FACT CHECK | ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ದಾಳಿ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ದಾಳಿ ಮಾಡಿ ನೆಲ್ಕೆ ಬೀಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಅಧಿಕಾರಿಗಳಿಂದ ಸುತ್ತುವರೆದಿರುವ ಕಟ್ಟಡದಿಂದ ಶಾ ಹೊರಬರುವಾಗ ಕೋತಿಯೊಂದು ಅವರ ಮೇಲೆ ದಾಳಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

@Minniie_Mehra ಎಂಬ ಎಕ್ಸ್‌ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಕೇಂದ್ರ ಗೃಹ ಸಚಿವರಿಗಿರುವ Z+, ಸೆಕ್ಯೂರಿಟಿ ಇರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ರಕ್ಷಿಸಬೇಕಾದ ಸಿಬ್ಬಂದ್ದಿ ತಮ್ಮನ್ನೆ ರಕ್ಷಿಸಿಕೊಳ್ಳಲು ಹೋಗುತ್ತಿರುವುದನ್ನು ನೋಡಿದರೆ, ಈ ದೇಶದ ಸಾಮಾನ್ಯರ ಗತಿ ಏನು? ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೊಸ್ಟ್‌ಅನ್ನು ಹಂಚಿಕೊಂಡಿದ್ದು ಇದರ ಸತ್ಯಾಸತ್ಯೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌  :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲಿಸಲು ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಅಮಿತ್ ಶಾ ಮೇಲೆ ಕೋತಿ ದಾಳಿ ಮಾಡಿರುವ ಬಗ್ಗೆ ಯಾವುದೇ ವರದಿಗಳಿವೆಯೇ ಎಂದು ಪರಿಶೀಲಿಸಲು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

 

ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಹಲವಾರು ವಿಲಕ್ಷಣ ಅಂಶಗಳು ಕಂಡು ಬಂದವು. ಉದಾಹರಣೆಗೆ, ಒಂದು ಫ್ರೇಮ್‌ನಲ್ಲಿ, ಪೊಲೀಸ್ ಅಧಿಕಾರಿಯ ಕೈ ಕಣ್ಮರೆಯಾಗುತ್ತದೆ ಮತ್ತು ಕೋತಿಯ ಜಿಗಿತದ ಸಮಯದಲ್ಲಿ ಗುಂಪಿನ ಚಲನೆಯು ಅಸ್ವಾಭಾವಿಕ ಮತ್ತು ವಿಚಿತ್ರವಾಗಿ ಕಾಣುತ್ತದೆ. ಹೀಗಾಗಿ ಇದು ಡೀಪ್‌ಫೇಕ್ ಅಥವಾ AI-ನಿಂದ ರಚಿತವಾಗಿರುವ ಸಾದ್ಯತೆ ಹೆಚ್ಚಾಗಿದೆ.

 

ವೀಡಿಯೊ ಡೀಪ್‌ಫೇಕ್ ಆಗಿದೆಯೇ ಎಂದು ಪರಿಶೀಲಿಸಲು, ಅದರ ಮೊದಲ ಫ್ರೇಮ್ ಬಳಸಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಗ, 1 ಜೂನ್  2019 ರಂದು ವೈರಲ್‌ ಚಿತ್ರವನ್ನು ಪ್ರಕಟಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವುದು ಕಂಡು ಬಂದಿದೆ. ವೈರಲ್ ವಿಡಿಯೋದ ಮೊದಲ ಫ್ರೇಮ್ ಮತ್ತು ಆ ವರದಿಗಳಲ್ಲಿನ ಚಿತ್ರದ ನಡುವಿನ ಹೋಲಿಕೆಯಾಗಿವೆ. ಹೀಗಾಗಿ ಈ ವೈರಲ್‌ ವಿಡಿಯೋವಿನ ಒಂದು ಫ್ರೇಮ್‌ ಮತ್ತು ವರದಿ ಒಂದೇ ಘಟನೆಗೆ ಸಂಬಂಧಿಸಿದ್ದಾಗಿದೆ ಎಂಬುದು ಖಚಿತವಾಗಿದೆ.

ಈ ಘಟನೆ ಮತ್ತು ಘಟನೆಗೆ ಸಂಬಂಧಿಸಿದ ಇತರ ಫೋಟೋಗಳನ್ನು ಹಲವಾರು ಮಾಧ್ಯಮಗಳು ವರದಿ ಮಾಡಿವೆ ಅವರ ಪ್ರಕಾರ, ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಜೂನ್ 01, 2019 ರಂದು ಇದನ್ನು ತೆಗೆದುಕೊಳ್ಳಲಾಗಿದೆ. ಆ ದಿನ, ಅವರು ರಾಜ್ಯಪಾಲರು, ಕಿರಿಯ ಸಚಿವರು ಮತ್ತು ಬಿಜೆಪಿ ನಾಯಕರೊಂದಿಗೆ ಹಲವಾರು ಸಭೆಗಳನ್ನು ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿ ಮತ್ತು ಅಮರನಾಥ ಯಾತ್ರೆಯ ಸಿದ್ಧತೆಗಳ ಬಗ್ಗೆಯೂ ಅವರಿಗೆ ವಿವರಿಸಲಾಯಿತು. ಹಿರಿಯ ಅಧಿಕಾರಿಗಳು ಗೃಹ ಸಚಿವಾಲಯದ ಕಾರ್ಯಗಳು ಮತ್ತು ಮುಂಬರುವ ಸವಾಲುಗಳ ಅವಲೋಕನವನ್ನು ಅವರಿಗೆ ನೀಡಿದರು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಈ ವೈರಲ್‌ ಡೀಪ್‌ಫೇಕ್‌ ಆಗಿದೆಯೇ ಎಂದು ಪರಿಶೀಲನೆ ನಡೆಸಲು  ಡೀಪ್‌ಫೇಕ್-ಒ-ಮೀಟರ್ ಬಳಸಿ ಚೆಕ್ ಮಾಡಿದಾಗ, ಇದರ  ಫಲಿತಾಂಶಗಳು ವೀಡಿಯೊ AI-ರಚಿತವಾಗಿದೆ ಎಂದು ದೃಢಪಡಿಸಿತು. ಅಮಿತ್ ಶಾ ಅಧಿಕಾರಿಗಳೊಂದಿಗೆ ಗೃಹ ಸಚಿವಾಲಯಕ್ಕೆ 2019 ರಲ್ಲಿ ಭೇಟಿ ನೀಡಿದ ನಿಜವಾದ ಫೋಟೋ ಅಥವಾ ವೀಡಿಯೊವನ್ನು ಬಳಸಿಕೊಂಡು ಇದನ್ನು ರಚಿಸಲಾಗಿದೆ ಎಂಬುದು  ಖಚಿತವಾಗಿದೆ. ಮೂಲ ದೃಶ್ಯಗಳಲ್ಲಿ ಯಾವುದೇ ಕೋತಿ ದಾಳಿ ಮಾಡಿದ ಸನ್ನಿವೇಶ ಇರಲಿಲ್ಲ, ಹಾಗಾಗಿ ಈ ವೀಡಿಯೊ AI-ರಚಿತವಾಗಿದೆ ಎಂದು ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇಂದ್ರ ಸಚಿವ ಅಮಿತ್ ಶಾ ಅವರ ಮೇಲೆ ಕೋತಿಯೊಂದು ಹಾರಿರುವ ಈ ವೀಡಿಯೊ AI ಬಳಸಿ ರಚಿಸಲಾಗಿದೆ. ಮೂಲ ಫೋಟೋದಲ್ಲಿ ಕೋತಿ ಕಂಡು ಬಂದಿಲ್ಲ. ಹಾಗಾಗಿ ವೈರಲ್‌ ಫೋಟೋ AI ಬಳಸಿ ಎಡಿಟ್‌ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮದರಸಾ ಮಕ್ಕಳಿಗೆ ಹಿಂದೂ ವಿರೋಧಿ ಪಾಠವನ್ನು ಹೇಳಿಕೊಡಲಾಗುತ್ತಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights