FACT CHECK | ಶಿವರಾತ್ರಿ ಹಬ್ಬದ ದಿನ ಮೃಗಾಲಯದ ಹುಲಿಗಳಿಗೆ ಮಾಂಸಾಹಾರ ನೀಡಿದಕ್ಕೆ ABVP ಪ್ರತಿಭಟನೆ ನಡೆಸಿದ್ದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಲಾಗುತ್ತಿದ್ದು, ಮಹಾಶಿವರಾತ್ರಿಯಂದು ಮೃಗಾಲಯದಲ್ಲಿ ಹುಲಿಗಳಿಗೆ ಮಾಂಸಾಹಾರ ನೀಡುವುದನ್ನು ವಿರೋಧಿಸಿ ABVP ಪ್ರತಿಭಟನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

 TheCancerian ಎಂಬ ಎಕ್ಸ್‌ ಹ್ಯಾಂಡಲ್‌ನಲ್ಲಿ ಇದೇ ಹೇಳಿಕೆಯೊಂದಿಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ನಲ್ಲಿ ಸುದ್ದಿಯೊಂದರ ಸ್ಕ್ರೀನ್ ಶಾಟ್ ಇದ್ದು, ಮಹಾಶಿವರಾತ್ರಿಯಂದು ಹುಲಿಗಳಿಗೆ ಮಾಂಸಾಹಾರ ನೀಡಿದ ಕಾರಣಕ್ಕೆ ಎಬಿವಿಪಿ ಮೃಗಾಲಯದ ಮೇಲೆ ದಾಳಿ ಮಾಡಿದೆ ಎಂದು ಬರೆಯಲಾಗಿದೆ. ಸುದ್ದಿಯೊಂದಿಗೆ ನಗುವ ಎಮೋಜಿಗಳನ್ನೂ ಲಗತ್ತಿಸಲಾಗಿದೆ.

ಇದಲ್ಲದೆ, ಇದೇ ಪೋಸ್ಟ್ ಅನ್ನು ಡಾ.ಸಂಗ್ರಾಮ್ ಗೋಕುಲಸಿಂಗ್ ಪಾಟೀಲ್ ಮತ್ತು ಅಮಿತೇಶ್ ಪಾಂಡೆ ಪಟ್ನಾ ಕೂಡ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ನಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ ಶಾಟ್‌ಅನ್ನು ಗಮನಿಸಿದಾಗ, ಎಡಭಾಗದಲ್ಲಿ ‘This Might Be Satire’ ಎಂದು ಬರೆಯಲಾಗಿದೆ.( ಇದನ್ನು ಅನುವಾದಿಸಿದಾಗ ಈ ಸುದ್ದಿ ಒಂದು ವಿಡಂಬನೆ ಎಂಬ ಅರ್ಥ ಬರುತ್ತದೆ ) ಇದು ವಿಡಂಬನೆ ಇರಬಹುದು ಎಂದು ಸ್ಕ್ರೀನ್‌ಶಾಟ್ ಮೇಲೆ ಬರೆಯಲಾಗಿದೆ. ಇದು ವಿಡಂಬನೆ ಇರಬಹುದು ಎಂದು ಸ್ಕ್ರೀನ್‌ಶಾಟ್ ಮೇಲೆ ಬರೆಯಲಾಗಿದೆ.

ಮತ್ತಷ್ಟು ಮಾಹಿತಿಗಾಗಿ, ನಾವು ಗೂಗಲ್ ಲೆನ್ಸ್ ಸಹಾಯದಿಂದ ಈ ಸ್ಕ್ರೀನ್‌ಶಾಟ್ ಅನ್ನು ಸರ್ಚ್ ಮಾಡಿದಾಗ, ಈ ಸುದ್ದಿಯನ್ನು ಮೊದಲು ಹಂಚಿಕೊಂಡ Instagram ಪೇಜ್‌ ಲಭ್ಯವಾಗಿದೆ.

abvp false news 4

The Savala Vada ಹೆಸರಿನ Instagram ಪುಟದಿಂದ ಈ ಸ್ಕ್ರೀನ್‌ಶಾಟ್ ಅನ್ನು ಫೆಬ್ರವರಿ 28 ರಂದು ಪೋಸ್ಟ್ ಮಾಡಲಾಗಿದೆ. ಈ ಪೇಜ್‌ನಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಇಲ್ಲಿ ವಿಡಂಬನಾತ್ಮಕ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪುಟದ ಬಯೋದಲ್ಲಿ ವಿಡಂಬನೆ ಎಂದು ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ನೋಡಿ. ಇಂತಹ ಹಲವು ವಿಡಂಬನೆಗಳನ್ನು ಈ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಲಾಗಿದೆ.

abvp false news 3

ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚೆಗೆ ಮಹಾಶಿವರಾತ್ರಿಯಂದು ದೆಹಲಿಯ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಮಹಾಶಿವರಾತ್ರಿಯ ದಿನದಂದು ವಿಶ್ವವಿದ್ಯಾನಿಲಯದ ಮೆಸ್‌ನಲ್ಲಿ ಮಾಂಸಾಹಾರಿ ಆಹಾರವನ್ನು ನೀಡುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನ ವಿದ್ಯಾರ್ಥಿಗಳು ವಿರೋಧಿಸಿದ್ದರು. ಇದಾದ ಬಳಿಕ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಮಾರಾಮಾರಿ ನಡೆದಿತ್ತು. ಈ ಘಟನೆಯ ನಂತರ ವಿಡಂಬನೆಯ ಲೇಖನವೊಂದು ಪ್ರಸಾರವಾಗಿದ್ದು ಅದರಲ್ಲಿ ಮಹಾಶಿವರಾತ್ರಿಯಂದು ಹುಲಿಗಳಿಗೆ ಮಾಂಸಾಹಾರ ನೀಡಿದ್ದಕ್ಕಾಗಿ ಮೃಗಾಲಯದ ಮೇಲೆ ಎಬಿವಿಪಿ ದಾಳಿ ನಡೆಸಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಿಚ್ಚ ಸುದೀಪ್ ಬರಿಕೈಯಲ್ಲಿ ತೆಂಗಿನಕಾಯಿ ಒಡೆದು ಚೂರ್ ಚೂರ್ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights