್ ಹಂಚಿಕೆ

