FACT CHECK | ಕರ್ತವ್ಯ ನಿರತ ಪೊಲೀಸರು BJP ನಾಯಕನ ಕಾಲಿಗೆ ನಮಸ್ಕರಿಸಿದ್ದಾರೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?
ಕರ್ತವ್ಯ ನಿರತ ಕರ್ನಾಟಕ ಪೊಲೀಸರು ಕಾರಿನಲ್ಲಿ ಕುಳಿತಿರುವ ವ್ಯಕ್ತಿಯೊಬ್ಬನಿಗೆ ಕಾಲಿಗೆ ಬೀಳುವ ವಿಡಿಯೋ ವೈರಲ್ ಆಗಿದೆ. ಕಾಲಿಗೆ ಬೀಳಿಸಕೊಡ ವ್ಯಕ್ತಿ BJP ನಾಯಕನ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವು ಪೊಲೀಸರು ರಸ್ತೆ ಮಧ್ಯೆ ಕಾರೊಂದನ್ನು ತಪಾಸಣೆಗೆ ಅಡ್ಡ ಹಾಕುತ್ತಾರೆ. ಆ ಬಳಿಕ ಕಾರಿನಲ್ಲಿ ಕುಳಿತಿರುವ ವ್ಯಕ್ತಿಯ ಕಾಲಿಗೆ ಸಾಲಾಗಿ ಬಂದು ಬೀಳುತ್ತಾರೆ. ಜತೆಗೆ ಆ ವ್ಯಕ್ತಿ ನೀಡುವ ಹಣವನ್ನು ಪಡೆದುಕೊಳ್ಳುತ್ತಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರು, ಪೊಲೀಸರು ಯಾರ ಕಾಲಿಗೆ ಬೀಳುತ್ತಿದ್ದಾರೋ ಅವರು ರಾಜಕಾರಣಿ. ಕೊಟ್ಟ ಹಣ ಭಕ್ಷೀಸು ಎಂದು ಹೇಳಿದ್ದಾರೆ.
नेताओं के चरणों में शीष झुकाते ऐसे ही बिकें हुए इंसानों की वजह से वर्दी को शर्मशार होना पड़ता हैं!
ऐसे लोगों को वर्दी पहनने का कोई अधिकार नहीं है… pic.twitter.com/ODfBiVoHtG
— Vivek Singh paliwal (Modi Ka Parivar) (@viveksing342) March 24, 2025
ಇದೇ ರೀತಿ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಬಳಕೆದಾರರು,*ಕರ್ನಾಟಕವನ್ನು ನೋಡಿ ಕಲಿಯಿರಿ ದೃಶ್ಯ ಎಷ್ಟು ಚಂದ, ಬಿಜೆಪಿ ಪಾದ ನೆಕ್ಕುತ್ತಿರುವ ಕಾಂಗ್ರೆಸ್ ಸರ್ಕಾರದ ಪೊಲೀಸರು ಎಂಬ ಬರಹದೊಂದಿಗೆ ಪೋಸ್ಟ್ ಮಾಡಿದ್ದಾರೆ. ಕಾಲಿಗೆ ಬೀಳಿಸಿಕೊಂಡ ವ್ಯಕ್ತಿಯು ನಾನು ಆ ರೀತಿಯ ಸ್ವಾಮೀಜಿ ಅಲ್ಲ ಎಂದು ಹೇಳಿರುವುದು ಕೇಳಿಸುತ್ತದೆ. ಹಣ ನೀಡಿ ಇದ್ದನ್ನು ಖರ್ಚು ಮಾಡದೇ ಹುಂಡಿಯಲ್ಲಿಟ್ಟು ಪೂಜೆ ಮಾಡಿ ಎಂದು ಹೇಳುತ್ತಾರೆ.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯಂತೆ, ಕರ್ತವ್ಯ ನಿರತ ಪೊಲೀಸರು BJP ನಾಯಕನ ಕಾಲಿಗೆ ನಮಸ್ಕರಿಸಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಬಾಗಲಕೋಟೆ ಜಿಲ್ಲೆಯ 6 ಪೊಲೀಸ್ ಸಿಬ್ಬಂದಿ ಸ್ಥಳೀಯ ಮಠದ ಸಿದ್ಧನಕೊಳ್ಳ ಸ್ವಾಮೀಜಿಗೆ ಕಾಲಿಗೆ ಬಿದ್ದಿದ್ದಾರೆ. ಆ ವಿಡಿಯೋ ವೈರಲ್ ಬೆನ್ನಲ್ಲೆ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿದೆ.
![]()
2025ರ ಮಾರ್ಚ್ 14 ರಂದು ಮುಖ್ಯವಾಹಿನಿ ಮಾಧ್ಯವಾದ ಕನ್ನಡ ಪ್ರಭ ವೆಬ್ಸೈಟ್ ನಲ್ಲಿ ಲಭ್ಯವಾದ ವರದಿಯ ಪ್ರಕಾರ, ಕರ್ನಾಟಕದ ಬಾದಾಮಿ ಜಿಲ್ಲೆಯಲ್ಲಿ ಆರು ಪೊಲೀಸ್ ಸಿಬ್ಬಂದಿ ಸ್ವಾಮೀಜಿಯವರ ಕಾಲಿಗೆ ಬಿದ್ದು ಹಣ ಪಡೆದಿದ್ದಾರೆ. ಇದಕ್ಕೆ ಜನರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಆ ಆರು ಪೊಲೀಸ್ ಸಿಬ್ಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲು ಆದೇಶಿಸಿದ್ದಾರೆ ಎಂದು ತಿಳಿದುಬಂದಿತು.
ಮುಂದುವರೆದು, ಟಿವಿ 9 ಕನ್ನಡ ಈ ಬಗ್ಗೆ ಸುದ್ದಿ ಪ್ರಕಟಿಸಿದೆ. ಟಿವಿ 9 ಯುಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹಾಕಲಾಗಿದೆ. ಇದರಲ್ಲಿ ಸ್ವತಃ ಸಿದ್ಧನಕೊಳ್ಳ ಸ್ವಾಮೀಜಿಯವರು ಸ್ಪಷ್ಟನೆ ನೀಡಿದ್ದಾರೆ. ಕಾಲಿಗೆ ಬಿದ್ದ ಭಕ್ತರು ನಮ್ಮ ಮಠದ ಭಕ್ತರು. ಧರ್ಮ ಪಾಲನೆಗೆ ಸ್ವಾಮೀಜಿಯಾದ ನನಗೆ ಕಾಲಿಗೆ ಬಿದ್ದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಲೀಸರು BJP ನಾಯಕನ ಕಾಲಿಗೆ ಬಿದ್ದು ಹಣ ಪಡೆದರು ಎಂಬ ವಿಡಿಯೋ ಸುಳ್ಳು. ವಾಸ್ತವವಾಗಿ ಪೊಲೀಸರು ರಾಜಕಾರಣಿಯ ಕಾಲಿಗೆ ಬಿದ್ದಿಲ್ಲ, ಬದಲಿಗೆ ಸ್ವಾಮೀಜಿಯ ಕಾಲಿಗೆ ಬಿದ್ದಿದ್ದಾರೆ. ಈ ಕಾರಣದಿಂದಾಗಿ ಆರು ಜನ ಪೊಲೀಸ್ ಸಿಬ್ಬಂದಿಯನ್ನು ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಕಾರಿನಲ್ಲಿ ಇದ್ದ ವ್ಯಕ್ತಿ ರಾಜಕಾರಣೆಯೂ ಅಲ್ಲ. ಬಿಜೆಪಿಯ ನಾಯಕನು ಅಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ‘ಗೋ ಬ್ಯಾಕ್ ಗ್ರೋಕ್’ ಎಂದು ಪೋಸ್ಟ್ರ್ ಹಿಡಿದು ಅಣ್ಣಾಮಲೈ ಪ್ರತಿಭಟಿಸಿದ್ದು ನಿಜವೇ?

