FACT CHECK | ಆಸ್ತಿಗಾಗಿ ತನ್ನ ಸ್ವಂತ ಮಗಳನ್ನೆ ಮದುವೆಯಾದನೇ 80ರ ವೃದ್ದ?

ವೃದ್ದ ಮತ್ತು ಯುವತಿ ತಮ್ಮ ಕೊರಳಿಗೆ ಹೂ ಮಾಲೆ ಹಾಕಿಕೊಂಡು ಮದುವೆಯಾದವರಂತೆ ನಿಂತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. 80 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಮಗಳನ್ನೇ ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.

@yusufkhanAimim ಎಂಬ ಎಕ್ಸ್‌ ಖಾತೆಯ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದು. “ನಮ್ಮ ಊರಿನಲ್ಲಿ ಒಬ್ಬ ಅಂಕಲ್ ಇದ್ದಾರೆ. ಅವರಿಗೆ 80 ವರ್ಷ ವಯಸ್ಸು. ಅವರು 23 ವರ್ಷದ ತಮ್ಮ ಮಗಳನ್ನು ಮದುವೆಯಾಗಿದ್ದಾರೆ. ಏಕೆ ಹೀಗೆ ಎಂದು ಊರಿನವರು ಕೇಳಿದಾಗ, ನನ್ನ ಹೆಂಡತಿ ತೀರಿಕೊಂಡು 2 ವರ್ಷವಾಯಿತು. ನನ್ನ ಮಗಳು ಬೇರೆಯವರ ಮನೆಗೆ ಹೋಗುವುದು ನನಗೆ ಇಷ್ಟವಿಲ್ಲ. ಮನೆಯ ಆಸ್ತಿ ಮನೆಯಲ್ಲೇ ಇರಲಿ ಎಂದು ಅವರು ಹೇಳಿದರು” ಎಂದು ಬರೆದಿದ್ದಾರೆ. ಈ ಎಕ್ಸ್‌ ಬಳಕೆದಾರರಲ್ಲದೆ, ಅನೇಕರು ಈ ಫೋಟೋ, ವಿಡಿಯೋಗಳನ್ನು ಬೇರೆ ಬೇರೆ ಹೇಳಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

80 ವರ್ಷದ ವೃದ್ದ ಆಸ್ತಿಗಾಗಿ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾನೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ವೈರಲ್  ಫೋಟೋವನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲಿಸಿದಾಗ, 2023 ರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಪೋಸ್ಟ್‌ವೊಂದು ಲಭ್ಯವಾಗಿದೆ. ಆ ಪೋಸ್ಟ್‌ನಲ್ಲಿ ವೈರಲ್ ಫೋಟೋಗೆ ಸಂಬಂಧಿಸಿದ ವಿಡಿಯೋ ಕಂಡುಬಂದಿದೆ. ಆ ವಿಡಿಯೋದಲ್ಲಿ “ಇದು ಮನರಂಜನೆಗಾಗಿ ಮಾಡಿದ್ದು” ಎಂದು ಬರೆಯಲಾಗಿತ್ತು.

 

View this post on Instagram

 

A post shared by ❤️❤️❤️ (@factz_shorts001)

ನಂತರ, ವಿಡಿಯೋಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ, ಪ್ರಿನ್ಸ್ ವರ್ಮಾ ಅವರ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ವೈರಲ್ ವಿಡಿಯೋ ಒಂದು ಸಿಕ್ಕಿತು. ಈ ವಿಡಿಯೋವನ್ನು 2022 ರಲ್ಲಿ ಈ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಪ್ರಿನ್ಸ್ ವರ್ಮಾ ಅವರ ಫೇಸ್‌ಬುಕ್ ಪುಟಕ್ಕೆ ಹೋದಾಗ, ಅವರು ಒಬ್ಬ ಕಲಾವಿದ ಎಂದು ತಿಳಿದುಬಂದಿದೆ. ಅವರು ಫೇಸ್‌ಬುಕ್‌ನಲ್ಲಿ ಈ ರೀತಿಯ ಸ್ಕ್ರಿಪ್ಟೆಡ್ ( ಮನೋರಂಜನೆಗೆ ರಚಿಸಿದ) ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 80ರ ಮುದುಕ ತನ್ನ ಸ್ವಂತ ಮಗಳನ್ನೆ ಮದುವೆಯಾಗಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಮನೋರಂಜನೆಗೆಂದು ರಚಿಸಿದೆ ಎಂದು ವಿಡಿಯೋದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಘಟನೆ ಪಶ್ಚಿಮ ಬಂಗಾಳದ್ದು ಅಲ್ಲ, ವ್ಯಕ್ತಿ ಮುಸಲ್ಮಾನನು ಅಲ್ಲ! ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights