ಸಿಎಂ ಬಿಎಸ್‌ವೈ ವೀಕು – ಬಿಜೆಪಿ ಫೇಕು: ಕೈ-ಕಮಲ ನಡುವೆ ಟ್ವಿಟ್ಟರ್‌ ವಾರ್‌!

ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ – ಬಿಜೆಪಿ ಪಕ್ಷಗಳ ಟ್ವಿಟ್ಟರ್ ವಾರ್ ಜೋರಾಗಿದೆ. ಸಿಎಂ ವೀಕು, ಬಿಜೆಪಿ ಫೇಕು ಎಂಬ ಕಾಂಗ್ರೆಸ್ ಟ್ವೀಟ್ ಗೆ ಬಿಜೆಪಿ ಲೇವಡಿ ಮಾಡಿದೆ. ಇದಕ್ಕೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯೆ ನೀಡಿದೆ.

ರಾಜ್ಯ ಬಿಜೆಪಿ ಮನೆಯೊಂದು ನೂರಾರು ಬಾಗಿಲು ಎಂಬಂತಾಗಿದೆ. ಬಿಜೆಪಿ ನಾಯಕರು ರಾಜ್ಯದ ಜನರ ಹಿತ ಕಾಯುವ ಬದಲಾಗಿ ಬಿಎಸ್ವೈ ಮುಕ್ತ ಬಿಜೆಪಿ ಮಾಡುವ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಇದರ ಭಾಗವಾಗಿಯೇ ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದೆ. ಒಟ್ಟಿನಲ್ಲಿ ಈ ಸ್ಥಿತಿಗೆ ಸಿಎಂ ವೀಕು, ಬಿಜೆಪಿ ಫೇಕು ಎನ್ನುವ ಮಾತು ಸೂಕ್ತವಾಗಿದೆ ಅಂತ ಟೀಕಿಸಿತ್ತು.


ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಬಿಜೆಪಿ, ಯಾರು ವೀಕು, ಯಾರು ಫೇಕು ಎಂದು ರಾಜ್ಯದ ಜನತೆ ತೋರಿಸಿ ಕೊಟ್ಟಿದ್ದಾರೆ.

28 ಸಂಸತ್ ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಲ್ಲಿ ಸೋಲು, ಉಪ ಚುನಾವಣೆಯ 17 ವಿಧಾನಸಭೆ ಕ್ಷೇತ್ರಗಳಲ್ಲಿ 15 ಸೋಲು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ.

ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಬಿಜೆಪಿ ಟ್ವೀಟ್ ಕಾಂಗ್ರೆಸ್ ಖಾರವಾಗಿ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿ ಸರ್ಕಾರ ನೆರೆ, ಬರ ಪರಿಹಾರ, ಜಿಎಸ್ಟಿ ಪಾಲು, ಪಿಎಂ ಕೇರ್ಸ್ ಇತ್ಯಾದಿಗಳಲ್ಲಿ ರಾಜ್ಯದ ಪರ ನಿಲ್ಲದ 25 ಸಂಸದರು ಇದ್ದರೆಸ್ಟು ಬಿಟ್ಟರೆಸ್ಟು, ಪ್ರತಿ ರಾಜ್ಯದಲ್ಲೂ ಆಪರೇಷನ್ ಕಮಲದ ಸರ್ಕಾರ ರಚಿಸುವುದು ಮಹಾ ಸಾಧನೆಯೇ ಇತರ ಪಕ್ಷದವರನ್ನು ಸೆಳೆಯುವುದು ಬಿಟ್ಟು ಸ್ವಂತ ಕಾರ್ಯಕರ್ತರನ್ನು ಗೆಲ್ಲಿಸಿ. ಮೊದಲು ನೀವು ಆತ್ಮನಿರ್ಭರರಾಗಿ ಮಾತಾನಾಡಿ ಎಂದು ತಿರುಗೇಟು ನೀಡಿದೆ.


ಇದನ್ನೂ ಓದಿ: 2021ರ ಚುನಾವಣೆಗಳಲ್ಲಿ BJP ಹೀನಾಯವಾಗಿ ಸೋಲುತ್ತದೆ: ಕಾರಣವೇನು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights