FACT CHECK | “ತಂದೆಯ ಶವಕ್ಕೆ ಮಗ ಮುತ್ತಿಟ್ಟು ವಿದಾಯ ಹೇಳುತ್ತಿರುವ” ಫೋಟೊ ಉಗ್ರರ ದಾಳಿಗೆ ಬಲಿಯಾದ ಸೈಯದ್ ಆದಿಲ್ ಹುಸೇನ್ ಶಾ ಅವರದ್ದೇ?
ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾಗ, ಸೈಯದ್ ಆದಿಲ್ ಹುಸೇನ್ ಶಾ ಪ್ರವಾಸಿಗರಿಗೆ ಕುದುರೆ ಸವಾರಿ ಮಾಡಿಸುತ್ತಿದ್ದ. ಈ ವೇಳೆ ಅವರ ಬಳಿ ಬಂದ ಉಗ್ರರ ಬಳಿ ರೈಫಲ್ ಕಿತ್ತುಕೊಳ್ಳುವ ಮೂಲಕ ಪ್ರವಾಸಿಗರನ್ನು ರಕ್ಷಿಸಲು ಮುಂದಾದ, ಇದರಿಂದಾಗಿ ಕುಪಿತಗೊಂಡ ಉಗ್ರರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ, ಅದರಲ್ಲಿ ಚಿಕ್ಕ ಮಗುವೊಂದು ತನ್ನ ಮೃತ ತಂದೆಯ ಹಣೆಗೆ ಮುತ್ತಿಡುತ್ತಿರುವುದು ಕಂಡುಬರುತ್ತದೆ. ಈ ಫೋಟೋವನ್ನು ಪಹಲ್ಗಾಮ್ ನಾಯಕ ಸೈಯದ್ ಆದಿಲ್ ಹುಸೇನ್ ಶಾ ಅವರದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ, ಅವರ ಮಗ ಅವರಿಗೆ ಕೊನೆಯ ವಿದಾಯ ಹೇಳುತ್ತಿದ್ದಾನೆ. ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ये तस्वीर आपको अंदर से झकझोर देगी,
ये शव है पहलगाम के जांबाज और बहादुर सैयद आदिल हुसैन शाह का जो अपने हिन्दू टूरिस्टों की की जान बचाने के लिए आतंकवादी से निहत्थे अकेले भिड़ गया और उसकी बंदूक छीन ली,और अकेले लड़ते हुए अपनी जान कुर्बान कर दी
मीडिया और बीजेपी IT सेल ने सैयद आदिल… pic.twitter.com/fqyxZ1vOEd
— बघीरा (@LegalAdvisour) April 23, 2025
ಬಘೀರಾ ಎಂಬ ಎಕ್ಸ್ ಬಳಕೆದಾರರು ಫೋಟೊವನ್ನು ಹಂಚಿಕೊಂಡಿದ್ದು, ‘ಈ ಚಿತ್ರ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ’ ಎಂದು ಬರೆದಿದ್ದಾರೆ. ಇದು ಪಹಲ್ಗಾಮ್‌ನ ಕೆಚ್ಚೆದೆಯ ಮತ್ತು ಧೈರ್ಯಶಾಲಿ ವ್ಯಕ್ತಿ ಸೈಯದ್ ಆದಿಲ್ ಹುಸೇನ್ ಷಾ ಅವರ ದೇಹ, ಅವರು ತಮ್ಮ ಹಿಂದೂ ಪ್ರವಾಸಿಗರ ಜೀವಗಳನ್ನು ಉಳಿಸಲು ಭಯೋತ್ಪಾದಕರೊಂದಿಗೆ ಒಂಟಿಯಾಗಿ ಮತ್ತು ನಿರಾಯುಧವಾಗಿ ಹೋರಾಡಿದರು. ಏಕಾಂಗಿಯಾಗಿ ಹೋರಾಡುತ್ತಾ, ಬಂದೂಕನ್ನು ಕಸಿದುಕೊಂಡು ತನ್ನ ಪ್ರಾಣವನ್ನೇ ತ್ಯಾಗ ಮಾಡಿದನು. ಫೋಟೋದಲ್ಲಿ, ಮಗ ತನ್ನ ಹುತಾತ್ಮ ತಂದೆಯ ಹಣೆಗೆ ಮುತ್ತಿಡುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.
ये तस्वीर आपको अंदर से झकझोर देगी, ये शव पहलगाम के जांबाज बहादुर सैयद आदिल हुसैन शाह का है.फोटो में अपने शहीद बाप की पेशानी चूमता हुआ उसका बेटा सैयद आदिल हुसैन शाह जो अपने हिन्दू टूरिस्टों की की जान बचाने के लिए आतंकवादी से निहत्थे अकेले भिड़ गये और शहीद हो गए! pic.twitter.com/9vlIS73FJ3
— amit mishra (@amitmishrainn) April 24, 2025
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು “ಇದು ಪಹಲ್ಗಾಮ್‌ನ ಜಂಬಾಜ್ ಮತ್ತು ಬಹದ್ದೂರ್ ಸೈಯದ್ ಆದಿಲ್ ಹುಸೇನ್ ಷಾ ಅವರ ಮೃತ ದೇಹ, ಅವರು ತಮ್ಮ ಹಿಂದೂ ಪ್ರವಾಸಿಗರ ಜೀವಗಳನ್ನು ಉಳಿಸಲು, ಭಯೋತ್ಪಾದಕನನ್ನು ನಿರಾಯುಧವಾಗಿ ಎದುರಿಸಿ ಅವನ ಬಂದೂಕನ್ನು ಕಸಿದುಕೊಂಡು, ಏಕಾಂಗಿಯಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.” ಇದೇ ಹೇಳಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಮನಕಲಕುವ ದೃಶ್ಯ ಪಹಲ್ಗಾಮ್ ಘಟನೆಗೆ ಸಂಬಂಧಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಫೇಸ್‌ಬುಕ್‌ನಲ್ಲಿ ಕೆಲವು ಪೋಸ್ಟ್‌ಗಳು ಲಭ್ಯವಾಗಿದೆ. ಅಲ್ಲಿ ಈ ಫೋಟೋವನ್ನು ಬಹಳ ಹಿಂದೆಯೇ ಅಪ್‌ಲೋಡ್ ಮಾಡಲಾಗಿದೆ. ಈ ಪೋಸ್ಟ್‌ನ ತನಿಖೆಯಿಂದ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ವೈರಲ್ ಆಗುತ್ತಿರುವ ಫೋಟೋ ತುಂಬಾ ಹಳೆಯದು ಎಂದು ತಿಳಿದುಬಂದಿದೆ.
![]()
ಗೂಗಲ್ ಸರ್ಚ್ ಮಾಡಿದಾಗ, ಏಪ್ರಿಲ್ 8, 2025 ರಂದು ಅಲ್ ಅರಬ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಈ ಫೋಟೋವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ಆದಾಗ್ಯೂ, ಈ ಪೋಸ್ಟ್‌ನಲ್ಲಿ ಈ ಫೋಟೋವನ್ನು ಯಾವಾಗ ಮತ್ತು ಎಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿಲ್ಲ. ಫೆಬ್ರವರಿ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಮುಂಚೆಯೇ ಈ ಚಿತ್ರ ಅಂತರ್ಜಾಲದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
![]()
ಇದಲ್ಲದೆ, ಕಳೆದ 6 ತಿಂಗಳಿನಿಂದ ಕೆಲವು ಫೇಸ್‌ಬುಕ್ ಪುಟಗಳಲ್ಲಿ ಇದೇ ಚಿತ್ರವನ್ನು ಅಪ್‌ಲೋಡ್ ಮಾಡಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸುತ್ತಿದ್ದ ವೇಳೆ, ಪ್ರವಾಸಿಗರ ಸಹಾಯಕ್ಕೆ ಮುಂದಾದಾಗ ಭಯೋತ್ಪಾದಕರು ಹತ್ಯೆ ಮಾಡಿದ ಕುದುರೆ ಸವಾರಿ ಮಾಡಿಸುತ್ತಿದ್ದ ಸೈಯದ್ ಆದಿಲ್ ಹುಸೇನ್ ಶಾ ಅವರ ಹಣೆಗೆ ಮಗ ಮುತ್ತಿಡುತ್ತಿರುವ ಮನಕಲಕುವ ಚಿತ್ರ ಎಂದು, ಯಾವುದೋ ಹಳೆಯ ಫೋಟೊವನ್ನು ಸಾಮಾಜಿಕ ಮಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು ಎಂದು ತಿಳಿದುಬಂದಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ನಜಾಕತ್ ಅಲಿ ಎಂಬ ಬಟ್ಟೆ ವ್ಯಾಪಾರಿ 11 ಪ್ರವಾಸಿಗರನ್ನು ರಕ್ಷಿಸಿದ್ರಾ?

