ತನ್ನದೇ ಯುದ್ಧನೌಕೆ ಸ್ಫೋಟಿಸಿದ ಇರಾನ್: 19 ನಾವಿಕರ ದುರ್ಮರಣ!

ನೌಕಾ ಸಮರಾಭ್ಯಸದಲ್ಲಿ ನಿರತವಾಗಿದ್ದ ಯುದ್ಧ ಹಡಿಗಿಗೆ ಮತ್ತೊಂದು ಹಡಗಿನಿಂದ ಹಾರಿಸಿದ ಕ್ಷಿಪಣಿ ಬಡಿದು ಇರಾನ್‌ನ ನೌಕಾಪಡೆ 19 ಯೋಧರು ದರ್ಮರಣಕ್ಕೀಡಾಗಿದ್ದಾರೆ.

ಇರಾನ್‌ನ ದಕ್ಷಿಣ ಕರಾವಳಿಯ ಬಂಡಾರ್-ಎ-ಜಾಸ್ಕ್ ಬಳಿ ನೌಕಾಪಡೆಯ ಯುದ್ಧ ಹಡಗುಗಳು ಸಮರಾಭ್ಯಾಸದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಈ ಅವಘಢ ಸಂಭವಿಸಿದೆ.

ಒಂದು ಹಡಗಿನಿಂದ ಹಾರಿಸಲಾದ ಕ್ಷಿಪಣಿ ಅಚಾತುರ್ಯದಿಂದ ಮತ್ತೊಂದು ಯುದ್ಧನೌಕೆಗೆ ತಗುಲಿ ಸ್ಫೋಟಿಸಿದೆ. ಇದರಿಂದಾಗಿ ಕೊನಾರಕ್ ಹಡಗಿನಲ್ಲಿದ್ದ 19 ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ.

ಸಿಬ್ಬಂದಿಯ ಅಚಾತುರ್ಯದಿಂದ ಕ್ಷಿಪಣಿ ಹಾರಿಸಲಾಗಿದ್ದು, ಅದು ತುಸು ದೂರದಲ್ಲಿ ಅಭ್ಯಾಸದಲ್ಲಿ ನಿರತವಾಗಿದ್ದ ಕೊನಾರಕ್ ಹಡಗಿಗೆ ಬಡಿದು ಸ್ಪೋಟಗೊಂಡಿದೆ ಎಂದು ಸ್ಪಷ್ಟಪಡಿಸಿದ್ದು, ಘಟನೆಯ ಕುರಿತು ಆಂತರಿಕ ತನಿಖೆಗೆ ಆದೇಶ ನೀಡಲಾಗಿದೆ. ವೈರಿ ರಾಷ್ಟ್ರ ಅಮೆರಿಕ ಕೊನಾರಕ್ ನೌಕೆಯನ್ನು ಹೊಡೆದುರುಳಿಸಿದೆ ಎಂಬ ವದಂತಿಗಳನ್ನು ನಂಬದಂತೆ ಇರಾನ್ ನೌಕಾಪಡೆ ವಕ್ತಾರ ಜನರಲ್ಲಿ ಮನವಿ ಮಾಡಿದ್ದಾರೆ.

ಇರಾನ್-ಅಮೆರಿಕ ನಡುವೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲೇ ಈ ದರ್ಘಟನೆ ಸಂಭವಿಸಿರುವುದರಿಂದ, ಅಮೆರಿಕವೇ ಕೊನಾರಕ್ ಯುದ್ಧ ಹಡಗನ್ನು ಹೊಡೆದುರುಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ಕಾರಣಕ್ಕಾಗಿ ಘಟನೆಯ ಸ್ಪಷ್ಟೀಕರಣ ನೀಡಿರುವ ಇರಾನ್ ನೌಕಾಪಡೆ, ಸಮರಾಭ್ಯಾಸದ ವೇಳೆ ಅಚಾತುರ್ಯ ಸಂಬವಿಸಿದೆ ವಿನಃ ಯಾವುದೇ ವಿದೇಶಿ ದಾಳಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights