ಫ್ಯಾಕ್ಟ್‌ಚೆಕ್ : ಲಾಲ್ ಚೌಕ್‌ನಲ್ಲಿ ರಾಮನ ಚಿತ್ರ ಪ್ರದರ್ಶಿಸಲಾಗಿದೆ ಎಂಬುದು ನಿಜವೇ?
ಜಮ್ಮು ಕಾಶ್ಮೀರದ ಶ್ರೀನರದಲ್ಲಿರುವ ಲಾಲ್ ಚೌಕ್‌ನಲ್ಲಿ ಶ್ರೀರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ನ್ನು ಹಂಚಿಕೊಳ್ಳಲಾಗುತ್ತಿದೆ.
https://twitter.com/ImSudhakarRao/status/1747821920706613362
“ಅವರ ಆಳ್ವಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಹೆದರುತ್ತಿದ್ದ ಅದೆ ಲಾಲ್ ಚೌಕ್ ನಲ್ಲಿ ಇಂದು ಪ್ರಭು ಶ್ರೀರಾಮ ಅಜರಾಮರವಾಗಿ ನಿಂತಿದ್ದಾನೆ ಇದು ಮೋದಿಯವರ ತಾಕತ್ತು” ಎಂಬ ಹೆಳಿಕೆಯೊಂದಿಗೆ ಸುಧಾಕರ್ ರಾವ್ ಎಂಬ ಬಳಕೆದಾರರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜನವರಿ 15, 2024ರ ಮಧು ಕಿ ದುನಿಯಾ 05 ಯೂಟ್ಯೂಬ್ ಚಾನೆಲ್ ವೀಡಿಯೋದಲ್ಲಿ “ಡೆಹ್ರಾಡೂನ್ ಕ್ಲಾಕ್ ಟವರ್” ಎಂದು ಅಪ್‌ಲೋಡ್ ಮಾಡಿದ ವೀಡಿಯೋ ಲಭ್ಯವಾಗಿದೆ.
ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ ಜನವರಿ 18, 2024ರ ಹಿಂದೂಸ್ತಾನ್ ಟೈಮ್ಸ್ ವರದಿ ಲಭ್ಯವಾಗಿದೆ. ಈ ವರದಿ ಪ್ರಕಾರ, ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಹಿನ್ನಲೆಯಲ್ಲಿ, ಡೆಹ್ರಾಡೂನ್ ಕ್ಲಾಕ್ ಟವರ್ ನಲ್ಲಿ ಬುಧವಾರ ರಾತ್ರಿ ಲೇಸರ್ ಲೈಟಿಂಗ್ ಗಳ ಮೂಲಕ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ. ಜನ ನಿಬಿಡ ರಸ್ತೆ ಮಧ್ಯೆ ಇರುವ ಕ್ಲಾಕ್ ಟವರ್ ನಲ್ಲಿ ಪ್ರಾಜೆಕ್ಟರ್ ಮೂಲಕ ವಿವಿಧ ಚಿತ್ರಗಳನ್ನು ಮೂಡಿಸಲಾಗಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಎರಡು ಒಂದೇ ತೆರನಾಗಿರುವುದನ್ನು ಕಾಣಬಹುದು. ಎರಡೂ ವಿಡಿಯೋದಲ್ಲಿ ಸಾಮ್ಯತೆಗಳಿವೆ. ಆದರೆ ಜಮ್ಮು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ಇರುವ ಟವರ್ ಗೂ ಡೆಹ್ರಾಡೂನ್ ಕ್ಲಾಕ್ ಟವರ್‌ಗೂ ಇರುವ ವ್ಯತ್ಯಾಸವನ್ನು ಗಮನಿಸಬಹುದು. ಈ ಎರಡು ಬೇರೆ ಬೇರೆ ಎಂದು ನ್ಯೂಸ್ ಚೆಕ್ಕರ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕಾಶ್ಮೀರದ ಲಾಲ್ ಚೌಕ್‌ನಿಂದ ಬಂದಿಲ್ಲ ಬದಲಿಗೆ ಡೆಹ್ರಾಡೂನ್‌ನ ಕ್ಲಾಕ್ ಟವರ್ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಬಿಜೆಪಿ ಮತ್ತು ಸಂಘ ಪರಿವಾರದ ಬೆಂಬಲಿಗರು ಹಿಂದೂ ಧರ್ಮ, ಹಿಂದುತ್ವ, ರಾಮ ಮಂದಿರ ಮತ್ತು ಕಾಶ್ಮೀರ ವಿಷಯದಲ್ಲಿ ಬಹಳ ಹಿಂದಿನಿಂದಲೂ ರಾಜಕೀಯ ಮಾಡಿಕೊಂಡು ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. 2014 ಕ್ಕೂ ಮೊದಲು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, ರಾಮ ನವಮಿ ಆಚರಣೆಗಳನ್ನು ಮಾಡಲಾಗಿದೆ. ಆದರೆ 2014ಕ್ಕೂ ಮೊದಲು ಇಂತಹದ್ದೇನನ್ನು ಮಾಡಿಲ್ಲ ಬಿಜೆಪಿ ಅಧಿಕಾರಕ್ಕೆ ಬಂದಮೇಲಷ್ಟೆ ಇದನ್ನು ಮಾಡಲಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಇಸ್ರೇಲ್ ಜನವರಿ 22ಅನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಿದೆಯೇ?

