FACT CHECK | ಮಹಾಕುಂಭ ಮೇಳದಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಷಣ ಮಾಡಿದ್ದಾರೆ ಎಂದು ಹಳೆಯ ವಿಡಿಯೋ ವೈರಲ್

ಮಹಾ ಕುಂಭಮೇಳದಲ್ಲಿ ಅಖಿಲೇಶ್ ಯಾದವ್ ಯಾರೂ ಇಲ್ಲದ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶಾಹೀ ಸ್ನಾನ ಮಾಡಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡ ಬೆನ್ನಲ್ಲೆ, ಸಂಸದ ತೇಜಸ್ವಿ ಸೂರ್ಯ ಮಹಾಕುಂಭ ಮೇಳದಲ್ಲಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು  ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, ಪರಮಾರ್ಥ ನಿಕೇತನ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿರುವ, ವೈರಲ್ ವೀಡಿಯೋದ ದೃಶ್ಯಾವಳಿಯನ್ನು ಹೋಲುವ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ಗಂಗಾ ಆರತಿ ಬುದ್ಧ ಪೂರ್ಣಿಮೆ 18 ಮೇ 2019 ಎಂಬ ಶೀರ್ಷಿಕೆ ನೀಡಲಾಗಿದೆ. ಇದರಲ್ಲಿರುವ ಸಂತ ಮತ್ತು ತೇಜಸ್ವಿ ಸೂರ್ಯ ಅವರು ಮಾತನಾಡುತ್ತಿರುವಾಗ ಕುಳಿತಿರುವ ಸಂತರು (ಸ್ವಾಮಿ ಚಿದಾನಂದ ಸರಸ್ವತಿ) ಒಬ್ಬರೇ ಆಗಿದ್ದಾರೆ ಎನ್ನುವುದನ್ನು ನೋಡಬಹುದು.

ಇದರನ್ವಯ ನಾವು ಯೂಟ್ಯೂಬ್ ನಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ, ಪರಮಾರ್ಥ ನಿಕೇತನದ ಚಾನೆಲ್ ಪ್ರಕಟಿಸಿದ, ಜುಲೈ 3, 2019ರ ತೇಜಸ್ವಿ ಸೂರ್ಯ ಅವರು ಮಾತನಾಡುತ್ತಿರುವ ವಿಡಿಯೋ ಲಭ್ಯವಾಗಿದೆ. 3.46 ಸೆಕೆಂಡ್ ಗಳ ಇದೇ ವೀಡಿಯೋವನ್ನು ಕುಂಭಮೇಳದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಈ ಬಗ್ಗೆ ಮಾಹಿತಿಗಾಗಿ ಕೀವರ್ಡ್ಗಳನ್ನು ಬಳಸಿ ಎಕ್ಸ್‌ನಲ್ಲಿ ಸರ್ಚ್ ಮಾಡಿದಾಗ, ತೇಜಸ್ವಿ ಸೂರ್ಯ ಅವರೂ ಜುಲೈ 8, 2019ರಂದು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಕಂಡುಬಂದಿದೆ. ಇದರಲ್ಲಿ ಅವರು “ತಾಯಿ ಗಂಗಾ ಅನೇಕ ವಿಧಗಳಲ್ಲಿ ಹಿಂದೂ ನಾಗರಿಕತೆಯ ಆದರ್ಶ ಸಂಕೇತವಾಗಿದೆ – ದೀರ್ಘಕಾಲಿಕ ಮತ್ತು ಯಾವಾಗಲೂ ಯೌವನಿಕೆಯದ್ದಾಗಿದೆ. ಪರಮಾರ್ಥ ನಿಕೇತನ, ಹೃಷಿಕೇಶಕ್ಕೆ ಭೇಟಿ ನೀಡಲು ಮತ್ತು ಸ್ವಾಮಿ ಜಿಯವರ ನೇತೃತ್ವದಲ್ಲಿ ಅವರು ಮಾಡುತ್ತಿರುವ ಸ್ಫೂರ್ತಿದಾಯಕ ಕೆಲಸವನ್ನು ನೋಡಲು ನನಗೆ ಅವಕಾಶವೊಂದು ಸಿಕ್ಕಿತು. ಈ ಸಂದರ್ಭದಲ್ಲಿ ನನ್ನ ಭಾಷಣ” ಎಂದು ಪರಮಾರ್ಥ ನಿಕೇತನದ ಯೂಟ್ಯೂಬ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.

ಋಷಿಕೇಶದಲ್ಲಿರುವ ಪರಮಾರ್ಥ ನಿಕೇತನ ಆಶ್ರಮದ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ, ಇದರಲ್ಲಿ ಪವಿತ್ರ ಗಂಗಾ ಆರತಿ ಮತ್ತು ಯಜ್ಞ ಧಾರ್ಮಿಕ ಕಾರ್‍ಯಕ್ರಮದ ಬಗ್ಗೆ ವಿವರಗಳಿದ್ದು ಗಂಗಾ ಆರತಿಯು ಪ್ರತಿದಿನ ಸೂರ್ಯಾಸ್ತದ ಸಮಯದಲ್ಲಿ ಮಾಡಲಾಗುತ್ತದೆ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  2019ರಲ್ಲಿ ಋಷಿಕೇಶಷ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದಲ್ಲಿ ತೇಜಸ್ವಿ ಅವರು ಮಾತನಾಡಿದ ವೀಡಿಯೋವನ್ನು ಈಗ ನಡೆಯುತ್ತಿರುವ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಖಿಲೇಶ್ ಯಾದವ್ ಮಹಾಕುಂಭ ಮೇಳದಲ್ಲಿ ಶಾಹೀ ಸ್ನಾನ ಸ್ನಾನ ಮಾಡಿದ್ರಾ?


FACT CHECK | ಅಖಿಲೇಶ್ ಯಾದವ್ ಮಹಾಕುಂಭ ಮೇಳದಲ್ಲಿ ಶಾಹೀ ಸ್ನಾನ ಸ್ನಾನ ಮಾಡಿದ್ರಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights