FACT CHECK | ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಗೋವುಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

ಮಧುರೈನ ಪ್ರಸಿದ್ಧ ಮೀನಾಕ್ಷಿ ದೇವಾಲಯದ ಪಶ್ಚಿಮ ಗೋಪುರದ ಬಳಿ ಇರುವ ವಸತಿ ಕಟ್ಟಡದ ಮೇಲ್ಛಾವಣಿಯಲ್ಲಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಹೇಳುವ 48 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಈ ವೀಡಿಯೊವನ್ನು ಹಿಂದಿ ಧ್ವನಿಮುದ್ರಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಇಲ್ಲಿ ಗೋವುಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಆರ್ಕೈವ್ ಮಾಡಲಾದ ಲಿಂಕ್‌ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಳಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ನ್ಯೂಸ್‌ ಚೆಕ್ಕರ್ ಎಂಬ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ ಈ ಕುರಿತು ಸ್ಟೋರಿಯೊಂದನ್ನು ಪೋಸ್ಟ್‌ ಮಾಡಿರುವುದು ಲಭ್ಯವಾಗಿದೆ.

ವೆಬ್‌ಸೈಟ್‌ ಪ್ರಕಾರ, ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಫ್ಯಾಕ್ಟ್‌ಚೆಕ್ ತಂಡ ದೇವಾಸ್ತಾನದ ಅಕ್ಕ ಪಕ್ಕದಲ್ಲಿ ವಾಸ ಮಾಡುತ್ತಿರುವ ನಿವಾಸಿಗಳನ್ನು ಸಂಪರ್ಕಿಸಿ ಮೀನಾಕ್ಷಿ ಅಮ್ಮನ್ ದೇವಾಲಯದ ಪಶ್ಚಿಮ ಗೋಪುರದ ಬಳಿ ನಡೆಯುತ್ತಿರುವ ಪ್ರಾಣಿ ಬಲಿಗಳ ಬಗ್ಗೆ ಮಾಹಿತಿ ಪಡೆದಿದೆ.

ಪಶ್ಚಿಮ ಗೋಪುರದ ಬಳಿ ವಾಸಿಸುವ ಪೂಜಾರಿ ಶಿವರಾಮನ್ ಎಂಬುವವರು ಮಾಹಿತಿ ನೀಡಿದ್ದು, “ಇದು ದೀರ್ಘಕಾಲದವರೆಗೆ ನಡೆದುಕೊಂಡು ಬಂದ ಪದ್ಧತಿ, ಅಲ್ಲಿ ಕಾಣಿಕೆಗಳನ್ನು ಸ್ವೀಕರಿಸಿದ ನಂತರ, ನಾನು ಮೇಕೆಯನ್ನು ಬಲಿ ನೀಡಿ ಭಕ್ತರಿಗೆ ಆಹಾರವನ್ನು ನೀಡುತ್ತೇನೆ. ಆದರೆ ಅವರು [ಸಾಮಾಜಿಕ ಮಾಧ್ಯಮ ಬಳಕೆದಾರರು] ವೀಡಿಯೊವನ್ನು ತಪ್ಪು, ಸುಳ್ಳು ಮತ್ತುಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಇದು ಸರಿಯಲ್ಲ” ಎಂದು ಹೇಳಿದರು, ಹೀಗಾಗಿ ಭಕ್ತರಿಗೆ ಆಹಾರವನ್ನು ನೀಡುವ ಸಲುವಾಗಿ ಮೇಕೆ ಬಲಿ ಸಂಪ್ರದಾಯದ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ದೃಢಪಡಿಸಿದರು.

ಇತರೆ ನಿವಾಸಿಗಳನ್ನು ಮಾತನಾಡಿಸಿದಾಗ, ಶಿವರಾಮನ್ ಹೇಳಿರುವುದು ನಿಜ ಶಿವರಾಮನ್ ಒಬ್ಬ ಸಾಂಪ್ರದಾಯಿಕ ಪೂಜಾರಿ, ಅವರು ಪ್ರತಿ ವರ್ಷ ಮೇಕೆಯನ್ನು ಬಲಿ ನೀಡಿದ ನಂತರ ದೇವಾಲಯಕ್ಕೆ ಬರುವ ಭಕ್ತರು ಮತ್ತು ಅತಿಥಿಗಳಿಗೆ ಅನ್ನದಾನ (ದಾನದ ರೂಪವಾಗಿ ಊಟ ನೀಡುವ ಸಂಪ್ರದಾಯ)ವನ್ನು ಆಯೋಜಿಸುತ್ತಾರೆ. ಎಂದು ಹೇಳಿದ್ದಾರೆ.

ಈ ಸುಳ್ಳು ಪೋಸ್ಟ್‌ಗಳ ವಿರುದ್ದ ತಮಿಳುನಾಡು ಫ್ಯಾಕ್ಟ್‌ಚೆಕ್ ಘಟಕ 18 ಫೆಬ್ರವರಿ 2025ರಂದು ತನ್ನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಮೀನಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಪ್ರಾಣಿ ಬಲಿ ನೀಡುವುದು ಸಾಮಾನ್ಯ ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ ಗೋವುಗಳನ್ನು ಬಲಿ ಕೊಡಲಾಗುತ್ತಿದೆ ಎಂಬುದು ಸುಳ್ಳು ಎಂದು ತಿಳಿಸಿದೆ.

ಒಟ್ಟಾರೆಯಾ ಹೇಳುವುದಾದರೆ, ಮಧುರೈನ ಮೀನಾಕ್ಷಿ ದೇವಸ್ಥಾನದ ಬಳಿ ಗೂವುಗಳನ್ನು ಬಲಿ ಕೊಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳು ಸುಳ್ಳು ಮತ್ತು ಕೋಮು ನಿರೂಪಣೆಗಳಿಂದ ಕೂಡಿದ್ದು ಜನರನ್ನು ತಪ್ಪುದಾರಿಗೆಳೆಯುವಂತಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟಿಯೊಬ್ಬರ ವಿಡಿಯೋವನ್ನು ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights