FACT CHECK | ಅಸ್ಸಾಂ ಸರ್ಕಾರ1 ಸಾವಿರ ಎಕರೆ ಭೂಮಿಯನ್ನು ನೀಡಿದ್ದು ಅದಾನಿ ಗ್ರೂಪ್ ಒಡೆತನದ ಕಂಪನಿಗಲ್ಲ
ಇತ್ತೀಚೆಗೆ, ಅಸ್ಸಾಂನ ಗುವಾಹಟಿ ಹೈಕೋರ್ಟ್‌ನಿಂದ ಬಂದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಅವರು ಅಸ್ಸಾಂ ಸರ್ಕಾರವು ಖಾಸಗಿ ಸಿಮೆಂಟ್ ಕಂಪನಿಗೆ 3000 ಬಿಘಾ ಬುಡಕಟ್ಟು ಭೂಮಿಯನ್ನು ಮಂಜೂರು ಮಾಡಿದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಡಿಯೋದ ಆರಂಭದಲ್ಲಿ, ವಕೀಲರೊಬ್ಬರು ಮಹಾಬಲ್ ಸಿಮೆಂಟ್ ಕಂಪನಿಗೆ 3000 ಬಿಘಾ ಬುಡಕಟ್ಟು ಭೂಮಿಯನ್ನು ಹಂಚಿಕೆ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ವಿಚಾರಣೆ ವೇಳೆ, ನ್ಯಾಯಮೂರ್ತಿಗಳು ಸರ್ಕಾರದ ನಿರ್ಧಾರವನ್ನು ಕಂಡು ದಂಗಾಗಿದ್ದಾರೆ. ನ್ಯಾಯಾಧೀಶರು ಸರ್ಕಾರದ ವಕೀಲರನ್ನು ಕೇಳಿದ ಪ್ರಶ್ನೆಯ ವೀಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ನ್ಯಾಯಾಧೀಶರು ಆಶ್ಚರ್ಯ ಮತ್ತು ಆಕ್ರೋಶದಿಂದ, “ಇದೇನು ತಮಾಷೆಯೇ? ನೀವು ಇಡೀ ಜಿಲ್ಲೆಯನ್ನೇ ಕೊಡುತ್ತಿದ್ದೀರಿ. ನಿಮ್ಮ ಅಗತ್ಯ ಮುಖ್ಯವಲ್ಲ, ಸಾರ್ವಜನಿಕ ಹಿತಾಸಕ್ತಿಯೇ ಇಲ್ಲಿ ಮುಖ್ಯ,” ಎಂದು ಖಡಕ್ ಮಾತುಗಳಲ್ಲಿ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ, ಕಾಂಗ್ರೆಸ್‌ನ ಹಲವು ನಾಯಕರು ಈ ವಿಡಿಯೋವನ್ನು ಹಂಚಿಕೊಂಡು ಗೌತಮ್ ಅದಾನಿಗೆ ಲಿಂಕ್ ಮಾಡಿದೆ ಮತ್ತು ಭೂಮಿಯನ್ನು ಅದಾನಿ ಗುಂಪಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದೆ.
ಕಾಂಗ್ರೆಸ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಅದಾನಿ ಗುಂಪು ಮತ್ತು ಅಸ್ಸಾಂ ಸರ್ಕಾರವನ್ನು ಖಂಡಿಸಿದ ಕಾಂಗ್ರೆಸ್, “ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಿಮೆಂಟ್ ಕಾರ್ಖಾನೆಗಾಗಿ ಅದಾನಿಗೆ 3,000 ಬಿಘಾ (81 ಮಿಲಿಯನ್ ಚದರ ಅಡಿ) ಬುಡಕಟ್ಟು ಭೂಮಿಯನ್ನು ಹಸ್ತಾಂತರಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರು ಆಘಾತ ವ್ಯಕ್ತಪಡಿಸಿ, ನಿರ್ಧಾರದ ವೈಚಾರಿಕತೆಯನ್ನು ಪ್ರಶ್ನಿಸಿ, “ಇದು ತಮಾಷೆಯೇ? ನೀವು ಇಡೀ ಜಿಲ್ಲೆಯನ್ನು ನೀಡುತ್ತಿದ್ದೀರಿ. ನಿಮ್ಮ ಅಗತ್ಯವೇ ಮುಖ್ಯವಲ್ಲ, ಸಾರ್ವಜನಿಕ ಹಿತಾಸಕ್ತಿಯೇ ಮುಖ್ಯ ವಿಷಯ. ಬಡವರು ಹೋರಾಟ ಮಾಡಲು ಬಿಡುವಾಗ, ಮೋದಿಯ ಮಿತ್ರ ಅದಾನಿಗೆ ದೇಶದ ಸಂಪನ್ಮೂಲಗಳನ್ನು ನಾಚಿಕೆಯಿಲ್ಲದೆ ಹಸ್ತಾಂತರಿಸುತ್ತಿರುವ ಬಿಜೆಪಿ ಸರ್ಕಾರದ ಕ್ರಮಗಳು ಸ್ಪಷ್ಟವಾದ ಕ್ರಾನಿ ಕ್ಯಾಪಿಟಲಿಸಂ ಅನ್ನು ಕೂಗುತ್ತಿವೆ. ಇದು ಜನರಿಗೆ ಆಡಳಿತವಲ್ಲ; ಮಿತ್ರ ಅದಾನಿಗಾಗಿ ಆಡಳಿತ. ಅವರ ಕಾರ್ಯಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ಮತ್ತು ಜನರಿಗೆ ನಿಜವಾಗಿಯೂ ಸೇವೆ ಸಲ್ಲಿಸುವ ಸರ್ಕಾರವನ್ನು ಒತ್ತಾಯಿಸುವ ಸಮಯ ಇದು” ಎಂದು ಬರೆದಿದೆ.
Assam CM Himanta Biswa Sarma handed over 3,000 bigha (81 million sqft) of tribal land to Adani for a cement factory.
A High Court judge expressed shock, questioning the rationality of the decision and stating, “Is this a joke? You are giving a whole district. Your need is not… pic.twitter.com/vFNGE0QzkA
— Congress (@INCIndia) August 18, 2025
ಸುಪ್ರಿಯಾ ಶ್ರೀನಾಟೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಅಸ್ಸಾಂನ ಭ್ರಷ್ಟ ಮುಖ್ಯಮಂತ್ರಿ ಹಿಮಂತ ಅವರು ಅದಾನಿಗೆ ಸಿಮೆಂಟ್ ಕಾರ್ಖಾನೆಗಾಗಿ 3,000 ಬಿಘಾ (81 ಮಿಲಿಯನ್ ಚದರ ಅಡಿ) ಭೂಮಿಯನ್ನು ನೀಡಿದರು” ಎಂದು ಪ್ರತಿಪಾದಿಸಿದರು. ಹೈಕೋರ್ಟ್ ನ್ಯಾಯಾಧೀಶರೂ ಸಹ ಆಘಾತಕ್ಕೊಳಗಾದರು – ಅವರು ಕೇಳಿದ್ದು ಇಲ್ಲಿದೆ ಮತ್ತು ಹೇಳಿದರು ‘ಇದು ತಮಾಷೆಯೇ? ನೀವು ಇಡೀ ಜಿಲ್ಲೆಯನ್ನು ನೀಡುತ್ತಿದ್ದೀರಿ. ನಿಮ್ಮ ಅಗತ್ಯವು ಸಮಸ್ಯೆಯಲ್ಲ, ಸಾರ್ವಜನಿಕ ಹಿತಾಸಕ್ತಿಯೇ ವಿಷಯ.”
Assam’s corrupt CM Himanta gave Adani 3,000 bigha (81 million sqft) land for cement factory.
Even the High Court Judge was shocked – here’s what he asked & said
“Is this a joke?”
“You are giving a whole district”
“Your need is not the issue, public interest is the issue” pic.twitter.com/gUdmX8nXJ2
— Supriya Shrinate (@SupriyaShrinate) August 18, 2025
ಕಾಂಗ್ರೆಸ್ ಬೆಂಬಲಿಗ ತರುಣ್ ಗೌತಮ್, “ಹಿಮಂತ ಅಕ್ಷರಶಃ ಅಕ್ರಮ ಅತಿಕ್ರಮಣದ ಹೆಸರಿನಲ್ಲಿ ಮುಸ್ಲಿಂ ವಸಾಹತುಗಳನ್ನು ಕೆಡವುತ್ತಿದ್ದಾರೆ ಆದರೆ ಅದಾನಿಗೆ ನೀಡಲು 3000 ಬಿಘಾಗಳನ್ನು ಹೊಂದಿದ್ದಾರೆ. ನ್ಯಾಯಾಧೀಶರು ಸಹ ಆಘಾತಕ್ಕೊಳಗಾಗಿದ್ದಾರೆ” ಎಂದು ಹೇಳಿದ್ದಾರೆ.

ಇದೇ ರೀತಿಯ ಪ್ರತಿಪಾದನೆಗಳನ್ನು ಕಾಂಗ್ರೆಸ್‌ನ ಹಲವು ಸಾಮಾಜಿಕ ಮಾಧ್ಯಮಗ ಬಳಕೆದಾರರು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ಸರ್ಚ್ ಮಾಡಿದಾಗ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯನ್ನು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ, ಅಸ್ಸಾಂನ ಬುಡಕಟ್ಟು ದಿಮಾ ಹಸಾವೊ ಜಿಲ್ಲೆಯಲ್ಲಿ 3000 ಬಿಘಾ ಭೂಮಿಯನ್ನು ಕೋಲ್ಕತ್ತಾದಲ್ಲಿ ನೋಂದಾಯಿಸಲಾದ ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಿಮೆಂಟ್ ಕಂಪನಿಗೆ ಸಿಮೆಂಟ್ ಕಾರ್ಖಾನೆಯನ್ನು ಸ್ಥಾಪಿಸಲು ಮಂಜೂರು ಮಾಡಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ. ಕಳೆದ ವರ್ಷ 2024 ರಲ್ಲಿ, ಈ ಕಂಪನಿಗೆ ಒಂದು ಜಮೀನನ್ನು ಹಂಚಿಕೆ ಮಾಡಲಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2000 ಬಿಘಾಗಳು. ದಿಮಾ ಹಸಾವೊ ಅಸ್ಸಾಂನ ಬುಡಕಟ್ಟು ಪ್ರಾಬಲ್ಯದ ಬೆಟ್ಟದ ಜಿಲ್ಲೆಯಾಗಿದ್ದು, ಅದೇ ವರ್ಷದ ನವೆಂಬರ್‌ನಲ್ಲಿ, ಇದಕ್ಕೆ 1,000 ಬಿಘಾಗಳ ಮತ್ತೊಂದು ಜಮೀನನ್ನು ನೀಡಲಾಯಿತು, ಇದು ಒಟ್ಟು 3000 ಬಿಘಾಗಳನ್ನು ರೂಪಿಸಿತು.

ದಿಮಾ ಹಸಾವೊ ಜಿಲ್ಲೆಯಲ್ಲಿ ಸುಮಾರು 3,000 ಬಿಘಾ ಭೂಮಿಯನ್ನು ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಹಂಚಿಕೆ ಮಾಡುವ ಅಸ್ಸಾಂ ಸರ್ಕಾರದ ನಿರ್ಧಾರದ ಬಗ್ಗೆ ಗುವಾಹಟಿ ಹೈಕೋರ್ಟ್ ತೀವ್ರವಾಗಿ ಕಳವಳ ವ್ಯಕ್ತಪಡಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ 3,000 ಬಿಘಾ ಅಥವಾ ಸುಮಾರು 1 ಸಾವಿರ ಎಕರೆ ಭೂಮಿಯನ್ನು ಖಾಸಗಿ ಸಿಮೆಂಟ್ ಕಾರ್ಖಾನೆಗೆ ಮಂಜೂರು ಮಾಡಿದ್ದಕ್ಕೆ ಗುವಾಹಟಿ ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದ್ದು, ಯಾವ ನಿಯಮದಡಿ ಇಷ್ಟು ದೊಡ್ಡ ಪ್ರಮಾಣದ ಭೂಮಿ ನೀಡಲಾಗಿದೆ ಎಂದು ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಒಂದು ಸಾವಿರ ಎಕರೆ ಭೂಮಿಯನ್ನು ಒಂದು ಸಿಮೆಂಟ್ ಕಾರ್ಖಾನೆಗೆ ಧಾರೆ ಎರೆದಿರುವುದು ಕೇವಲ ಒಂದು ವ್ಯವಹಾರವಾಗಿ ಉಳಿದಿಲ್ಲ, ಇದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದ ಹೈಕೋರ್ಟ್ ನ್ಯಾಯಾಧೀಶ ಸಂಜಯ್ ಕುಮಾರ್ ಮೇಧಿ ಅವರು, “ಇದೇನು ತಮಾಷೆಯೇ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಿದು ಪ್ರಕರಣ?
2024ರ ಅಕ್ಟೋಬರ್‌ನಲ್ಲಿ ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ದಿಮಾ ಹಸಾವೊ ಜಿಲ್ಲೆಯಲ್ಲಿ 2,000 ಬಿಘಾ ಅಥವಾ ಸುಮಾರು 650ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಬಳಿಕ ಅದೇ ವರ್ಷ ನವೆಂಬರ್‌ನಲ್ಲಿ ಮತ್ತೆ 1000 ಸಾವಿರ ಬಿಘಾ ಅಥವಾ ಸುಮಾರು 330 ಎಕರೆ ಭೂಮಿ ಹೆಚ್ಚುವರಿಯಾಗಿದೆ ನೀಡಿದೆ.
ದಿಮಾ ಹಸಾವೊ ಅಸ್ಸಾಂನಲ್ಲಿರುವ ಬುಡಕಟ್ಟು ಜನಾಂಗದವರು ಬಹುಸಂಖ್ಯಾತರಾಗಿರುವ ಗುಡ್ಡಗಾಡು ಜಿಲ್ಲೆಯಾಗಿದೆ. ಇದನ್ನು ಸಂವಿಧಾನದ ಆರನೇ ಶೆಡ್ಯೂಲ್‌ನ ನಿಬಂಧನೆಗಳ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಉತ್ತರ ಕ್ಯಾಚರ್ ಹಿಲ್ಸ್ ಸ್ವಾಯತ್ತ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತದೆ.
ಸಂವಿಧಾನದ ಆರನೇ ಶೆಡ್ಯೂಲ್ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನಲ್ಲಿನ ಬುಡಕಟ್ಟು ಪ್ರದೇಶಗಳ ಆಡಳಿತವನ್ನು ನಿಯಂತ್ರಿಸುತ್ತದೆ. ಅಕ್ಟೋಬರ್ 2024ರಲ್ಲಿ ಸಿಮೆಂಟ್ ಕಾರ್ಖಾನೆಗೆ ಭೂಮಿ ಮಂಜೂರು ಮಾಡುವ ಆದೇಶವನ್ನು ಉತ್ತರ ಕ್ಯಾಚರ್ ಹಿಲ್ಸ್ ಸ್ವಾಯತ್ತ ಮಂಡಳಿಯ ಹೆಚ್ಚುವರಿ ಕಾರ್ಯದರ್ಶಿ (ಕಂದಾಯ) ಹೊರಡಿಸಿದ್ದರು. ಹಂಚಿಕೆಯ ಉದ್ದೇಶ ಸಿಮೆಂಟ್ ಕಾರ್ಖಾನೆ ಸ್ಥಾಪಿಸುವುದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಭೂಮಿ ಮಂಜೂರಾತಿ ವಿರುದ್ದ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ಕಳೆದವಾರ ಗುವಾಹಟಿ ಹೈಕೋರ್ಟ್‌ನಲ್ಲಿ ನಡೆದಿದೆ. ಸಿಮೆಂಟ್ ಕಾರ್ಖಾನೆಗೆ ಕೊಡಲು ನಮ್ಮ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದಿಮಾ ಹಸಾವೊನ ಸ್ಥಳೀಯರ ಗುಂಪೊಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಈ ವರ್ಷದ ಆರಂಭದಲ್ಲಿ ಮಹಾಬಲ್ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ನಿರ್ಮಾಣ ಕಾರ್ಯಗಳಲ್ಲಿ ‘ಸ್ಥಳೀಯ ಗ್ರಾಮಸ್ಥರು ಸೃಷ್ಟಿಸುವ ಅಡಚಣೆಗಳಿಂದ’ ರಕ್ಷಣೆ ಕೋರಿ ಆರಂಭಿಕ ಅರ್ಜಿಯನ್ನು ಸಲ್ಲಿಸಿತ್ತು. ಆಗಸ್ಟ್ 12ರಂದು ತನ್ನ ಆದೇಶದಲ್ಲಿ ನ್ಯಾಯಾಲಯವು “ಪ್ರಕರಣದ ಸತ್ಯಾಸತ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಂಜೂರು ಮಾಡಲು ಕೋರಿರುವ ಭೂಮಿ ಸುಮಾರು 3,000 ಬಿಘಾಗಳಾಗಿದ್ದು, ಅದು ಅಸಾಧಾರಣವೆಂದು ತೋರುತ್ತದೆ” ಎಂದು ಹೇಳಿದೆ.
“3,000 ಬಿಘಾ ಅಳತೆಯ ಇಷ್ಟು ದೊಡ್ಡ ಭೂಮಿಯನ್ನು ಕಾರ್ಖಾನೆಗೆ ಹಂಚಿಕೆ ಮಾಡುವ” ನೀತಿಯನ್ನು ಒಳಗೊಂಡಿರುವ ದಾಖಲೆಗಳನ್ನು ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಜಿಲ್ಲೆಯ ಉಮ್ರಾಂಗ್ಸೊ ಪ್ರದೇಶವು “ವಲಸೆ ಹಕ್ಕಿಗಳು, ವನ್ಯಜೀವಿಗಳು ಇತ್ಯಾದಿಗಳಿಗೆ ಬಿಸಿನೀರಿನ ಬುಗ್ಗೆ, ನಿಲುಗಡೆ ಸ್ಥಳಗಳನ್ನು ಹೊಂದಿರುವ ಪರಿಸರ ತಾಣ” ಎಂಬುವುದನ್ನೂ ನ್ಯಾಯಾಲಯ ಗಮನಿಸಿದೆ.
ಬಹಿರಂಗ ಪತ್ರ
ಅಸ್ಸಾಂ ಸರ್ಕಾರವು 3000 ಬಿಘಾ ಭೂಮಿಯನ್ನು ಅದಾನಿ ಗ್ರೂಪ್‌ಗೆ ಮಂಜೂರು ಮಾಡಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ದಾರಿತಪ್ಪಿಸುವ, ಸುಳ್ಳು ಮತ್ತು ಆಧಾರರಹಿತ ಎಂದು ಅದಾನಿ ಗ್ರೂಪ್ ಆಗಸ್ಟ್ 18, 2025 ರಂದು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದಾನಿ ಹೆಸರನ್ನು ಮಹಾಬಲ್ ಸಿಮೆಂಟ್‌ಗೆ ಲಿಂಕ್ ಮಾಡುವುದು ದುರುದ್ದೇಶಪೂರಿತವಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಮಹಾಬಲ್ ಸಿಮೆಂಟ್ ಅದಾನಿ ಗ್ರೂಪ್‌ಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ, ಒಡೆತನದಲ್ಲಿಲ್ಲ ಅಥವಾ ಸಂಪರ್ಕ ಹೊಂದಿಲ್ಲ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂ ಸರ್ಕಾರವು ಅದಾನಿ ಗ್ರೂಪ್‌ಗೆ 3,000 ಬಿಘಾ ಬುಡಕಟ್ಟು ಭೂಮಿಯನ್ನು ಮಂಜೂರು ಮಾಡಿದೆ ಎಂಬ ಹೇಳಿಕೆ ಸುಳ್ಳು. ವಾಸ್ತವವಾಗಿ ಈ ಭೂಮಿಯನ್ನು ಅದಾನಿ ಗ್ರೂಪ್‌ಗೆ ಯಾವುದೇ ಸಂಬಂಧವಿಲ್ಲದ ಜೆಕೆ ಲಕ್ಷ್ಮಿ ಸಿಮೆಂಟ್‌ನ ಅಂಗಸಂಸ್ಥೆಯಾದ ಮಹಾಬಲ ಸಿಮೆಂಟ್‌ಗೆ ನೀಡಲಾಗಿದೆ. ಇದಲ್ಲದೆ, ಮಹಾಬಲ್ ಸಿಮೆಂಟ್ ಪ್ರಕರಣಕ್ಕೆ ಲಿಂಕ್ ಮಾಡುವ ವರದಿಗಳನ್ನು ದಾರಿತಪ್ಪಿಸುವ ಮತ್ತು ಆಧಾರರಹಿತ ಎಂದು ಅದಾನಿ ಗ್ರೂಪ್ ಮಾಧ್ಯಮ ಹೇಳಿಕೆಯನ್ನು ನೀಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರ ಪ್ರದೇಶದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಾನರಗಳಿಗೆ ಭೋಜನ ಏರ್ಪಡಿಸಲಾಗಿತ್ತೆ?

