ರಾಜ್ಯದಲ್ಲಿ ಹೆಚ್ಚುತ್ತಿವೆ ಆತ್ಮಹತ್ಯೆ ಪ್ರಕರಣಗಳು..! : ಚಿಕ್ಕಮಗಳೂರಿನಲ್ಲಿ ಬಾವಿಗೆ ಹಾರಿದ ಮದ್ಯಪ್ರಿಯ

ಕೊರೊನಾ ಸೋಂಕು ಹರಡುವ ಭೀತಿಯಿಂದ ರಾಜ್ಯದಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಮದ್ಯದಂಗಡಿಗಳು ಬಂದ್ ಆಘಿವೆ. ರಾಜ್ಯದಲ್ಲಿ ಮದ್ಯ ಸಿಗದೆ ದಾವಣೆಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸದ್ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು  ಚಿಕ್ಕಮಗಳೂರಿನಲ್ಲಿ ಮದ್ಯಪ್ರಿಯನೊಬ್ಬ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.

ಹೌದು… ಮೃತನನ್ನ ಜಿಲ್ಲೆಯ ಮೂಡಿಗೆರೆ ಪಟ್ಟಣದ ಯೋಗೀಶ್(40) ಎಂದು ಗುರುತಿಸಲಾಗಿದೆ. ಈತ ಮೂಡಗೆರೆಯ ಹೊಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ, ಆದರೆ ಎಣ್ಣೆ ಸೇವನೆಗೆ ದಾಸನಾಗಿದ್ದ ಈ ವ್ಯಕ್ತಿ ಮದ್ಯದಂಗಡಿಗೆ ಸಾಕಷ್ಟು ಬಾರಿ ಅಲೆದಾಡಿದ್ದಾನೆ. ಆದರೆ ಈತನಿಗೆ ಮದ್ಯ ಸಿಕ್ಕಿಲ್ಲ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಆತ್ಮಹತ್ಯೆ ಮಾಡಿಕೊಂಡು ಕೆಲ ದಿನಗಳೇ ಕಳೆದು ಹೋಗಿವೆ. ಕಾಣೆಯಾಗಿದ್ದ ಯೋಗೀಶ್ ಸ್ನೇತರು ಬಾವಿಯ ಬಳಿ ಹುಡುಕಿ ನೋಡಿದ್ದಾರೆ. ಆದರೆ ಬಾವಿಯಲ್ಲಿ ಇಣುಕಿ ನೋಡಿರಲಿಲ್ಲ. ಕೆಟ್ಟ ವಾಸನೆ ಬಂದ ಬಳಿಕ ಬಾವಿಯಲ್ಲಿ  ಈತನ ಶವ ಕಾಣಿಸಿದೆ. ಯೋಗೀಶ್ ಹಾಕಿದ್ದ ಬಟ್ಟೆಯನ್ನು ಗುರುತಿಸಲಾಗಿದೆ. ಮೂಡಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರೊನಾ ಸೋಂಕು ಪೀಡಿತರ ಸಂಖ್ಯೆ ಕರ್ನಾಟಕದಲ್ಲಿಯೂ ದಿನೇ ದಿನೇ ಏರುತ್ತಿದೆ. ಈವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಗರ್ಭಿಣಿಯೊಬ್ಬರು ಸೇರಿದಂತೆ ಒಟ್ಟು 128 ಮಂದಿ ಸೋಂಕು ಪೀಡಿತರಾಗಿದ್ದಾರೆ. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುತ್ತಿಲ್ಲ ಎನ್ನುವುದು ಮಾತ್ರ ಸಮಾಧಾನದ ಸಂಗತಿ. ಈವರೆಗೆ ಮೂವರು ಮೃತಪಟ್ಟಿದ್ದು, 11 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 128 ಮಂದಿಯ ಪೈಕಿ ಏಳು ಮಂದಿ ಕೇರಳಕ್ಕೆ ಪ್ರವಾಸ ಹೊರಟಿದ್ದು, ಕರ್ನಾಟಕದ ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಅವರಿಗೆ ಸೋಂಕು ಪತ್ತೆಯಾದ ಕಾರಣ, ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ತುಮಕೂರಿನಲ್ಲಿ 4, ಕಲ್ಬುರ್ಗಿಯಲ್ಲಿ 7, ಬಳ್ಳಾರಿಯಲ್ಲಿ 9, ಕೋಲಾರದಲ್ಲಿ 5, ಮೈಸೂರಿನಲ್ಲಿ 2, ಧಾರವಾಡದಲ್ಲಿ 11, ಗದಗದಲ್ಲಿ 3, ಶಿವಮೊಗ್ಗದಲ್ಲಿ 11, ದಾವಣಗೆರೆಯಲ್ಲಿ 2 ಹೊಸ ಸೋಂಕಿತರು ದಾಖಲಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights