FACT CHECK | ಅಮೆರಿಕದಲ್ಲಿ ಬೆಂಕಿ ಹಚ್ಚಿ ಅನಾಹುತ ಸೃಷ್ಠಿಸಲು ಯತ್ನಿಸಿದ ವ್ಯಕ್ತಿ ಹಿಂದೂ ಸಮುದಾಯದವನಲ್ಲ
ಅಮೆರಿಕದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡ್ಗಿಚ್ಚುಗಳಿಂದ ಧ್ವಂಸಗೊಂಡ ಪ್ರದೇಶಗಳಲ್ಲಿ ಬ್ಲೋಟಾರ್ಚ್ ಅನ್ನು ಹೊತ್ತಿಸಲು ಪ್ರಯತ್ನಿಸಿ ಹಿಂದೂ ವ್ಯಕ್ತಿ ಭುವೇಶ್ ಪಟೇಲ್ ಎಂಬಾತ ಸಿಕ್ಕಿ ಬಿದ್ದಿದ್ದಾನೆ ಆತನನ್ನು ಈಗ ಪೊಲೀಸರು ಬಂಧಿಸಿ ವಿಚಾರಿಸುತ್ತಿದ್ದಾರೆ. ಈಗ ಕಾಡ್ಗಿಚ್ಚು ಹೆಚ್ಚಾಗಲು ಮೂಲ ಕಾರಣ ಯಾರಿರಬಹುದು ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ ಎಂದು ಹಿಂದೂ ಸಮುದಾಯದ ಮೇಲೆ ಅನುಮಾನ ಬರುವಂತೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸುತ್ತಿರುವುದು ಕಂಡು ಬಂದಿದೆ. ಹಾಗಾಗಿ ಕೆಲವರು ಹಿಂದೂ ಸಮುದಾಯದ ವ್ಯಕ್ತಿಯಿಂದಾಗಿ ಅಮೆರಿಕದಲ್ಲಿ ಅನಾಹುತ ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೆಲವು ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಜನವರಿ 10, 2024 ರಂದು Instagram ನಲ್ಲಿ ಪೋಸ್ಟ್ ಮಾಡಲಾದ ಮೂಲ ಕ್ಲಿಪ್ ಲಭ್ಯವಾಗದೆ. ಮೂಲ ವಿಡಿಯೋದ ಪ್ರಕಾರ, ಬ್ಲೋಟಾರ್ಚ್ ಅನ್ನು ಹೊತ್ತಿಸಲು ಪ್ರಯತ್ನಿಸುತ್ತಿರುವಾಗ ಸ್ಥಳೀಯ ನಿವಾಸಿಗಳು ಒಬ್ಬ ವ್ಯಕ್ತಿಯನ್ನು ತಡೆದರು ಎಂದು ಉಲ್ಲೇಖವಾಗಿದೆ. ಆದರೆ ಈ ಮೂಲ ಪೋಸ್ಟ್ನಲ್ಲಿ ಬ್ಲೋಟಾರ್ಚ್ ಹಚ್ಚಲು ಯತ್ನಿಸಿದ ವ್ಯಕ್ತಿ ಧರ್ಮ, ಹೆಸರು ಅಥವಾ ಜನಾಂಗದ ಬಗ್ಗೆ ಉಲ್ಲೇಖವಿಲ್ಲ.

ಮತ್ತಷ್ಟು ಮಾಹಿತಿಗಾಗಿ ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಜನವರಿ 14, 2024 ರಂದು ನ್ಯೂಸ್ವೀಕ್ ಪ್ರಕಟಿಸಿದ ವರದಿ ಲಭ್ಯವಾಗಿದೆ. ಈ ವರದಿಯ ಪ್ರಕಾರ , ವಲಸೆ ಅಧಿಕಾರಿಗಳು ವೀಡಿಯೊದಲ್ಲಿರುವ ವ್ಯಕ್ತಿ ಮೆಕ್ಸಿಕನ್ ಪ್ರಜೆ ಜುವಾನ್ ಮ್ಯಾನುಯೆಲ್ ಸಿಯೆರಾ ಎಂದು ದೃಢಪಡಿಸಿದರು, ಅವರು ಅಕ್ರಮವಾಗಿ ಯುಎಸ್ ಪ್ರವೇಶಿಸಿದ್ದಾನೆ. ಕೆನ್ನೆತ್ ಫೈರ್ನ ಸಮೀಪವಿರುವ ವುಡ್ಲ್ಯಾಂಡ್ ಹಿಲ್ಸ್ನಲ್ಲಿ ಬೆಂಕಿ ಹಚ್ಚಲು ಈ ವ್ಯಕ್ತಿ ಪ್ರಯತ್ನಿಸುತ್ತಿದ್ದನೆಂದು ಶಂಕಿಸಲಾಗಿದೆ ಮತ್ತು ಬ್ಲೋಟೋರ್ಚ್ ಅನ್ನು ಈತನೇ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕದಲ್ಲಿ ವಿವಿಧೆಡೆ ಬೆಂಕಿ ಹಚ್ಚಲು ಯತ್ನಿಸಿದ ಹಿಂದೂ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂದಿಸಿದ್ದಾರೆ ಎಂಬುದು ಸುಳ್ಳು. ಬಂಧಿತ ವ್ಯಕ್ತಿಯ ಹೆಸರು ಜುವಾನ್ ಮ್ಯಾನುಯೆಲ್ ಸಿಯೆರಾ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈತ ಮೆಕ್ಸಿಕನ್ ಪ್ರಜೆ ಎಂಬುದನ್ನು ಖಚಿತಪಡಿಸಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಆಸ್ಪತ್ರೆಯಲ್ಲಿರುವ ನಟ ಸೈಫ್ ಅಲಿ ಖಾನ್ನನ್ನು ಭೇಟಿಯಾದ್ರಾ ಅಸಾದುದ್ದೀನ್ ಓವೈಸಿ?

