“ಬಿಸಿಲಲ್ಲಿ ಮೂರು ಗಂಟೆ ಕುಳಿತರೆ ಕೊರೊನಾ ಬರೋದಿಲ್ಲ” – ಸಚಿವರ ವಿವಾದಾತ್ಮಕ ಸಲಹೆ

“ಬಿಸಿಲಲ್ಲಿ ಮೂರು ಗಂಟೆ ಕುಳಿತರೆ ಕೊರೊನಾ ವೈರಸ್ ಬಿಟ್ಟುಹೋಗುತ್ತೆ. ಕೊರೊನಾ ಗೆ ಸೂರ್ಯ ಸ್ನಾನವೇ ಮದ್ದು” ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ವಿವಾದಾತ್ಮಕ ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ಗೆ ಜನ ಬಲಿಯಾಗುತ್ತಿರುವ ವೇಳೆ ” ಬಿಸಿಲಲ್ಲಿ ಮೂರು ಗಂಟೆ ಕುಳಿತರೆ ಕೊರೊನಾ ವೈರಸ್ ಬಿಟ್ಟುಹೋಗುತ್ತೆ. ಕೊರೊನಾ ಗೆ ಸೂರ್ಯ ಸ್ನಾನವೇ ಮದ್ದು ” ಎಂದು ಸಚಿವರು ವಿವಾದಾತ್ಮಕ ಸಲಹೆ ನೀಡಿರುವುದು ವಿವಾದವನ್ನು ಸೃಷ್ಟಿ ಮಾಡಿದೆ. ಕೊರೊನಾಗೆ ಇನ್ನೂ ಔಷಧಿಗಳನ್ನು ಕಂಡುಹಿಡಿಯಲಾಗಿಲ್ಲ. ಜನ ಸೂಕ್ತ ಚಿಕಿತ್ಸೆ ಇಲ್ಲದೇ ವಿಶ್ವಾದ್ಯಾಂತ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಈ ಬಗ್ಗೆ ಆತಂಕ ಹೆಮ್ಮರದಂತೆ ಹೆಚ್ಚಾಗುತ್ತಿದೆ. ಹೀಗಿರುವಾಗ ಯಾವುದೇ ಸೂಕ್ತ ತಪಾಸಣೆ ಮಾಹಿತಿ ಇಲ್ಲದೇ ಸೂರ್ಯನೇ ಕೊರೊನಾಗೆ ಮದ್ದು ಎಂದೇಳಿದ್ದು ಭಾರೀ ಆಕ್ರೋಶಕ್ಕೆ ಗುರಿ ಮಾಡಿದೆ.

ಜಗತ್ತಿನಾದ್ಯಂತ ಕೊರೋನಾ ವೈರಸ್​​ಗೆ ಇದುವರೆಗೂ 8 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 2 ಲಕ್ಷಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಭಾರತದಲ್ಲಿ ಈಗಾಗಲೇ ಮೂವರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಭಾರತದ ರಾಜ್ಯಗಳ ಬಹುತೇಕ ನಗರಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights