FACT CHECK | ತುಮಕೂರಿನ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ತಾನದ ಧ್ವಜ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಪ್ರತಿಪಾದಿಸಿ “ಇದು ತುಮಕೂರಿನ ಗುಬ್ಬಿ ಗೇಟ್ ಬಳಿ ಕಾಂಗ್ರೆಸ್ಸಿನ ಸಭೆ ಮುಂದಿನ ಪ್ರಧಾನಿ ರಾಹುಲ್ ಗಾಂಧಿನಾ? ಇಲ್ಲ ನರೇಂದ್ರ ಮೋದಿನಾ? ನೀವೇ ತೀರ್ಮಾನ ಮಾಡಿ”  ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ  ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

Fact Check: ತುಮಕೂರಿನಲ್ಲಿ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ರೀತಿಯ ಪೋಸ್ಟ್ ಗಳನ್ನು  ಇಲ್ಲಿ, ಇಲ್ಲಿ ನೋಡಬಹುದು.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, 23 ಏಪ್ರಿಲ್ 2024ರಂದು ಪ್ರಜಾವಾಣಿಯಲ್ಲಿ ಮಾಡಿದ ವರದಿಯೊಂದು ಲಭ್ಯವಾಗಿದ್ದು, “ಪಾಕ್‌ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಪೋಸ್ಟ್; ಪ್ರಕರಣ ದಾಖಲು ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಲಾಗಿದೆ.

ಪ್ರಜಾವಾಣಿ ವರದಿಯ ಪ್ರಕಾರ, ತುಮಕೂರು ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರದ ಸಭೆಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಸುಳ್ಳು ಪೋಸ್ಟ್ ಹಾಕಿದ್ದ ಮುರಳಿ ಪುರುಷೋತ್ತಮ್‌ ಎಂಬವರ ವಿರುದ್ಧ ತಿಲಕ್‌ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದಿದೆ.

 

Fact Check: ತುಮಕೂರಿನಲ್ಲಿ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವೇ?

ಏಪ್ರಿಲ್‌ 23, 2024ರ ತುಮಕೂರು ನ್ಯೂಸ್‌ ವರದಿ ಪ್ರಕಾರ, ತುಮಕೂರಿನ ಕಾಂಗ್ರೆಸ್‌ ಸಭೆಯಲ್ಲಿ ಪಾಕ್‌ ಧ್ವಜ, ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಕೇಸ್‌ ಎಂದಿದೆ. ಮುರಳಿ ಪುರುಷೋತ್ತಮ್ ಹೆಸರಿನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತುಮಕೂರಿನ ಗುಬ್ಬಿ ಗೇಟ್ ನಲ್ಲಿ ಕಾಂಗ್ರೆಸ್‌ ಸಭೆಯಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಲಾಗಿದೆ ಎಂದು ಫೋಟೋ ಸಹಿತ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಜಿಲ್ಲಾ ಪೊಲೀಸ್‌ ಇಲಾಖೆ ಅಧಿಕಾರಿಗಳು ಫ್ಯಾಕ್ಟ್ ಚೆಕ್‌ ಮಾಡಿದ್ದು ಅದು ಸುಳ್ಳು ಸುದ್ದಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ತುಮಕೂರಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಖಚಿತ ಪಡಿಸಿದ್ದಾರೆ ಎಂದಿದೆ.

ಈ ವರದಿಗಳಿಗೆ ಸಂಬಂಧಿಸಿದಂತೆ ನಾವು ಎಕ್ಸ್ ನಲ್ಲಿ ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಪೋಸ್ಟ್ ಅನ್ನೂ ಪತ್ತೆ ಮಾಡಿದ್ದೇವೆ. “ತುಮಕೂರಿಗೆ ಸಂಬಂಧಿಸಿದಂತೆ  ಸಾಮಾಜಿಕ ಜಾಲತಾಣಗಳಲ್ಲಿ ತುಮಕೂರಿನಲ್ಲಿ ಪಾಕಿಸ್ತಾನದ ಧ್ವಜ ಬೀಸಲಾಗಿದೆ ಎಂದು ಸುಳ್ಳು ಸುದ್ದಿ ವಿಡಿಯೋ ವೈರಲ್ ಮಾಡಿದವರ ವಿರುದ್ದ ತಿಲಕ್ ಪಾರ್ಕ್ ಠಾಣೆಯಲ್ಲಿ ಮೊ. ಸಂಖ್ಯೆ 0049/2024 ರಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ನೀಡಲಾಗಿದೆ.” ಎಂದು ಇದರಲ್ಲಿ ಹೇಳಲಾಗಿದೆ.

Fact Check: ತುಮಕೂರಿನಲ್ಲಿ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವೇ?

ಪಾಕಿಸ್ತಾನದ ಧ್ವಜದ ಬಗ್ಗೆಯೂ ನಾವು ಶೋಧ ನಡೆಸಿದ್ದು, ಬ್ರಿಟಾನಿಕಾ ಪ್ರಕಾರ, ಪಾಕ್ ಧ್ವಜ ಬಿಳಿ ಪಟ್ಟಿ ಮತ್ತು ಹಸಿರು ಭಾಗವನ್ನು ಹೊಂದಿದ್ದು ಅದರೊಳಗೆ ಅರ್ಧ ಚಂದ್ರ ಮತ್ತು ನಕ್ಷತ್ರವು ಬಿಳಿ ಬಣ್ಣದಲ್ಲಿದೆ. ಈ ಕುರಿತ ವಿವರಗಳನ್ನು ಇಲ್ಲಿ ನೋಡಬಹುದು.

ಹಾಗಿದ್ದರೆ ವಿಡಿಯೋ ಎಲ್ಲಿಯದ್ದು

Fact Check: ತುಮಕೂರಿನಲ್ಲಿ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವೇ?ಹಾಗಿದ್ದರೆ ವೈರಲ್ ವಿಡಿಯೋ ತುಮುಕೂರಿನದಲ್ಲಾ ಎಂದಾದರೆ ವಿಡಿಯೋ ಎಲ್ಲಿಯದ್ದು?

2018 ರ ಕರ್ನಾಟಕ ರಾಜ್ಯ ಚುನಾವಣೆಯ ಸಮಯದಲ್ಲಿ, IUML ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಿತ್ರ ಪಕ್ಷವಾಗಿತ್ತು. ಏಪ್ರಿಲ್ 12, 2018 ರಂದು ಪ್ರಕಟವಾದ ದಿ ಹಿಂದೂನಲ್ಲಿನ ಈ ಲೇಖನವು ಅವರ ಮೈತ್ರಿಯ ಬಗ್ಗೆ ವರದಿ ಮಾಡಿದೆ.

ಈ ವಿಡಿಯೋವನ್ನು ತುಮಕೂರು ನಗರದಲ್ಲಿ ಚಿತ್ರೀಕರಿಸಲಾಗಿದೆ ಎಂಬ ತಪ್ಪುದಾರಿಗೆಳೆಯುವ ಪೋಸ್ಟ್‌ಗಳಲ್ಲಿನ ಹೇಳಿಕೆಯೂ ಸುಳ್ಳು. ಇದು ವಾಸ್ತವವಾಗಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯದ್ದಾಗಿದೆ. ಕರ್ನಾಟಕ ಕಾಂಗ್ರೆಸ್ ನಾಯಕ ಶ್ರೀ ವೈ ಸಯೀದ್ ಅಹ್ಮದ್ “ಇದು ಮೇ 6, 2018 ರಂದು ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದಿದೆ” ಎಂದು ಹೇಳಿದ್ದಾರೆ.

ವೈರಲ್ ವೀಡಿಯೊದಲ್ಲಿ, “ಸಲೀಕ್ ಆಸ್ಪತ್ರೆ” ಎಂಬ ಬೋರ್ಡ್‌ ಇರುವುದನ್ನು ಕಾಣಬಹುದು. ಈ ಕೆಳಗೆ ಸಲೀಕ್ ಆಸ್ಪತ್ರೆಯ ಬೋರ್ಡ್‌ ಇರುವುದನ್ನು ಕಾಣಬಹುದು.

ಈ ಹೆಸರಿನ ಕೀವರ್ಡ್‌ ಬಳಸಿ ಹುಡುಕಿದಾಗ, ಸರ್ಕಾರಿ ದಾಖಲೆಯು ಸಲೀಕ್ ಆಸ್ಪತ್ರೆಯ ವಿಳಾಸವನ್ನು ಮೆಹಬೂಬ್ ಪ್ಲಾಜಾ, ಮುಖ್ಯ ರಸ್ತೆ, ಹೊಸ ಗಾಂಧಿ ನಗರ, ಬೆಳಗಾವಿ, ಎಂದು ಪಟ್ಟಿಮಾಡುತ್ತದೆ. ಆದ್ದರಿಂದ ಈ ಘಟನೆ ತುಮಕೂರಿನಲ್ಲಿ ನಡೆಯದೇ ಬೆಳಗಾವಿಯದ್ದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಬೆಳಗಾವಿಯ ಕಾಂಗ್ರೆಸ್‌ ರ್ಯಾಲಿಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಘಟನೆಯ ಧ್ವಜಗಳನ್ನು ಹಾರಿಸಿರುವ ದೃಶ್ಯಗಳನ್ನು, ಪ್ರಸ್ತುತ ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಚಿತ್ರ! ವೈರಲ್ ಫೋಟೊದ ಅಸಲೀಯ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights