ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಲಪಡಿಸಲು 50 ಲಕ್ಷ ದೇಣಿಗೆ ಕೊಟ್ಟ ದೊಡ್ಡ್ಮನೆ ಮಗ…
ಕೊರೊನಾ ಭೀತಿಗೆ ಇಡೀ ವಿಶ್ವವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಅನೇಕ ಜನ ನಿರಾಶ್ರಿತರಾಗಿ ಒಂದು ಹೊತ್ತಿನ ಊಟವಿಲ್ಲದೇ, ಇರಲು ಸೂರಿಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂಥವರ ನೆರವಿಗೆ ಸದ್ಯ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ನೆರವಿಗೆ ಬಂದಿದ್ದಾರೆ.
ಹೌದು ಇಂದು ಸಿಎಂ ಯಡಿಯೂರಪ್ಪ ಅವರ ಮನೆಗೆ ಹೋದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುಖ್ಯಮಂತ್ರಿ ನಿಧಿಗೆ 50 ಲಕ್ಷ ಚೆಕ್ ದೇಣಿಗೆ ನೀಡಿದ್ದಾರೆ.
“ಇದು ನಮ್ಮ ಕರ್ತವ್ಯ. ಎಲ್ಲರು ಸೇರಿ ಕೊರೊನಾ ವಿರುದ್ಧ ಹೋರಾಡಬೇಕು. ಇದಕ್ಕಾಗಿ ನಾನು ಯಾವುದೇ ರೀತಿಯ ಸಹಕಾರ ನೀಡುತ್ತೇನೆ. ಇವತ್ತಿನ ಸ್ಥಿತಿಯಲ್ಲಿ ಎಲ್ಲಾ ರೀತಿಯ ಸೇವೆ ಸಲ್ಲಿಸುತ್ತಿರುವವರು ನಮ್ಮ ಪಾಲಿಗೆ ಹೀರೋಗಳು. ಮಾಧ್ಯಮದವರು, ಪೊಲೀಸರು, ವೈದ್ಯರು, ವಾಲೆಂಟೀಯರ್ಸ್ ಇವರೇ ನಮ್ಮ ಪಾಲಿಗೇ ಹೀರೋ ಗಳು. ಕೊರೊನಾದಿಂದ ದಿನ ಗೂಲಿ ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಆದರೆ ಇದೆಲ್ಲವೂ ಕಳೆದು ಒಳ್ಳೇ ದಿನಗಳು ಬಂದೇ ಬರುತ್ತೆ. ಅದಕ್ಕಾಗಿ ಕಾಯಬೇಕು. ಜನರು ಸಹಕರಿಸಬೇಕು. ತಿರುಗಾಟ ಬೇಡ. ಕೊರೊನಾ ತಡಿಬೇಕು ಅಂದರೆ ಇದು ಯಾರ ಕೈಯಲ್ಲಿಲ್ಲ. ನಮ್ಮ ಕೈಯಲ್ಲಿದೆ ಎಂದಿದ್ದಾರೆ.”
ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್ವೈ, ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಕೋವಿಡ್_19 ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಲಪಡಿಸುವ ಕೋರಿಕೆಗೆ ಸ್ಪಂದಿಸಿ, 50 ಲಕ್ಷ ರೂಪಾಯಿಗಳ ದೇಣಿಗೆಯ ಚೆಕ್ ಹಸ್ತಾಂತರಿಸಿದರು ಎಂದು ಫೋಟೋ ಸಮೇತ ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಪವರ್ ನೀಡಿದ ಪವರ್ ಸ್ಟಾರ್.#COVID19 ಸಂಕಷ್ಟದ ಸಮಯದಲ್ಲಿ ನಾಡಿನ ಹಿತಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಿ 50 ಲಕ್ಷ ರೂ. ನೀಡಿದ @PuneethRajkumar ರಿಗೆ ಧನ್ಯವಾದಗಳು.
ಸರ್ಕಾರಿ ನಿಯಮಗಳನ್ನು ಪಾಲಿಸಿ,ನೀವೂ ನಮ್ಮೊಂದಿಗೆ ಸಹಕರಿಸಿ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಮಾಡಬಯಸುವವರು ಆನ್ ಲೈನ್ ಪಾವತಿಸಿ. pic.twitter.com/10udlvs8Hs
— Dr. Ashwathnarayan C. N. (@drashwathcn) March 31, 2020
ಒಟ್ಟಿನಲ್ಲಿ ನಿರಾಶ್ರಿತರ ಸಹಾಯಕ್ಕೆ ದೊಡ್ಡಮ್ನೆ ಮಗ ಕೈ ಜೋಡಿಸಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ನೆಟ್ಟಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

