FACT CHECK | ಕಿಚ್ಚ ಸುದೀಪ್ ಬರಿಕೈಯಲ್ಲಿ ತೆಂಗಿನಕಾಯಿ ಒಡೆದು ಚೂರ್ ಚೂರ್ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?
ಸ್ಯಾಂಡಲ್ವುಡ್ನ ಕರುನಾಡ ಚಕ್ರವರ್ತಿ ಎಂದು ಹೆಸರಾಗಿರುವ ಕಿಚ್ಚ ಸುದೀಪ್ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸುದೀಪ್ ಬರಿಗೈಯಲ್ಲಿ ತೆಂಗಿನಕಾಯಿ ಒಡೆಯುತ್ತಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದೆ. ‘t_venkatesh_new_officail’ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಇದನ್ನು ಪೋಸ್ಟ್ ಮಾಡಲಾಗಿದೆ.
View this post on Instagram
ಈ ವಿಡಿಯೋದಲ್ಲಿ ಹತ್ತಾರು ತೆಂಗಿನಕಾಯಿಗಳನ್ನು ಒಂದಾದ ಮೇಲೊಂದರಂತೆ ಕೆಲವೇ ಸೆಕೆಂಡುಗಳಲ್ಲಿ ಸುದೀಪ್ ಕೈಯಲ್ಲೇ ಕುಟ್ಟಿ ಪುಡಿ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋದಲ್ಲಿ ‘ಕರ್ನಾಟಕ ಚಕ್ರವರ್ತಿ ಸುದೀಪ್ ಅವರ ಸಾಧನೆ’ ಎಂದು ಬರೆಯಲಾಗಿದೆ. ಐದು ದಿನಗಳ ಹಿಂದೆ ಪೋಸ್ಟ್ ಆಗಿರುವ ಈ ವಿಡಿಯೋಗೆ 25,900 ಲೈಕ್ಗಳು ಬಂದಿವೆ.
View this post on Instagram
ಇದೇ ವಿಡಿಯೋವನ್ನು gurugalu_official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಪೋಸ್ಟ್ ಮಾಡಲಾಗಿದೆ. ಇಲ್ಲೂ ವಿಡಿಯೋದ ಮೇಲೆ ಮೇಲಿನ ರೀತಿಯಲ್ಲೇ ‘ಕರ್ನಾಟಕ ಚಕ್ರವರ್ತಿ ಸುದೀಪ್ ಅವರ ಸಾಧನೆ’ ಎಂದು ಬರೆಯಲಾಗಿದೆ. ಹಾಗಿದ್ದರೆ ನಿಜವಾಗಿಯೂ ಕಿಚ್ಚ ಸುದೀಪ್ ಬರಿಗೈಯಲ್ಲಿ ತೆಂಗಿನಕಾಯಿ ಒಡೆದು ಚೂರ್ ಚೂರ್ ಮಾಡಿದ್ದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಕಿಚ್ಚ ಸುದೀಪ್ ತೆಂಗಿನಕಾಯಿಯನ್ನು ಬರಿಕೈಯಲ್ಲಿ ಹೊಡೆದು ಪುಡಿ ಪುಡಿ ಮಾಡುತ್ತಿರುವ ವೈರಲ್ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ಸರ್ಚ್ ಮಾಡಿದಾಗ, ಸುದೀಪ್ ಅವರ ಯಾವುದೇ ವಿಡಿಯೋಗಳು ಲಭ್ಯವಾಗಿಲ್ಲ.
https://www.youtube.com/watch?v=X7WaTMCMH6g&embeds_referring_euri=https%3A%2F%2Fvijaykarnataka.com%2F&embeds_referring_origin=https%3A%2F%2Fvijaykarnataka.com&source_ve_path=MjM4NTE
ನಂತರ, ‘Coconuts smashed with hand‘ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ಯೂಟ್ಯೂಬ್ ಚಾನಲ್ನಲ್ಲಿರುವ ವಿಡಿಯೋವೊಂದು ಲಭ್ಯವಾಗಿದೆ. ಇದರಲ್ಲಿರುವ ವಿಡಿಯೋ ಮತ್ತು ಸುದೀಪ್ ವಿಡಿಯೋ ಸ್ಪಷ್ಟವಾಗಿ ಹೋಲಿಕೆಯಾಗುತ್ತದೆ. ಇದರಲ್ಲಿ ‘ಒಂದು ನಿಮಿಷದಲ್ಲಿ ಒಂದು ಕೈಯಿಂದ 122 ತೆಂಗಿನಕಾಯಿಗಳನ್ನು ಒಡೆದ ಅಭೀಷ್ ಪಿ. ಡೊಮಿನಿಕ್’ ಎಂದು ಬರೆಯಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ‘ಎನ್ಡಿಟಿವಿ’ ಮಾಡಿರುವ ವರದಿ ಲಭ್ಯವಾಗಿದೆ. ವರದಿಯ ಕೇರಳದ ಅಭೀಷ್ ಪಿ ಡೊಮಿನಿಕ್ ಅವರು ಬರಿ ಕೈಯಿಂದ ನೂರಕ್ಕೂ ಹೆಚ್ಚು ತೆಂಗಿನಕಾಯಿ ಒಡೆದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ. 2017ರ ಫೆಬ್ರವರಿಯಲ್ಲಿ ಕೊಟ್ಟಾಯಂನಲ್ಲಿ ಅವರು ಈ ಸಾಧನೆ ಮಾಡಿದ್ದರು ಎಂದು ಇದರಲ್ಲಿ ವಿವರಿಸಲಾಗಿದೆ.
![]()
ಇನ್ನು ಸುದೀಪ್ ವಿಡಿಯೋದಲ್ಲಿ ವಿಗಲ್.ಎಐ ಎಂದು ಬರೆದಿದ್ದು, ಇದರ ಆಧಾರದಲ್ಲಿ ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಇದು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಅಭೀಷ್ ಅವರ ಜಾಗಕ್ಕೆ ಸುದೀಪ್ ಅವರನ್ನು ಕೂರಿಸಿ ಸೃಷ್ಟಿಸಿರುವ ವಿಡಿಯೋ ಎಂದು ತಿಳಿಯುತ್ತದೆ.
ಕನ್ನಡ ನಟ ಕಿಚ್ಚ ಸುದೀಪ್ ಅವರು ಬರಿಗೈಯಿಂದ ಕೆಲವೇ ಸೆಕೆಂಡುಗಳಲ್ಲಿ ನೂರಾರು ತೆಂಗಿನಕಾಯಿಗಳನ್ನು ಒಡೆಯುವ ವಿಡಿಯೋ ನಕಲಿ ಎಂದು ಪರಿಶೀಲನೆಯಿಂದ ತಿಳಿದು ಬಂದಿದೆ.
![]()
ಕೇರಳದ ಅಭೀಷ್ ಪಿ ಡೊಮಿನಿಕ್ ಅವರು ಗಿನ್ನೆಸ್ ರೆಕಾರ್ಡ್ಗಾಗಿ ತೆಂಗಿನಕಾಯಿ ಒಡೆದ ವಿಡಿಯೋವನ್ನೇ ಎಐ ಬಳಸಿ ಎಡಿಟ್ ಮಾಡಲಾಗಿರುವ ವಿಡಿಯೋ ಇದು ಎಂದು ದೃಢಪಟ್ಟಿದೆ. ಈ ಹಿಂದೆಯೂ ರಾಹುಲ್ ಗಾಂಧಿ ತೆಂಗಿನ ಕಾಯಿಯನ್ನು ಒಡೆದಿದ್ದಾರೆ ಎಂದು ಹಂಚಿಕೊಳ್ಳಲಾಗಿತ್ತು.
View this post on Instagram
ಒಟ್ಟಾರೆಯಾಗಿ ಹೇಳುವುದಾದರೆ, ನಟ ಸುದೀಪ್ ಬರಿಗೈಯಿಂದ ನೂರಾರು ತೆಂಗಿನಕಾಯಿಗಳನ್ನು ಒಡೆದಿದ್ದಾರೆ ಎನ್ನಲಾದ ವಿಡಿಯೋ ನಕಲಿ ಎಂಬುದು ಸ್ಪಷ್ಟವಾಗಿದೆ. ಕೇರಳದ ಅಭೀಷ್ ಪಿ ಡೊಮಿನಿಕ್ ಅವರು ಗಿನ್ನೆಸ್ ರೆಕಾರ್ಡ್ಗಾಗಿ ತೆಂಗಿನಕಾಯಿ ಒಡೆದ ವಿಡಿಯೋವನ್ನೇ ಎಐ ಬಳಸಿ ಎಡಿಟ್ ಮಾಡಲಾಗಿರುವ ವಿಡಿಯೋ ಇದು ಎಂದು ದೃಢಪಟ್ಟಿದೆ.
ಸಿನಿಮಾಗಳಲ್ಲೆ ಇಂತಹ ರಿಸ್ಕ್ ತೆಗೆದುಕೊಳ್ಳದ ನಟರು, ನಿಜ ಜೀವನದಲ್ಲಿ ಇಂತಹ ಆಟ ಆಟವಾಡುವುದನ್ನು ನಿರೀಕ್ಷಿಸಲು ಸಾಧ್ಯವೇ? ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬೈಕ್ ಸವಾರನೊಬ್ಬ ಮುಸ್ಲಿಂ ಅಂಗವಿಕಲ ವೃದ್ದನಿಗೆ ಧಳಿಸಿದ್ದಾನೆ ಎನ್ನಲಾದ ವಿಡಿಯೋದ ವಾಸ್ತವವೇನು?

