Covid-19: ಡ್ರ್ಯಾಗನ್ ರಾಷ್ಟ್ರವನ್ನೇ ಮೀರಿಸಿದ ವಿಶ್ವದ ದೊಡ್ಡಣ್ಣ : ಒಂದೇ ದಿನಕ್ಕೆ 1,997 ಜನ ಬಲಿ!

ಕೊರೊನಾ ಜನ್ಮಸ್ಥಳ ಡ್ರ್ಯಾಗನ್ ರಾಷ್ಟ್ರವನ್ನೇ ಮೀರಿ ವಿಶ್ವದ ದೊಡ್ಡನಿಗೆ ಕೊರೊನಾ ಕಾಡುತ್ತಿದೆ. ಕೋವಿಡ್ -19 ಅಟ್ಟಹಾಸಕ್ಕೆ ಅಮೆರಿಕಾ ಅಕ್ಷರಶ: ನಲುಗಿ ಹೋಗಿದೆ.

ಹೌದು… ದಿನೇ ದಿನೇ ಅಮೆರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ನಿನ್ನೆ ಒಂದೇ ದಿನಕ್ಕೆ 1,997 ಜನ ಬಲಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆಯೂ  7,63,835ಕ್ಕೆ ಏರಿಕೆಯಾಗಿದೆ. ಅಮೆರಿಕಾದಲ್ಲಿ ಮಹಾಮಾರಿ ಬರೋಬ್ಬರಿ 40,555 ಜನರನ್ನು ಬಲಿ ಪಡೆದಿದೆ.

ಆರಂಭದಲ್ಲಿ ಕೊರೊನಾ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದ ಅಮೆರಿಕಾ ಸದ್ಯ ಮಂಡಿಯೂರಿದೆ. ಚೀನಾದಿಂದ ಶುರುವಾದ ಕೊರೋನಾ ಅಟ್ಟಹಾಸ ಈಗ ಅಮೆರಿಕದಲ್ಲಿ ಬರೋಬ್ಬರಿ 40,555 ಜನರನ್ನು ಬಲಿ ಪಡೆದಿದೆ. ನಿನ್ನೆ ಒಂದೇ ದಿನಕ್ಕೆ 1,997 ಜನ ಬಲಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆಯೂ  7,63,835ಕ್ಕೆ ಏರಿಕೆಯಾಗಿದೆ. ಹೀಗಾಗಿ ಸೋಂಕು ಇನ್ನಷ್ಟು ಹರಡುವ ಸಾಧ್ಯತೆ ಇದ್ದು, ಸಾವು-ನೋವುಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ವಿಶ್ವದೆಲ್ಲೆಡೆ 1,65,106 ಜನ ಬಲಿಯಾಗಿದ್ದು, 24,02,072 ಜನರಿಗೆ ಸೋಂಕು ತಗುಲಿದೆ. ಇನ್ನೂ ಭಾರತದಲ್ಲೂ ಸಹ 519 ಜನ ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಸುಮಾರು 16,116 ಜನ ಮಾರಣಾಂತಿಕ ಸೋಂಕಿಗೆ ಒಳಗಾಗಿದ್ದಾರೆ.

ಅಮೆರಿಕದಲ್ಲಿ ಭಾನುವಾರ ಒಂದೇ ದಿನ 1,997 ಕ್ಕೂ ಹೆಚ್ಚು ಜನರು ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೊರೋನಾ ಪ್ರಕರಣಗಳನ್ನು ಹೊಂದಿದ ದೇಶ ಎಂಬ ಕುಖ್ಯಾತಿಗೆ ಅಮೆರಿಕ ಒಳಗಾಗಿದೆ. ಇನ್ನೂ ಇಟಲಿ ಮತ್ತು ಫ್ರಾನ್ಸ್‌ನಲ್ಲೂ ಸಹ ಕೊರೋನಾ ಮರಣ ಮೃದಂಗ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ನೆರೆ ರಾಷ್ಟ್ರಗಳಲ್ಲೂ ಈ ಬಗ್ಗೆ ಆತಂಕ ಹೆಚ್ಚಾಗಿದ್ದು, ಸೋಂಕು ಕಡಿಮೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ. ಆರಂಭದಲ್ಲಿ ಎಚ್ಚೆತ್ತುಕೊಳ್ಳದ ರಾಷ್ಟ್ರ ಸದ್ಯ ಕೊರೊನಾ ಹರಡುವಿಕೆಗೆ ನಲುಗಿ ಹೋಗುತ್ತಿದೆ. ಈ ಹೆಮ್ಮಾರಿಯಿಂದ ಹೊರಬರಲು ಹರಸಾಹಸ ಪಡುತ್ತಿದೆ. ಕೊರೊನಾ ವಿರುದ್ಧ ತೋರಿದ ನಿರ್ಲಕ್ಷ್ಯ ಧೋರಣೆ ಎಲ್ಲಾ ದೇಶಗಳಿಗೂ ಪಾಠವಾಗಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights