ರಶ್ಮಿಕಾ ಮನೆ ಮೇಲೆ 2ನೇ ದಿನವೂ ಐಟಿ ಡ್ರಿಲ್- ಹೊಸ ಜಾಗ ಖರೀದಿಯೇ ನಟಿಗೆ ಮುಳುವಾಯ್ತಾ?

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ಕೇಸ್ ಗೆ ಸಂಬಂಧಿಸಿದಂತೆ ಎರಡನೆ ದಿನವು ಮುಂದುವರಿಯಲಿದೆ ಐಟಿ ಡ್ರಿಲ್ ಮುಂದುವರೆದಿದೆ.

ನಿನ್ನೆ ತಡರಾತ್ರಿವರೆಗೆ ವಿಚಾರಣೆ ನಡೆಸಿರುವ ಐಟಿ ಅಧಿಕಾರಿಗಳು ಸಾಕಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿರುವ ಮಾಹಿತಿಮ ಲಭ್ಯವಾಗಿದೆ. ಸುಮಾರು 2.5 ಕೋಟಿಗೆ ಮೌಲ್ಯದ ಎರಡು ತಿಂಗಳ ಹಿಂದಷ್ಟೇ ಬಿಟ್ಟಂಗಾಲದಲ್ಲಿ‌ 5.5 ಎಕರೆ ಜಾಗ ಖರೀದಿ ಮಾಡಿದ್ದ ರಶ್ಮಿಕಾ ಕುಟುಂಬಕ್ಕೆ ಹೊಸ ಜಾಗ ಖರೀದಿ ಮಾಡಿದ್ದೇ ಕುಟುಂಬಕ್ಕೆ ಮುಳುವಾಗಿದೆ ಎನ್ನಲಾಗುತ್ತಿದೆ.

ಜಾಗ ಖರೀದಿ ಮಾಡಿ , ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಮಾಡಲು ಸಿದ್ಧತೆ ಮಾಡಲಾಗಿತ್ತು. ಪೆಟ್ರೋಲ್ ಬಂಕ್ ನಿರ್ಮಾಣಕ್ಕೂ ತಯಾರಿ ನಡೆದಿತ್ತು. ಇದೇ ಹಿನ್ನಲೆಯಲ್ಲಿ ಐಟಿ ರೇಡ್ ನಡೆದಿರೋ ಶಂಕೆ ವ್ಯಕ್ತವಾಗಿದೆ.

ಆಂಧ್ರ ಹಾಗೂ ತೆಲಂಗಾಣದ ಐಟಿ ಅಧಿಕಾರಿಗಳಿಂದ ಈ ದಾಳಿ ನಡೆದಿದೆ. ನಟಿ ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್​ ಪಾರ್ಟಿ’ ಸಿನಿಮಾ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಸ್ಟಾರ್​ ನಟರ ಜೊತೆ ತೆರೆಹಂಚಿಕೊಂಡ ಹೆಚ್ಚುಗಾರಿಕೆ ರಶ್ಮಿಕಾ ಅವರದ್ದು. ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ಅವರು, ಸಂಭಾವನೆಯನ್ನು ಸಂಪೂರ್ಣ ಕ್ಯಾಶ್ ಮೂಲಕವೇ ಪಡೆಯುತ್ತಿದ್ದರು ಎನ್ನಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights