ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆ : ಗುಡುಗು, ಗಾಳಿ, ಮಳೆಗೆ ಬೆಚ್ಚಿಬಿದ್ದ ಜನ!

ಉರಿ ಬಿಸಿಲಿಗೆ ಸುಸ್ತಾಗಿದ್ದ ಬೆಂಗಳೂರು ಜನ ಕೊಂಚ ಕೂಲ್ ಆಗಿದ್ದಾರೆ. ಯಾಕೆ ಗೊತ್ತಾ? ಬಹುದಿನಗಳ ಬಳಿಕ ವರುಣ ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ್ದಾನೆ. ಇಂದು ಬೆಂಗಳೂರಿನಲ್ಲಿ ಯಾವುದೇ ಕೊರೊನಾ ಕೇಸ್ ಪತ್ತೆಯಾಗದೇ ಇದ್ದ ಸಂತಸದಲ್ಲಿದ್ದ ಜನರಿಗೆ ವರುಣ ತಪ್ಪೆರೆದಿದ್ದಾನೆ.

ಹೌದು… ಇಂದು ಮದ್ಯಾಹ್ನದವರೆಗೂ ಸಹಜವಾಗಿದ್ದ ಬೆಂಗಳೂರು ವಾತಾವರಣ 1 ಗಂಟೆ ಕಳೆಯುತ್ತಿದ್ದಂತೆ ಕಪ್ಪು ಕಾರ್ಮೋಡ ಆವರಿಸಿದೆ. ಇದ್ದಕ್ಕಿದ್ದಂತೆ ಗುಡುಗು ಜೊತೆಗೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಬೆಂಗಳೂರಿನ ಮಂದಿ ಬೆಚ್ಚಿಬಿದ್ದಿದ್ದಾರೆ. ಇದರ ಬೆನ್ನಲ್ಲೆ ಸುಮಾರು ಮೂರು ಗಂಟೆಗಳ ಕಾಲ ವರುಣ ಅರ್ಭಟ ಕಂಡುಬಂದಿದೆ. ತಗ್ಗಿ ಪ್ರದೇಶಗಳಿಗೆ ನೀರು ನುಗ್ಗಿ ರಸ್ತೆಗಳ ಮೇಲೆ ನೀರು ನಿಂತಿದೆ. ವೇಗವಾಗಿ ಬೀಸಿದ ಗಾಳಿಯಿಂದಾಗಿ ಮರಗಳು ಧರೆಗುಳಿವೆ. ವಿದ್ಯುತ್ ವ್ಯತ್ಯಯಗೊಂಡಿದೆ.

ಕೆಆರ್​ ಸರ್ಕಲ್​, ಗಿರಿ ನಗರ, ಹೊಸಕೆರೆ ಹಳ್ಳಿ, ರೇಸ್​ಕೋರ್ಸ್​​ ರಸ್ತೆ, ಶಿವಾಜಿ ನಗರ, ವಿಧಾನಸೌಧ ಭಾಗದಲ್ಲಿ ಭಾರೀ ಮಳೆ ಆಗಿದೆ. ಇಂದು ರಾತ್ರಿಯೂ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಇಂದು ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದರಿಂದ ಬಹುತೇಕ ಜನ ಮನೆಯಲ್ಲೇ ಇದ್ದರು ಇದರಿಂದಾಗಿ ಹೆಚ್ಚಾಗಿ ಯಾರಿಗೂ ಕೂಡ ತೊಂದರೆಗಳಾಗಿಲ್ಲ.

https://twitter.com/desiprogrammer/status/1264495273822359552

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights