ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಕೂಬಾ ಡೈವ್ ಪೆಸ್ಟ್ ಸವಿದ ಪ್ರವಾಸಿಗರು….

ಸ್ಕೂಬಾ ಡೈವಿಂಗ್ ಮಾಡೋಕಂತಾನೆ ಪ್ರವಾಸಿಗರು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಹೋಗ್ತಾರೆ. ಕೆಲವರು ವಿದೇಶಕ್ಕೂ ಹೋಗ್ತಾರೆ. ಇದರ ಸಮನಾಗಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮೂರ್ಡೇಶ್ವರದ ನೇತ್ರಾಣಿ ಐಲೆಂಡ್ ನಲ್ಲಿ ಸ್ಕೂಬಾ ಡೈವಿಂಗ್ ಅವಕಾಶ ಕಲ್ಪಿಸಲಾಗಿದೆ. ಈ ಪೆಸ್ಟ್ ನಲ್ಲಿ ನೂರಾರು ಜನ ಕಡಲಾಳದ ಜೀವರಾಶಿಗಳನ್ನ ನೋಡಿ ಖುಷಿಪಟ್ಟು ಎಂಜಾಯ್ ಮಾಡ್ತಾಯಿದ್ದಾರೆ..

ಸಮುದ್ರದೊಳಗೆ ಒಂದು ಜೀವ ಪ್ರಪಂಚ ಅದು ವೈವಿದ್ಯಮಯ ಹಾಗು ಅಪರೂಪದ ಜೀವರಾಶಿಗಳ ತಾಣ. ಈ ಮದ್ಯೆಯೇ ನೈಸರ್ಗಿಕವಾದ ಅಪರೂಪದ ಹವಳದ ದಿಬ್ಬಗಳ ರಾಶಿ. ಒಮ್ಮೆ ನೀರಿಗೆ ಧುಮುಕಿದ್ರೆ ಇನ್ನೊಮ್ಮೆ ಧುಮುಕುವ ಆಸೆ. ಸಮುದ್ರದೊಳಗಿನ ಜೀವ ಪ್ರಪಂಚ ಬಿಟ್ಟು ಮೇಲೆ ಬರಕಾಗದಷ್ಟು ಬಾರವಾದ ಮನಸ್ಸು ಹೀಗೆ ಹತ್ತು ಹಲವು ಅನುಭವ ಸ್ಕೂಬಾ ಡೈವಿಂಗ್ ಗೆ ಬಂದ ಪ್ರವಾಸಿಗರದ್ದಾಗಿರುತ್ತೆ ಅಂದ್ರೆ ನೀವು ನಂಬಲೇ ಬೇಕು. ಉತ್ತರ ಕನ್ನಡ ಜಿಲ್ಲೆಯ ಮೂರ್ಡೇಶ್ವರದ ನೇತ್ರಾಣಿ ಐಲೆಂಡ್ ನ ಸ್ಕೂಬಾ ಪೆಸ್ಟ್ ನಲ್ಲಿ ನೂರಾರು ಪ್ರವಾಸಿಗರು ಕಡಲಾಳದ ಜೀವರಾಶಿಯೊಂದಿಗೆ ಹೊಸ ಅನುಭವ ಪಡೆಯುತ್ತಿದ್ದಾರೆ.  ಮೊನ್ನೆ ಉತ್ತರ ಕನ್ನಡ ಜಿಲ್ಲಾಡಳಿತ ಪ್ರವಾಸೋದ್ಯಮದಲ್ಲಿ ಹೊಸ ಇಂಬು ನೀಡಿ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಎರಡನೇ ವರ್ಷದ ಸ್ಕೂಬಾ ಪೆಸ್ಟ್ ನೇತ್ರಾಣಿ ಐಲೆಂಡ್ ನಲ್ಲಿ ನಡಿಸಿತು.. ನೂರಾರು ಪ್ರವಾಸಿಗರು ಸ್ಕೂಬಾ ಪೆಸ್ಟ್ ನಲ್ಲಿ ಭಾಗವಹಿಸಿ ಸಮುದ್ರದಾಳ ಹೋಗಿ ಖುಷಿಪಟ್ರು..

 

ಮುಂದೆ ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಸ್ಕೂಬಾ ಡೈವ್

ಇನ್ನು ಸ್ಕೂಬಾ ಡೈವಿಂಗ್ ಮಾಡಲು ಇಳಿದ ಪ್ರವಾಸಿಗರ ಖುಷಿಗೆ ಹಾಗು ಹೊಸ ಅನುಭವದ ಮಾತಿಗೆ ಪಾರವೇ ಇರಲಿಲ್ಲಾ. ವಿದೇಶ ಸುತ್ತಿ ಸ್ಕೂಬಾ ಡೈವಿಂಗ್ ಮಾಡುವ ಪ್ರವಾಸಿಗರು ಒಮ್ಮೆ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ರೆ ಮತ್ತೊಮ್ಮೆ ಮಾಡುವ ಆಸೆ ಹುಟ್ಟುವುದು ಸಹಜ. ದೇಶದ ಯಾವುದೆ ಅಕ್ವೈರಿಯಂ ನಲ್ಲಿ ಸಿಗದ ಜೀವರಾಶಿಗಳನ್ನ ನೆತ್ರಾಣಿ ಹೊಂದಿದೆ. ಅಂಡಮಾನ್ ನಿಕೋಬಾರ್ ದ್ವಿಪಗಳಲ್ಲೂ ಕಾಣಸಿಗದ ಜೀವರಾಶಿಗಳನ್ನ ನೇತ್ರಾಣಿಯಲ್ಲಿ ನೋಡಬಹುದು ಅಂತಾರೆ ಪ್ರವಾಸಿಗರು. ಮುಂದಿನ ವರ್ಷ ರಾಷ್ಟ್ರಮಟ್ಟದ ಸ್ಕೂಬಾ ಡೈವಿಂಗ್ ನಡೆಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು ಪ್ರವಾಸೋದ್ಯಮವನ್ನ ಇನ್ನಷ್ಟು ಎತ್ತರಕ್ಕೇರಿಸಲು ಪ್ರಯತ್ನಿಸುತ್ತಿದೆ..

ನಿರಂತರವಾಗಿರಲಿ ಸ್ಕೂಬಾ‌ ಪೆಸ್ಟ್

ಒಟ್ಟಾರೆ ಉತ್ತರ ಕನ್ನಡ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್ ಪೆಸ್ಟ್ ಮೂಲಖ ಪ್ರವಾಸೋದ್ಯಮದಲ್ಲಿ ಹೊಸ ಅನುಭವ ಪರಿಚಯಿಸಿದೆ. ಹತ್ತು ಹಲವು ವೈವಿದ್ಯಮಯ ಹಾಗು ಅಪರೂಪದ ಜೀವರಾಶಿಗಳನ್ನ ಒಮ್ಮೆ ನೋಡಿ ಆಸ್ವಾದಿಸಿ ಎಂಬುದು ನಮ್ಮ ಆಶಯದ ಜೊತೆ ಇಂತ ಉತ್ಸವಗಳು ನಿರಂತರವಾಗಿರಲಿ..

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights