FACT CHECK | ICC ಚಾಂಪಿಯನ್ಸ್ ಟ್ರೋಫಿ ಅಫ್ಘಾನಿಸ್ತಾನದ ಆಟಗಾರನ ಕೈಯಲ್ಲಿ ಭಾರತದ ತ್ರಿವರ್ಣ ಧ್ವಜ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ
ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ತಂಡವನ್ನು 8 ರನ್‌ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಹಾಕಿತ್ತು. ಈ ಜಯದ ಬೆನ್ನಲ್ಲೇ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನಿ ಮೈದಾನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
अफगानिस्तान ने इंग्लैंड से जीतने के बाद पाकिस्तानी ग्राउंड पर भारतीय झंडा लहराया जिसे देखकर पूरे पाकिस्तान अवाम् की सुलग गई!!#snowfall #WaqfAmendmentBill #SalmanKhan #SikandarTeaser #एकता_का_महाकुंभ #PAKvsBAN #StockMarket #Prayagraj pic.twitter.com/0xSUJqWQlQ
— Chhaya Singh (@ChhayaSingh01) February 27, 2025
‘ಛಾಯಾ ಸಿಂಗ್’ ಎಂಬ ಎಕ್ಸ್ ಬಳಕೆದಾರರು ಅಫ್ಘಾನಿಸ್ತಾನ ತಂಡದ ಆಟಗಾರರೊಬ್ಬರು ಕೈಯಲ್ಲಿ ಭಾರತದ ಧ್ವಜ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರು, ‘ಇಂಗ್ಲೆಂಡ್ ವಿರುದ್ಧ ಗೆದ್ದ ನಂತರ ಅಫ್ಘಾನಿಸ್ತಾನ ಪಾಕಿಸ್ತಾನದ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದು ಇಡೀ ಪಾಕಿಸ್ತಾನದ ಜನತೆಯನ್ನು ಕೆರಳಿಸಿತು!’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಚಿತ್ರವನ್ನು ಓಸೀನ್ ಜೈನ್, ಬೈರಾಗಿ ಪಂಡಿತ್, ವಾಶು ಮೇಘವಾಲ್, ಸಚಿನ್ ಯಾದವ್ ಜರ್ನಲಿಸ್ಟ್, ಅನುಪಮ್ ಯಾದವ್, ಎಲ್‌ಆರ್ ಗೋದಾರಾ, ಪಂಡಿತ್ ಸಚಿನ್ ಕುಮಾರ್ ಶರ್ಮಾ ಮತ್ತು ಅನಾಮಿಕಾ ಸೋನಿ ಎಂಬ ಎಕ್ಸ್ ಹ್ಯಾಂಡಲ್‌ಗಳಿಂದಲೂ ಹಂಚಿಕೊಳ್ಳಲಾಗಿದೆ. ಅವುಗಳಲ್ಲಿ ಕೆಲವು ಪೋಸ್ಟ್‌ಗಳನ್ನು ಇಲ್ಲಿ ನೀಡಲಾಗಿದೆ. ಐತಿಹಾಸಿಕ ಗೆಲುವಿನ ಬಳಿಕ ಅಫ್ಘಾನಿಸ್ತಾನ ತಂಡ ಪಾಕಿಸ್ತಾನದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರವನ್ನು ಗಮನಿಸಿದಾಗ, ಅಫ್ಘಾನಿಸ್ತಾನದ ಆಟಗಾರನ ಕೈಗಳು ಸಹಜವಾಗಿ ಕಾಣುತ್ತಿಲ್ಲ. ಆತನ ಎರಡೂ ಕೈಗಳು ತ್ರಿವರ್ಣ ಧ್ವಜವನ್ನು ಹಿಡಿದಿರುವ ಜಾಗದಿಂದ ಸ್ವಲ್ಪ ಮೇಲೆ ಇದೆ. ಇದು ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬ ಅನುಮಾನ ಮೂಡಿಸುತ್ತದೆ.
ನಂತರ ಈ ಪಂದ್ಯದ ಪೂರ್ತಿ ರಿಪ್ಲೇಯನ್ನು ಪರಿಶೀಲನೆ ನಡೆಸಿತು. ಆಗ 30 ನಿಮಿಷ 35 ಸೆಕೆಂಡ್‌ಗಳ ರಿಪ್ಲೇ ಬಾಕಿ ಇರುವಾಗ ಈ ದೃಶ್ಯವು ಕಂಡು ಬಂತು. ಇದರಲ್ಲಿ ಆಟಗಾರ ರಶೀದ್ ಖಾನ್‌ರತ್ತ ಖಾಲಿ ಕೈಯಲ್ಲಿ ಬರುತ್ತಿರುವುದನ್ನು ನೋಡಬಹುದು. ಇದೇ ದೃಶ್ಯಕ್ಕೆ ಭಾರತದ ಧ್ವಜ ಜೋಡಿಸಲಾಗಿದೆ ಎಂಬುದು ತಿಳಿದು ಬರುತ್ತದೆ.
![]()
ಒಟ್ಟಾರೆಯಾಗಿ ಹೇಳುವುದಾದರೆ, ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಬಳಿಕ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನದ ಮೈದಾನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿತು ಎಂಬ ವಾದ ಸುಳ್ಳು. ಅಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಅವರ ಖಾಲಿ ಕೈಗೆ ಭಾರತದ ಧ್ವಜವನ್ನು ಜೋಡಿಸಿ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬೈಕ್ ಸವಾರನೊಬ್ಬ ಮುಸ್ಲಿಂ ಅಂಗವಿಕಲ ವೃದ್ದನಿಗೆ ಧಳಿಸಿದ್ದಾನೆ ಎನ್ನಲಾದ ವಿಡಿಯೋದ ವಾಸ್ತವವೇನು?

