ರಾಕಿ ಭಾಯ್ ಹುಟ್ಟುಹಬ್ಬಕ್ಕೆ 5 ಸಾವಿರ ಕೆಜಿ ಕೇಕ್: ಕೈ-ಬಾಯಿ ತುಂಬಾ ಕೇಕ್ ಕ್ರೀಮ್ ಹಚ್ಚಿಕೊಂಡ ಐರಾ

ಇಂದು ಯಶ್ ಅಭಿಮಾನಿಗಳಿಗಿಂದು ಸಡಗರವೋ ಸಡಗರ. ಯಾಕೆ ಅಂತೀರಾ…  ಇಂದು ರಾಕಿಂಗ್ ಸ್ಟಾರ್ ಹುಟ್ಟುಹಬ್ಬ ಅದ್ಕೆ. ಹಾಗಾದ್ರೆ ಯಶ್ ತಮ್ಮ ಹುಟ್ಟುಹಬ್ಬವನ್ನ ಹೇಗೆಲ್ಲಾ ಆಚರಿಸಿಕೊಳ್ಳುತ್ತಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಗೆ ಇಂದು ಸಂಭ್ರಮದ ಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ, ಅಷ್ಟೇ ಸ್ಟೈಲ್ ನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ‘ಕೆ.ಜಿ.ಎಫ್’ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ದಾಖಲೆ ಎತ್ತರದ ಕಟೌಟ್ ನಿಲ್ಲಿಸಲಾಗಿದೆ. 5000 ಕೆ.ಜಿ ತೂಕದ ಕೇಕ್ ತಯಾರು ಮಾಡಲಾಗಿದೆ. ಜೆತೆಗೆ ನಾಯಂಡಹಳ್ಳಿ ನಂದಿ ಲಿಂಕ್ಸ್ ಮೈದಾನದಲ್ಲಿ ವಿಶ್ವದಾಖಲೆ ಅತಿ ಎತ್ತರದ 216 ಅಡಿ ಕಟೌಟ್ ನಿರ್ಮಿಸಲಾಗಿದೆ.

ಯಶ್ ಮುದ್ದಿನ ಮಗಳು ಐರಾ ಅಪ್ಪನಿಗಾಗಿ ಕೊಟ್ಟ ಗಿಫ್ಟ್ ಏನು ಗೊತ್ತಾ..? ಅವಳೇ ತಯಾರಿಸಿದ ಕೇಕ್. ಎಸ್… ಯಶ್ ಹಾಗೂ ರಾಧಿಕಾ ಮುದ್ದಿನ ಮಗಳು ಐರಾ ತಂದೆ ಬರ್ಥಡೆಗೆ ಅಮ್ಮನೊಂದಿಗೆ ಕೇಕ್ ತಯಾರಿಸಿದ ಫೋಟೋಸ್ ಸದ್ಯ ವೈರಲ್ ಆಗಿವೆ.

ಕೈ-ಬಾಯಿ ತುಂಬಾ ಕೇಕ್ ಕ್ರೀಮ್ ಮೆಚ್ಚಿಕೊಂಡು ಐರಾ ತನ್ನ ಅಮ್ಮನೊಂದಿಗೆ ತಂದೆಗಾಘಿ ಕೇಕ್ ರೆಡಿ ಮಾಡಿದ್ದಾಳೆ. ಕ್ಯೂಟ್ ಕ್ಯೂಟ್ ಆಗಿ ಕೇಕ್ ರೆಡಿ ಮಾಡುತ್ತಿರುವ ಫೋಟೋಸ್ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights