Fact Check: ಕಂಗನಾ ರಕ್ಷಣೆಗಾಗಿ 1000 ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಮುಂಬೈಗೆ ಬಂದಿದ್ದರೇ??

ಮುಂಬೈ ನಗರವು ಪಾಕ್‌ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿ, ಮಹಾರಾಷ್ಟ್ರ ಸರ್ಕಾರದೊಂದಿಗೆ ಕಿರಿಕ್‌ ಮಾಡಿಕೊಂಡು ಚರ್ಚೆಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಕಳೆದ ವಾರ ಮುಂಬೈಗೆ ಬಂದಿದ್ದ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಸಾವಿರ ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರುಗಳು ಹೊರಟಿದ್ದಾರೆ ಎಂದು ಒಂದು ಪೋಸ್ಟ್  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ ಎಷ್ಟು ಸತ್ಯಾಂಶವಿದೆ ನೋಡೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಕಂಗನಾ ರಣಾವತ್ ರಕ್ಷಣೆಗಾಗಿ ಸಾವಿರ ವಾಹನಗಳೊಂದಿಗೆ ಮುಂಬೈಗೆ ಹೊರಟ ಬಿಜೆಪಿ ಕಾರ್ಯಕರ್ತರುಗಳು.

ನಿಜಾಂಶ: ಪೋಸ್ಟ್ ನಲ್ಲಿ ಹಂಚಿಕೊಂಡಿರುವುದು ದೇಶದಲ್ಲಿನ ವಿವಿಧ ಪ್ರದೇಶಗಳಲ್ಲಿ ತೆಗೆದ ಹಳೆಯ ಕಾನ್ವಾಯ್ ಫೋಟೋಗಳು. ಈ ಫೋಟೋಗಳಿಗೂ ಕಂಗನಾ ರಣಾವತ್ ಮತ್ತು ಮಹರಾಷ್ಟ್ರ ಸರ್ಕಾರದ ನಡುವೆ ಜರುಗುತ್ತಿರುವ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್ ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪು.

ಫೋಟೋ -1:

ಪೋಸ್ಟ್ ನಲ್ಲಿನ ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ, ಅದೇ ಫೋಟೋವನ್ನು’05 ಮಾರ್ಚ್ 2017’ ರಂದು ಪೋಸ್ಟ್ ಮಾಡಿರುವ ಒಂದು ಟ್ವೀಟ್ ಸಿಕ್ಕಿತು. ಮತ್ತೊಬ್ಬ ಫೇಸ್ಬುಕ್ ಬಳಕೆದಾರ, ಈ ಫೋಟೋವನ್ನು ಒಂದು ಬ್ರಾಹ್ಮಣ ಸಂಘಕ್ಕೆ ಸಂಬಂಧಿಸಿದ ರ್ಯಾಲಿಯದು ಎಂದು ಹೇಳುತ್ತಾ ಪೋಸ್ಟ್ ಮಾಡಿದ್ದಾರೆ. ಆದರೆ, ಈ ಫೋಟೋಗೆ ಸಂಬಂಧಿಸಿದಂತೆ ಅಧಿಕೃತ ವಿವರಗಳು ದೊರೆಯಲಿಲ್ಲ.

ಫೋಟೋ – 2:

ಈ ಪೋಸ್ಟ್ ನಲ್ಲಿನ ಈ ಫೋಟೋವನ್ನು ರಿವರ್ಸ್ ಇಮೇಜ್  ಸರ್ಚ್ ಗೆ ಒಳಪಡಿಸಿದಾಗ, ಅದೇ ಫೋಟೋವನ್ನು ಫೇಸ್ಬುಕ್ ನಲ್ಲಿ ‘22 ಡಿಸೆಂಬರ್ 2019’ರಂದು ಹಂಚಿಕೊಂಡಿರುವ ಒಂದು ಪೋಸ್ಟ್ ಸಿಕ್ಕಿತು.  ಫೋಟೋದಲ್ಲಿ ಕಾಣಿಸುತ್ತಿರುವುದು ಗುಜರಾತ್ ರಾಜ್ಯದಲ್ಲಿ ಕರ್ಣಿಸೇನ ಮಾಡಿದ ರ್ಯಾಲಿಗೆ ಸಂಬಂಧಿಸಿದ್ದು ಎಂದು ಅದರಲ್ಲಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಸಹ ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡುತ್ತಾ ಇದೇ ವಿಷಯವನ್ನು ಹೇಳಿದ್ದಾರೆ. ಈ ಫೋಟೋ ಗುಜರಾತ್ ಗೆ ಸಂಬಂಧಿಸಿದ್ದು ಎಂಬುದಕ್ಕೆ ಅಧಿಕೃತ ಆಧಾರಗಳು ಸಿಗದೆ ಇದ್ದರು ಸಹ, ಪೋಸ್ಟ್ ನಲ್ಲಿನ ಈ ಫೋಟೋ ಹಳೆಯದು ಎಂದು ಖಚಿತವಾಗಿ ಹೇಳಬಹುದು.

ಕೊನೆಯದಾಗಿ, ಕಂಗನಾ ರಣಾವತ್ ರಕ್ಷಣೆಗಾಗಿ ಸಾವಿರಾರು ವಾಹನಗಳಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರುಗಳು ಎಂದು ಸಂಬಂಧವಿಲ್ಲದ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

– ಅನಿಲ್ ಕುಮಾರ್ ಚಿಕ್ಕದಾಳವಟ್ಟ


Read Also: Fact Check: ಕಂಗನಾ ಬೆಂಬಲಿಸಿ ಮುಂಬೈಗೆ ಬಂದಿತ್ತಾ ಬಲಪಂಥೀಯ ಸಂಘಟನೆ ಕರ್ಣಿಸೇನಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights