FACT CHECK | ಬಾಲಕನೊಬ್ಬ ಹುಲಿಯ ಬೋನಿಗೆ ಬೀಳುವ ವಿಡಿಯೋದ ಅಸಲೀಯತ್ತೇನು?
ಮೃಗಾಲಯದ ಗೇಟ್ ಮೇಲೆ ಕುಳಿತಿದ್ದ ಮಗುವೊಂದು ಹುಲಿಯ ಬೋನಿಗೆ ಜಿಗಿಯುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗು ಯಾವುದೇ ಭಯವಿಲ್ಲದೆ ಹುಲಿಯ ಸಮೀಪಕ್ಕೆ ಹೋಗಿ ಮುಟ್ಟುವುದನ್ನು ನೋಡಬಹುದು.
त्योहारों की छुट्टियां पारिवारिक समारोहों का समय होती हैं, आमतौर पर पर्यटन के लिए, जिनमें से एक है जंगली और पालतू दोनों तरह के जानवरों को देखना, लेकिन फिर भी आपको सावधान रहना होगा !! pic.twitter.com/nFlvpkR5LX
— MANOJ SHARMA LUCKNOW UP (@ManojSh28986262) April 1, 2025
ಹಬ್ಬ ಮತ್ತು ಬೇಸಿಗೆ ರಜಾದಿನಗಳಲ್ಲಿ ಪ್ರವಾಸಕ್ಕೆಂದು ಹೋಗುವುದು ಸಹಜ, ಆದರೆ ಮೃಗಾಲಯದಂತಹ ಸ್ಥಳಗಳಿಗೆ ಹೋದಾಗ ಕಾಡುಪ್ರಾಣಿಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಪ್ರತಿಪಾದಿಸಿ ಮನೋಜ್ ಶರ್ಮ ಎಂಬ ಎಕ್ಸ್ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಮೃಗಾಲಯದ ಗೋಡೆಯ ಮೇಲೆ ಬಾಲಕನೊಬ್ಬ ಕುಳಿತು ಅಚಾನಕ್ಕಾಗಿ ಹುಲಿಗಳ ಗುಂಪಿರುವ ಜಾಗದಲ್ಲಿ ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರಲ್ಲಿರುವ ಕೆಲವು ಲೋಪಗಳು ಗೋಚರಿಸುವುದನ್ನು ಕಾಣಬಹುದು.
ಮೊದಲನೆಯದಾಗಿ ಗೋಡೆಯ ಮೇಲಿಂದ ಬೀಳುವ ಮಗು ಕೆಳಗೆ ಬೀಳುವಷ್ಟರಲ್ಲಿ ಯಾವುದೇ ಗಾಯಗಳಾಗದೆ, ಗಾಬರಿಯಾಗದೆ, ಆತಂಕವಿಲ್ಲದೆ ಕುಳಿತಿರುವಂತೆ ಕಾನುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಇದೇ ಸಂದರ್ಭದಲ್ಲಿ ಮಗು ಮತ್ತು ಹುಲಿಯ ಮುಖಭಾವದಲ್ಲಿ ಕಂಡುಬರುವ ಅಸಹಜ ಲಕ್ಷಗಳನ್ನು ಗುರುತಿಸಬಹುದು.
ನಂತರ ನಾವು AI ಫೋಟೊ ಪತ್ತೆ ಮಾಡುವ ಉಪಕರಣ ಹೈವ್ ಮಾಡರೇಶನ್ ಬಳಸಿಕೊಂಡು ವೈರಲ್ ವೀಡಿಯೊವನ್ನು ಪರಿಶೀಲಿಸಿದಾಗ, ವೈರಲ್ ಚಿತ್ರವು AI ನಿಂದ ರಚಿತವಾದ ನಕಲಿ ವಿಡಿಯೋ ಆಗಿರುವುದು ಸ್ಪಷ್ಟವಾಗಿದೆ.
![]()
ಅದರ ನಂತರ ನಾವು ವೈರಲ್ ವೀಡಿಯೊಗೆ ಸಂಬಂಧಿಸಿದ ಇತರ ವೀಡಿಯೊಗಳನ್ನು ಸರ್ಚ್ ಮಾಡಲು ಪ್ರಾರಂಭಿಸಿದ್ದೇವೆ. ಅದರ ನಂತರ ನಾವು ಆಕ್ಟಿಕುಲಂ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವಿಡಿಯೋ ಕಂಡುಬಂದಿದೆ. ಈ ವಿಡಿಯೋವನ್ನು ಅಪ್ಲೋಡ್ ಮಾಡುವಾಗ ವೈರಲ್ ಆಗಿರುವ ವಿಡಿಯೋವನ್ನು ಡಿಜಿಟಲ್ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಮಗುವೊಂದು ಹುಲಿ ಗುಂಪುಗಳ ನಡುವೆ ಸಿಕ್ಕಿಹಾಕಿಕೊಳ್ಳುವ ವಿಡಿಯೋ AI (ಕೃತಕ ಬುದ್ದಿಮತ್ತೆ)ನಿಂದ ರಚಿಸಲ್ಪಟ್ಟಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಚೀನಾದ ಮಹಾಗೋಡೆ ಕುಸಿದು ಬೀಳುವ ವಿಡಿಯೋದ ಅಸಲೀಯತ್ತೇನು ಗೊತ್ತೇ?

