ಸೋಷಿಯಲ್‌ ಮೀಡಿಯಾದಲ್ಲಿ ಟ್ರಂಪ್‌ ಖಾತೆಗಳ ನಿಯಂತ್ರಣ: ಈಗ ಸ್ನ್ಯಾಪ್‌ ಸರದಿ!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಇನ್ನು ಮುಂದೆ ಸ್ನ್ಯಾಪ್‌ಚಾಟ್‌ನ ಡಿಸ್ಕವರ್ ವಿಭಾಗದಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಸ್ನ್ಯಾಪ್ ಇಂಕ್ ಹೇಳಿದೆ. ಕಳೆದ ವಾರ ಅವರು ಮಾಡಿದ್ದ ಹಿಂಸಾಚಾರದ ಕಾಮೆಂಟ್‌ಗಳಿಂದಾಗಿ ಬಳಕೆದಾರರು ಹೊಸ ವಿಷಯವನ್ನು ಹುಡುಕುವ ಕ್ಯುರೇಟೆಡ್ ವಿಭಾಗದಿಂದ ಅವರ ಖಾತೆಯನ್ನು ಅನರ್ಹಗೊಳಿಸಲಾಗಿದೆ ಎಂದು ಸ್ನ್ಯಾಪ್ ಸ್ಪಷ್ಟಪಡಿಸಿದೆ.

“ಜನಾಂಗೀಯ ಹಿಂಸೆ ಮತ್ತು ಅನ್ಯಾಯವನ್ನು ಪ್ರಚೋದಿಸುವ ಧ್ವನಿಗಳಿಗೆ ನಾವು ಡಿಸ್ಕವರ್‌ನಲ್ಲಿ ಪ್ರಚಾರ ನೀಡುವುದಿಲ್ಲ” ಎಂದು ಕಂಪನಿ ಹೇಳಿಕೆ ನೀಡಿದೆ.

“ಜನಾಂಗೀಯ ಹಿಂಸೆ ಮತ್ತು ಅನ್ಯಾಯಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ ಹಾಗೂ ಅಮೆರಿಕದಲ್ಲಿ ಶಾಂತಿ, ಪ್ರೀತಿ, ಸಮಾನತೆ ಮತ್ತು ನ್ಯಾಯವನ್ನು ಬಯಸುವ ಎಲ್ಲರೊಂದಿಗೆ ನಾವು ಒಟ್ಟಾಗಿ ನಿಲ್ಲುತ್ತೇವೆ.” ಎಂದು ಪ್ರಕಟಿಸಿದೆ. ಸ್ಯಾಪ್‌ ಹೀಗೆ ಪ್ರಕಟಿಸಿದ ನಂತರ ಅವರ ಷೇರುಗಳು 2.4% ಕುಸಿದಿವೆ.

ಟ್ರಂಪ್‌ ಅವರ ಸ್ನ್ಯಾಪ್‌ಚಾಟ್ ಖಾತೆಯು ಹೆಚ್ಚಾಗಿ ಪ್ರಚಾರದ ವಿಷಯವನ್ನು ಒಳಗೊಂಡಿರುತ್ತದೆ. ಅಲ್ಲದೆ, ಅನೌಪಚಾರಿಕ ವಾಕ್ಚಾತುರ್ಯವನ್ನು ಅವರು ನಿಯಮಿತವಾಗಿ ಬಳಸುವುದಿಲ್ಲ. ಅವರ ಅಭಿಪ್ರಾಯಗಳು ಸಾರ್ವಜನಿಕವಾಗಿ ಉಳಿಯುತ್ತವೆ. ಅವರನ್ನು ಅನುಸರಿಸುವ ಅಥವಾ ಗಮನಿಸುವವರಿಗೆ ಅದು ನೆಗೆಟಿವ್‌ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಟ್ವಿಟರ್‌ ಕೂಡ ಅವರನ್ನು ನಿಯಂತ್ರಿಸುತ್ತಿದೆ ಎಂದು ಸ್ನ್ಯಾಪ್ ಹೇಳಿದರು.

ಟ್ರಂಪ್ ಅವರ ಹಲವಾರು ಟ್ವೀಟ್‌ಗಳಿಗೆ ಲೇಬಲ್‌ಗಳನ್ನು ಹಾಕುವ ಮೂಲಕ ಟ್ವಿಟರ್ ಕಳೆದ ವಾರ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಟ್ರಂಪ್‌ ಅವರ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ದಾರಿ ತಪ್ಪಿಸುವ ಮತ್ತು ಹಿಂಸಾಚಾರವನ್ನು ವೈಭವೀಕರಿಸುವ ಮಾಹಿತಿಗಳು ಟ್ವಿಟರ್‌ನ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ಆದರೆ, ಈ ವಿಚಾರದಲ್ಲಿ ಫೇಸ್‌ಬುಕ್‌ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳಲು ನಿರಾಕರಿಸಿತ್ತು. ಹಾಗಾಗಿ ಫೇಸ್‌ಬುಕ್‌ನ ನಡೆ ನೌಕರರನ್ನು ಪ್ರತಿಭಟನೆಗೆ ಪ್ರೇರೇಪಿಸಿತು. ಸೋಮವಾರ ಫೇಸ್‌ಬುಕ್‌ ನೌಕರರು ಟ್ವಿಟರ್‌ನಲ್ಲಿ  ಪ್ರತಿಭಟನೆ ನಡೆಸಿದ್ದಾರೆ.

“ಸ್ನ್ಯಾಪ್‌ಚಾಟ್‌ನ ಡಿಸ್ಕವರ್ ವಿಭಾಗವು ಕ್ಯುರೇಟೆಡ್ ಪ್ಲಾಟ್‌ಫಾರ್ಮ್ ಆಗಿದೆ, ಅಲ್ಲಿ ನಾವು ಏನನ್ನು ಉತ್ತೇಜಿಸುತ್ತೇವೆ ಎಂಬುದನ್ನು ನಾವು ನಿರ್ಧರಿಸುತ್ತೇವೆ” ಎಂದು ಮುಖ್ಯ ಕಾರ್ಯನಿರ್ವಾಹಕ ಇವಾನ್ ಸ್ಪೀಗೆಲ್ ಅವರು ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights