KPCC : ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಲಾಕ್‌ಡೌನ್ ಅಡ್ಡಿ, ಜೂ. 7 ಸರಳ ಸಮಾರಂಭ..

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಳ್ಳಲು ಇನ್ನು ಟೈಮ್ ಕೂಡಿ ಬಂದಿಲ್ಲ.. ಕರೋನಾ ವೈರಸ್ ಕಾಟ ಇನ್ನೊಂದಡೆ ಲಾಕ್ ಡೌನ್ ಸಂಕಟ..   ಹಿಗೆ ಒಂದು ವೇಳೆ ಲಾಕ್‌ಡೌನ್ ಮುಂದುವರಿದಿದ್ದೇ ಆದಲ್ಲಿ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಸರಳವಾಗಿ ಪದಗ್ರಹಣ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ.

ಜೂನ್ 7ರಂದು ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲೇ ಆಯ್ದ ಪ್ರಮುಖ ನಾಯಕರು, ಬೆಂಬಲಿಗರ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪದಗ್ರಹಣ ಸಮಾರಂಭ ನಡೆಯಲಿದೆ. ಆಯ್ದ ಇನ್ನೂರರಷ್ಟು ನಾಯಕರ ಮುಂದೆ ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್‍ ಅಧಿಕಾರ ಸ್ವೀಕರಿಸಲಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಡಿಕೆಶಿ ಬಂದಿದ್ದಾರೆ..

ಆದರೆ ಮೇ 31 ರಂದು ಲಾಕ್ ಡೌನ್ ವಿಷಯಕ್ಕೆ ಸಂಬಂಧಿಸಿದಂತೆ ಆಗುವ ನಿರ್ಧಾರದ ಮೇಲೆ ಪದಗ್ರಹಣ ಸ್ವೀಕಾರ ಸಮಾರಂಭದ ಮುಹೂರ್ತ ಬದಲಾದರೂ ಅಚ್ಚರಿಯಿಲ್ಲ ಎನ್ನುತ್ತಿರುವ ಉನ್ನತ ಮೂಲಗಳು. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡು ತಿಂಗಳುಗಳೇ ಕಳೆದಿದ್ದರೂ ಈವರೆಗೆ ಡಿಕೆಶಿ ಅಧಿಕೃತವಾಗಿ ಪದಗ್ರಹಣ ಮಾಡಿಲ್ಲ. ಕ್ರೋನಾ ಪ್ರೇರಿತ ಲಾಕ್‌ಡೌನ್ ಅದಕ್ಕೆ ಅಡ್ಡಿಯಾಗಿತ್ತು.

ಮಾಆಂತ್ಯಕ್ಕೆ ದೊಡ್ಡ ಮಟ್ಟದಲ್ಲಿ ಅಣಭಿಮಾನಿಗಳ ಸಮ್ಮುಖ ಪದಗ್ರಹಣಕ್ಕೆ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾನುವಾರಗಳ ಲಾಕ್‌ಡೌನ್‌ ಕಾರಣ ಅದನ್ನು ಮುಂದೂಡಲಾಗಿತ್ತು. ಈಗ ಭಾನುವಾರಗಳ ಲಾಕ್‌ಡೌನ್ ಇನ್ನೂ ಕೆಲ ಕಾಲ ಮುಂದುವರಿಯುವ ಸೂಚನೆ ಇರುವ ಹಿನ್ನೆಲೆಯಲ್ಲಿ ಸರಳವಾಗಿ ಪದಗ್ರಹಣ ಮಾಡಲು ಶಿವಕುಮಾರ್‍ ನಿರ್ಧರಿಸಿದ್ದಾರೆ ಎನ್ನಲಾಗಿದೆ.

Spread the love

Leave a Reply

Your email address will not be published. Required fields are marked *