FACT CHECK | ತಹವ್ವೂರ್ ರಾಣಾ ಬಗ್ಗೆ ಡಿಂಪಲ್ ಯಾದವ್ ಅವರ ಹೇಳಿಕೆ ಎಂದು ಸುಳ್ಳು ಪೋಸ್ಟ್ ಹಂಚಿಕೆ
ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹಾವೂರ್ ರಾಣಾನನ್ನು 17 ವರ್ಷಗಳ ನಂತರ ಭಾರತಕ್ಕೆ ಕರೆತರಲಾಯಿತು. ಭಾರತಕ್ಕೆ ಬಂದ ಕೂಡಲೇ ಎನ್‌ಐಎ ಆತನನ್ನು ಬಂಧಿಸಿ ಪಟಿಯಾಲ ನ್ಯಾಯಾಲಯದಲ್ಲಿ ಹಾಜರುಪಡಿಸಿತು. ನ್ಯಾಯಾಲಯವು ರಾಣಾನನ್ನು 18 ದಿನಗಳ ಕಾಲ NIA ವಶಕ್ಕೆ ನೀಡಿದೆ. ತಹವ್ವೂರ್ ರಾಣಾ ಭಾರತಕ್ಕೆ ಬಂದ ಬಗ್ಗೆ ಅನೇಕ ರಾಜಕಾರಣಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಏತನ್ಮಧ್ಯೆ, ಈ ವಿಷಯದ ಬಗ್ಗೆ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಪ್ರತಿಕ್ರಿಯೆಯ ಫೋಟೋ ವೈರಲ್ ಆಗುತ್ತಿದೆ. ಅದರಲ್ಲಿ ಭಾರತ ಮಾತೆಯನ್ನು ಅವಮಾನಿಸಲು ಪ್ರಯತ್ನಿಸುವವರನ್ನು ಕಾನೂನಿನ ವ್ಯಾಪ್ತಿಗೆ ತರಲಾಗುವುದು ಮತ್ತು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುವುದು. ಯುಪಿಎ ಸರ್ಕಾರ ಕಸಬ್‌ನನ್ನು ಹಲವು ವರ್ಷಗಳ ಕಾಲ ಕುಳಿತು ಬಿರಿಯಾನಿ ತಿನ್ನಿಸಿತು.ಮೋದಿ ಸರ್ಕಾರದಲ್ಲಿ ಭಯೋತ್ಪಾದಕರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಡಿಂಪಲ್ ಯಾದವ್ ಹೇಳಿದ್ದಾರೆ ಎಂದು ಸಚಿನ್ ಯಾದವ್ ಗಗನ್‌ದೀಪ್ ಎಂಬ ಫೇಸ್‌ಬುಕ್ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಅದಾದ ನಂತರ, ಸೌರಭ್ ಸಿಂಗ್ ಎಂಬ ಫೇಸ್‌ಬುಕ್ ಬಳಕೆದಾರರು ಡಿಂಪಲ್ ಯಾದವ್ ಅವರ ಫೋಟೋವನ್ನು ಹಂಚಿಕೊಳ್ಳುವಾಗ ಅದೇ ಹೇಳಿಕೆಯನ್ನು ನೀಡಿದ್ದಾರೆ.ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಪ್ರತಿಪಾದಿಸಿರುವಂತೆ ಸಮಾಜವಾದಿ ಸಂಸದೆ ಡಿಂಪಲ್ ಯಾದವ್ ಭಯೋತ್ಪಾದಕರ ಕುರಿತು ಮೋದಿ ಪರವಾಗಿ ಮಾತನಾಡಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಮೋದಿ ಪರವಾಗಿ ಮಾತನಾಡಿರುವುದು ನಿಜವೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಡಿಂಪಲ್ ಯಾದವ್ ಈ ರೀತಿ ಯಾವ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿದುಬಂದಿದೆ. ವಾಸ್ತವವಾಗಿ, ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತಂದ ಬಗ್ಗೆ, ಡಿಂಪಲ್ ಯಾದವ್ ಅವರು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ, ಇದು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯ ಮತ್ತು ಇದರಲ್ಲಿ ರಾಜಕೀಯ ಮಾಡದಿರುವುದು ಉತ್ತಮ ಎಂದು ಹೇಳಿದ್ದರು. ಡಿಂಪಲ್ ಯಾದವ್ ಅವರ ಈ ಹೇಳಿಕೆಯ ವೀಡಿಯೊವನ್ನು ANI ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.
#WATCH | मैनपुरी, उत्तर प्रदेश: समाजवादी पार्टी सांसद डिंपल यादव ने 26/11 मुंबई हमलों के आरोपी तहव्वुर राणा के भारत प्रत्यर्पण पर कहा, ‘‘मुझे उम्मीद है कि कठोर कार्रवाई की जाएगी… यह राष्ट्र से जुड़ा मामला है और इस पर राजनीति न की जाए तो बेहतर होगा।’’ pic.twitter.com/nquJac7rmy
— ANI_HindiNews (@AHindinews) April 10, 2025
ಅವರ ಹೆಸರಿನಲ್ಲಿ ವೈರಲ್ ಆಗುತ್ತಿರುವ ಹೇಳಿಕೆಯ ಬಗ್ಗೆ ತನಿಖೆ ನಡೆಸಿದಾಗ, ಈ ಹೇಳಿಕೆಯನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಗುರುವಾರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಎಎನ್‌ಐ ಅವರು ಎಕ್ಸ್‌ನಲ್ಲಿ ನೀಡಿದ ಹೇಳಿಕೆಯ ವೀಡಿಯೊವನ್ನು ಸಹ ಪೋಸ್ಟ್ ಮಾಡಿದೆ.
#WATCH लखनऊ: उत्तर प्रदेश के उपमुख्यमंत्री ब्रजेश पाठक ने 26/11 मुंबई हमलों के आरोपी तहव्वुर राणा के भारत प्रत्यर्पण पर कहा, “जो व्यक्ति भारत माता को नीचा दिखाने का प्रयास करेगा, उसे कानून के दायरे में लाकर प्रधानमंत्री मोदी की अगुवाई में कड़ी से कड़ी सजा दी जाएगी… UPA की… pic.twitter.com/hfRDLMiyMs
— ANI_HindiNews (@AHindinews) April 10, 2025
26/11 ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಭಾರತ ಮಾತೆಯನ್ನು ಅವಮಾನಿಸಲು ಪ್ರಯತ್ನಿಸುವ ಯಾರನ್ನಾದರೂ ಕಾನೂನಿನ ವ್ಯಾಪ್ತಿಗೆ ತರಲಾಗುವುದು ಮತ್ತು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿದರು. ಯುಪಿಎ ಸರ್ಕಾರ ಕಸಬ್‌ನನ್ನು ಹಲವು ವರ್ಷಗಳ ಕಾಲ ಕುಳಿತು ಬಿರಿಯಾನಿ ತಿನ್ನಿಸಿತು. ನಮ್ಮ ಸರ್ಕಾರದ ಅಡಿಯಲ್ಲಿ ಭಯೋತ್ಪಾದಕರ ನೈತಿಕ ಸ್ಥೈರ್ಯ ಕುಗ್ಗಿದೆ. ಎಂಬ ಹೇಳಿಕೆಯನ್ನು ಬ್ರಜೇಶ್ ಪಾಠಕ್ ನೀಡಿದ್ದಾರೆ. ಹಾಗಾಗಿ ಈ ಹೇಳಿಕೆ ಸಮಾಜವಾದಿ ಸಂಸದೆ ಡಿಂಪಲ್ ಯಾದವ್ ಅವರದ್ದು ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹಾವೂರ್ ರಾಣಾ ಬಗ್ಗೆ ವೈರಲ್ ಆಗುತ್ತಿರುವ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಹೇಳಿಕೆ ನಕಲಿ. ಅವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಬಳಕೆದಾರರು ಅವರ ಹೆಸರಿನಲ್ಲಿ ನಕಲಿ ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ತೆರಿಗೆದಾರರಿಗೆ ಕೇಂದ್ರ ಸರ್ಕಾರ ಉಚಿತ ಯೋಜನೆಗಳನ್ನು ಜಾರಿ ಮಾಡಿದೆ ಎಂದು ನಕಲಿ ವಿಡಿಯೋ ಹಂಚಿಕೆ

