ಅಕ್ಟೋಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ; ಬಿಎಸ್‌ವೈಗೆ ಎದುರಾದ ಸಂಕಷ್ಟ!

ಸಿಎಂ ಯಡಿಯೂರಪ್ಪ ಅವರು ಅಕ್ಟೋಬರ್‌ನಲ್ಲಿ ತಿಂಗಳಿನಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಗಳಿದ್ದು, ತಾವು ಅಧಿಕಾರಕ್ಕೆ ಬರಲು ಕಾರಣರಾದ, ಎಂಎಲ್‌ಸಿಗಳಾಗಿ ಆಯ್ಕೆಯಾಗಿರುವ ಆರ್.ಶಂಕರ್, ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗುದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಈ ಮೂವರಿಗೂ ಸಚಿವ ಸ್ಥಾನ ನೀಡುವುದು ಬಿಕ್ಕಟ್ಟಾಗಿ ಪರಿಣಮಿಸುವ ಸಾಧ್ಯತೆಯಿದೆ.

ಮೈತ್ರಿ ಸರ್ಕಾರ ಪತನಗೊಳಿಸಿ ಹಿಂದಿನ ಸ್ಪೀಕರ್‌ ಅವರಿಂದ ಅನರ್ಹರು ಎಂದು ಘೋಷಿಸಿ, ಸುಪ್ರೀಂ ಮಟ್ಟಿಲೇರಿದ್ದ ಇವರಿಗೆ ಸುಪ್ರೀಂ ಕೋರ್ಟ್‌ ಜನರಿಂದ ಮತ್ತೆ ಆಯ್ಕೆ ಆಗಿ ಬರುಬೇಕು ಎಂದು ಆದೇಶಿಸಿತ್ತು. ಆದರೆ, ಈ ಮೂವರು ಚುನಾವಣೆಯಲ್ಲಿ ಸೋತಿದ್ದು, ಬಿಜೆಪಿಯಿಂದ ಎಂಎಲ್‌ಸಿಗಳಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಇವರು ಜನರಿಂದ ವಿಧಾನಸಭೆಗೆ ಆಯ್ಕೆಯಾಗಿಲ್ಲ.

ಆ ಕಾರಣಕ್ಕಾಗಿ, ಈ ಮೂವರಿಗೆ ಸಚಿವ ಸ್ಥಾನ ನೀಡಬಾರದು, ಅದಕ್ಕೆ ತಡೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಅರ್ಜಿ ಸಲ್ಲಿಸಲಾಗಿದೆ. ಸದ್ಯ, ಅವರಿಗೆ ಸಚಿವ ಸ್ಥಾನ ನೀಡಿಯೇ ನೀಡುತ್ತಾರೆ ಎಂಬುದಕ್ಕೆ ಏನು ಆಧಾರ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ಮುಂದಿನ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ.

ಇದನ್ನೂ ಓದಿ: ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಶಂಕರ್‌ಗೆ ಸಚಿವ ಸ್ಥಾನ ನೀಡದಂತೆ ಹೈಕೋರ್ಟ್‌ನಲ್ಲಿ ಅರ್ಜಿ; ಹಳ್ಳಿಹಕ್ಕಿಗಿಲ್ವಾ ಸಚಿವ ಸ್ಥಾನ?

ಇದಷ್ಟೇ ಅಲ್ಲದೆ, ಮೂಲ ಬಿಜೆಪಿಗರಲ್ಲಿ ಹಲವಾರು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಆ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವೇ ಇಲ್ಲ. ಆ ಕಾರಣದಿಂದಾಗಿ ಅವರೆಲ್ಲರ ಮನವೊಲಿಸುವ ಕಸರತ್ತನ್ನು ಬಿಎಸ್‌ವೈ ಮಾಡಬೇಕಾಗಿದೆ.

ಕೆಲವರನ್ನು ಬಾಯಿ ಮುಚ್ಚಿಸುವ ಉದ್ದೇಶದಿಂದ ಕೆಲವು ದಿನಗಳ ಹಿಂದೆ ವಿವಿಧ ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಕೆಲ ಶಾಸಕರನ್ನು ನೇಮಿಸಲಾಗಿದೆ. ಆದರೆ, ಅವರಲ್ಲಿ ಹಲವರು ಅಧ್ಯಕ್ಷಗಿರಿಯನ್ನು ನಯವಾಗಿ ತಿರಸ್ಕರಿಸಿದ್ದು, ತಾವು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಇನ್ನೂ 90 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಬೇಕಾಗಿದ್ದು, ಇದಕ್ಕೆ ಬಿಜೆಪಿಯಿಂದ 400-500 ಜನರು ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಪಕ್ಷದ ನಿಷ್ಟ ಕಾರ್ಯಕರ್ತರಿಗೆ ಈ ಸ್ಥಾನಗಳನ್ನು ನೀಡಲು ಬಿಜೆಪಿ ಮುಂದಾಗಿದೆ.

ಸೆಪ್ಟಂಬರ್ 21ರಿಂದ 30 ರವರೆಗೆ ವಿಧಾನಸಭೆ ಅಧಿವೇಶನ ನಡೆಯಲಿದೆ, ಸದನದಲ್ಲಿ ಹಲವು ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಳ್ಳಬೇಕಾದ ಮತ್ತು ಹಲವು ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಬೇಕಾದ ಕಾರಣದಿಂದಾಗಿ ಸಚಿವ ಸಂಪುಟದ ಕಸರತ್ತನ್ನು ಅಧಿವೇಶನ ಮುಗಿಯುವವರೆಗೂ ಮಾಡದೇ ಇರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಅಧಿವೇಶನದ ನಂತರ ದೆಹಲಿಗೆ ತೆರಳಲಿರುವ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಪಟ್ಟಿ ಅಂತಿಮಗೊಳಿಸಲಿದ್ದಾರೆ, ಅದಾದ ನಂತರ ಅಂದರೆ ಅಕ್ಟೋಬರ್ 5 ರಂದು ಅಥವಾ ಅದರ ನಂತರದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ.


ಇದನ್ನೂ ಓದಿ: ಅಧ್ಯಕ್ಷಗಿರಿ ತಿರಸ್ಕರಿಸಿದ ಬಿಜೆಪಿ ಶಾಸಕ: ಮಂತ್ರಿಗಿರಿಗೆ ಶುರುವಾಯ್ತು ಕಸರತ್ತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights