ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೋನಾ; ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಕ್ವಾರಂಟೈನ್?

ಕೊರೋನಾ ಸೋಂಕಿನ ಹಾವಳಿಯ ಕಾರಣಕ್ಕಾಗಿ ಮುಂದೂಡಲಾಗಿದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನು ಜೂನ್.18 ರಂದು ನಡೆಸಲಾಗಿದೆ. ಆದರೆ, ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.

ಬೆಂಗಳೂರಿನ ಜಯನಗರ 4 ನೇ ಬ್ಲಾಕ್ ನಲ್ಲಿ  ನಿನ್ನೆ ನಡೆದ ಪಿಯುಸಿ ಪರೀಕ್ಷೆಗೆವಿದ್ಯಾರ್ಥಿನಿ ಹಾಜರಾಗಿದ್ದರು. ಕಳೆದ ಒಂದು ವಾರದಿಂದ ಕ್ವಾರಂಟೈನ್ಗೆ ಒಳಗಾಗಿದ್ದ ಆಕೆಗೆ, ಮನೆಯಿಂದ ಹೊರ ಬರುವಂತಿಲ್ಲ ಎಂದು ಕೈಗೆ ಮುದ್ರೆ ಒತ್ತೆಲಾಗಿತ್ತು. ಆದರೆ, ಆಕೆ ಆ ಮುದ್ರೆಯನ್ನು ಅಳಿಸಿ ಹಾಕಿ ಕಣ್ ತಪ್ಪಿಸಿ ಪರೀಕ್ಷೆಗೆ ತೆರಳಿದ್ದಾಳೆ. ಆಕೆಯ ಸ್ವ್ಯಾಬ್ ರಿಪೋರ್ಟ್ ಸಂಬಂಧ ಅಧಿಕಾರಿಗಳಿಗೂ ಆಕೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಇಂದು ಆಕೆಯ ಕೊರೋನಾ ಪರೀಕ್ಷಾ ವರದಿ ಸಿಕ್ಕಿದ್ದು, ಅದರಲ್ಲಿ ಆಕೆಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ವಿದ್ಯಾರ್ಥಿನಿಯ ಈ ಕೆಲಸದಿಂದಾಗಿ ಇದೀಗ ಆಕೆಯ ಜೊತೆ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನೂ ಹಾಗೂ ಕಾಲೇಜು ಸಿಬ್ಬಂದಿಗಳನ್ನು ಕ್ವಾರಂಟೈನ್ಗೆ ಒಳಪಡಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಇದು ಅಧಿಕಾರಿಗಳಿಗೂ ತಲೆನೋವಿನ ವಿಚಾರವಾಗಿ ಪರಿಣಮಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights