ನಿಲ್ಲದ ಪ್ರತಿಭಟನೆ : ಬೆಚ್ಚಿದ ಸರ್ಕಾರ – ಬಿಡುಗಡೆಗೊಂಡ ಹೋರಾಟಗಾರರು

ಹೋರಾಟ… ಹೋರಾಟ… ಹೋರಾಟ..  ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋದಿಸಿ ಹೋರಾಟದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಮಧ್ಯ ಕರ್ನಾಟಕದಲ್ಲೂ ಇಂದು ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾನಾ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಈ ಪ್ರತಿಭಟನೆಯ ಕಿಡಿಗೆ ಸರ್ಕಾರ ಅಕ್ಷರಶ: ಬೆಚ್ಚಿಬಿದ್ದಿದೆ.

ಹೌದು…. ಪೌರತ್ವ ಕಾಯ್ದಿ ತಿದ್ದುಪಡೆ ವಿರೋಧಿಸಿ ಇಂದು ರಾಜ್ಯದಾದ್ಯಂತ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ನಡೆಯನ್ನು ಅಲ್ಲಗಳೆದು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬಳ್ಳಾರಿ ಹೀಗೆ ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕರು ಕರೆಯದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕಂಡು ಬಂತು. ಆದರೆ ಪ್ರತಿಭಟನೆಗೂ ಮುನ್ನವೇ 144 ಸೆಕ್ಷನ್ ಜಾರಿಗೊಳಿಸಿದ್ದು ಮಾತ್ರ ಸಾಕಷ್ಟು ಕೋಲಹಲವನ್ನ ಸೃಷ್ಟಿ ಮಾಡಿದೆ. ಶಾಂತಿಯುತವಾಗಿ ಪ್ರತಿಭಟನೆ ಕೈಗೊಳ್ಳುವ ಹಕ್ಕು ಸಾರ್ವಜನಿಕರಿಗಿರುವಾಗ ಪ್ರತಿಭಟನೆ ನಡೆಸದಂತೆ 144 ಸೆಕ್ಷನ್ ಜಾರಿ ಮಾಡಿರುವುದು ರಾಜ್ಯದಲ್ಲಿ ಪೊಲೀಸರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಕೂಡ ವ್ಯಕ್ತವಾಗಿದೆ.

ಜಿಲ್ಲೆಯ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖರನ್ನ, ಮಹಿಳೆಯರನ್ನ ಪೊಲೀಸರು ಬಂಧಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರನ್ನು ಚದುರಿಸುವಲ್ಲಿ ಪೊಲೀಸರು ಹರಸಾಹಸವೇ ಪಡಬೇಕಾಯ್ತು. ಪ್ರತೀ ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಕೆಲ ಪ್ರತಿಭಟನಾಕಾರರು ಬಿಡುಗಡೆ ಕೂಡ ಮಾಡಲಾಗಿದೆ. ರಾಜ್ಯದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯ ಕಿಡಿ ಹಬ್ಬಿದ್ದು, ನಾಳೆಯೂ ಕೂಡ ಪ್ರತಿಭಟನೆ ಮಾಡುವುದುದಾಗಿ ಪ್ರತಿಭಟನಾಕಾರರು ಮಾದ್ಯಮಗಳಿಗೆ ತಿಳಿಸಿದ್ದಾರೆ.

ಆದರೆ ಮಂಗಳೂರಿನಲ್ಲಿ ಮಾತ್ರ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿವ ಮೂಲಕ ಸಾರ್ವಜನಿಕರ ಆಸ್ತಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಮೇಲೆ ನೂರಾರು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ  ಪೊಲೀಸರು ಸಾರ್ವಜನಿಕರ ಹಿತ ಕಾಪಾಡುವ ದೃಷ್ಟಿಯಿಂದ ಮತ್ತು ತಮ್ಮ ಆತ್ಮ ರಕ್ಷಣೆಗಾಗಿ ಅಶ್ರು ವಾಯುವನ್ನ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರು ಹರಸಾಹಸಪಟ್ಟು ಪ್ರತಿಭಟನಾಕಾರರ ಗುಂಪನ್ನ ಚದುರಿಸುವ ಕಾರ್ಯ ಮಾಡಿದರೂ ಉದ್ರಿಕ್ತರು ಹಲ್ಲೆಗೆ ಮುಂದಾಗಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ ಪ್ರತಿಭಟನಾಕಾರರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಕಡೆಗೆ ಉದ್ರಿಕ್ತರನ್ನ ಚದುರಿಸಲೂ ಹರಸಾಹಸಪಡುತ್ತಿದ್ದಾರೆ. ಈ ಬೆಳವಣಿಗೆ ಇನ್ಯಾವ ಹಂತ ತಲುಪುತ್ತದೆ, ಸರ್ಕಾರ ಪ್ರತಿಭಟನಾಕಾರರನ್ನ ಅದ್ಯಾವ ಸಮಜಾಯಿಸಿ ನೀಡಿ ಶಾಂತಗೊಳಿಸುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights