ಕಾನೂನು ಸುವ್ಯವಸ್ಥೆ ಕಾಪಾಡಿ-ಪಕ್ಷ ಸಿದ್ಧಾಂತ ಮರೆತು ಒಂದಾಗಿ : ಎಲ್ಲಾ ಸಿಎಂಗಳಿಗೆ ಮೋದಿ ಮನವಿ

ಈ ಹಿಂದೆ ಮಾರ್ಚ್ 20  ರಂದು ಮೊದಲ ಬಾರಿಗೆ ಕೊರೊನಾ ವಿಚಾರಕ್ಕೆ ದೇಶದ ಪ್ರಧಾನಿ ರಾಜ್ಯಗಳ ಎಲ್ಲಾ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಬಳಿಕ ಇಂದು ಪುನ: ಮೋದಿ ವಿಡಿಯೋ ಕಾಂನ್ಫರೆನ್ಸ್ ಮಾಡಿ ಲಾಕ್ ಡೌನನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದ್ದಾರೆ.

ಹೌದು.. ಇಂದು ವಿಡಿಯೋ ಕಾಂನ್ಫರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪಕ್ಷ ಸಿದ್ದಾಂತ ಮರೆತು ಒಂದಾಗಿ ಎಂದು ಕರೆ ಕೊಟ್ಟಿದ್ದಾರೆ. ಯಾವ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಎಷ್ಟಿದೆ..? ಸೋಂಕು ತಡೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ..? ಯಾವ ಕ್ರಮ ಕೈಗೊಳ್ಳಬೇಕಾಗಿದೆ,.? ಲಾಕ್ ಡೌನ್ ವಿಷಯವಾಗಿ ರಾಜ್ಯ ಸರ್ಕಾರಗಳು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿವೆ..? ಕೈಗೊಳ್ಳುತ್ತಿವೆ..? ಎನ್ನುವ ಮಾಹಿತಿ ಪ್ರಧಾನಿ ಮೋದಿಯವರು ಪಡೆದಿದ್ದಾರೆ.

ಜೊತೆಗೆ ಸಂತ್ರಸ್ತರು, ರೈತರು, ಚಿಕಿತ್ಸೆ ನೀಡುವ ವೈದ್ಯರು ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ 1 ಲಕ್ಷದ 75 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ. ಈ ಪ್ಯಾಕೇಜ್ ಮೂಲಕ ಪರಿಹಾರ ನೀಡಿ. ಕಾನೂನು ಸುವ್ಯವಸ್ಥೆಗಳಿಗೆ ಒತ್ತು ಕೊಡಬೇಕು ಎಂದಿದ್ದಾರೆ. ಈ ಬಗ್ಗೆ ಎಲ್ಲಾ ರಾಜ್ಯದ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಸಿಎಂಗಳ ಜೊತೆ ಮನವಿ ಮಾಡಿದ್ದರು.

ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿರುವ ಲಾಕ್‍ಡೌನ್ ಮತ್ತೆ ಕೇಂದ್ರ ಸರ್ಕಾರ ವಿಸ್ತರಿಸುತ್ತಾ? ಇಲ್ಲವೋ ಎಂಬ ವಿಚಾರಕ್ಕೆ ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮಾರ್ಚ್ 30 ರಂದು ಪ್ರತಿಕ್ರಿಯಿಸಿ, ಸದ್ಯಕ್ಕೆ ಲಾಕ್ ಡೌನ್ ವಿಸ್ತರಿಸುವ ಯಾವುದೇ ಯೋಚನೆ ಇಲ್ಲ ಎಂದು ಉತ್ತರಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights