ನೋಡ ನೋಡುತ್ತಲೇ ರಸ್ತೆಯಲ್ಲಿ ಹೊತ್ತಿ ಉರಿದ ಸ್ಯಾಂಟ್ರೋ ಕಾರು…

ನೋಡ ನೋಡುತ್ತಲೇ ಸ್ಯಾಂಟ್ರೋ ಕಾರು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ಕೊರ್ನಹಳ್ಳಿ ಬಳಿ ತಡರಾತ್ರಿ ನಡೆದಿದೆ.

KA 02 MB 1202 ಎನ್ನುವ ಸಂಖ್ಯೆಯ ಸ್ಯಾಂಟ್ರೊ ಕಾರು ದೇವನಹಳ್ಳಿ ಯಿಂದ ಸೋಮಯಾಜಲಹಳ್ಳಿ ಗ್ರಾಮದ ಕಡೆಗೆ ತೆರಳುತ್ತಿತ್ತು. ಗ್ರಾಮಸ್ಥರು ಬೆಳೆದಿದ್ದ ಬೆಳೆಯನ್ನ ಹುರಳಿ ಒಕ್ಕಣೆಗೆಂದು ರಸ್ತೆ ಮೇಲೆ ಹಾಕಿದ್ದರು. ಇದರ ಮೇಲೆ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ , ಮಾಲೀಕ ದಾಮೋದರ್ ಸೇರಿ ಐವರು ಬಚಾವ್ ಆಗಿದ್ದಾರೆ.

ಕಾರಿನ ಇಂಜಿನ್ ಒಕ್ಕಣೆಗೆಂದು ಹಾಕಿದ್ದ ಹುರಳಿಗೆ ತಾಗಿ ಬೆಂಕಿ ಹೊತ್ತಿಕೊಂಡಿರೊ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights