ಬಾಲಕನ ಮೇಲೆ ಆತ್ಯಾಚಾರ ಪ್ರಕರಣ: ಶಿಕ್ಷೆಯ ನಂತರ ಆತನನ್ನೇ ಮದುವೆಯಾಗಿದ್ದ ಶಿಕ್ಷಕಿ

ಕಳೆದ ಎರಡು ತಿಂಗಳ ಹಿಂದೆ ಜುಲೈ 6 ರಂದು  ಅಮೆರಿಕಾ ಸಿಯಾಟಲ್​ ನಗರದ ಮಾಧ್ಯಮಿಕ ಶಾಲಾ ಶಿಕ್ಷಕಿ ಮೇರಿ ಕೇ ಲೆಟರ್ನೌ ಮೃತಪಟ್ಟಿದ್ದರು. 58 ವರ್ಷದ ಮೇರಿ ಕ್ಯಾನ್ಸರ್​ ವಿರುದ್ಧದ ಸುದೀರ್ಫ ಹೋರಾಟ ನಡೆಸಿ ಸಾವಿಗೀಡಾದ ನಂತರ ಈ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ.

1999ರಲ್ಲಿ ಶೊರ್​​ವೂಡ್ ಎಲೆಮೆಂಟರಿ ಶಾಲೆಯಲ್ಲಿ​ ಶಿಕ್ಷಕಿಯಾಗಿದ್ದ ಈಕೆ ಆರನೇ ತರಗತಿ ವಿದ್ಯಾರ್ಥಿಯಾದ 12 ವರ್ಷದ ವಿಲಿ ಫೌಲೋ ಜತೆ ಲೈಂಗಿಕ ಸಂಬಂಧ ಹೊಂದಿರುವುದು ವರದಿಯಾಗಿತ್ತು. ಅಪ್ರಾಪ್ತ ಬಾಲಕನ ಜೊತೆಗಿನ ಸಂಬಂಧವನ್ನು ಆತನ ಮೇಲಿನ ಅತ್ಯಾಚಾರವೆಂದು ಪರಿಗಣಿಸಿ ಅಮೆರಿಕಾ ಕೋರ್ಟ್​ ಮೇರಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಸಂದರ್ಭದಲ್ಲಿ ಆಕೆ ಇನ್ನು ಮುಂದೆ ವಿಲಿ ಜೊತೆಗೆ  ಲೈಂಗಿಕ ಸಂಬಂಧ ಹೊಂದುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಈ ವೇಳೆಗೆ ಮೇರಿ ಗರ್ಭಿಣಿಯಾಗಿದ್ದಳು. ನಂತರ 1998ರಲ್ಲಿ ಪೆರೋಲ್​ ಮೇಲೆ ಮೇರಿ ಹೊರ ಬಂದಳು. ನಂತರ ಕಾನೂನಿ ಪ್ರಕಾರ ಈಕೆಯನ್ನು ಜೈಲಿನಿಂದ ಬಿಡುಗಡೆ ಮಾಡಲಾಯ್ತು.

ಜೈಲಿನಿಂದ ಬಿಡುಗಡೆಯಾದ ನಂತರವೂ ಆತನೊಂದಿಗಿನ ಸಂಬಂಧವನ್ನು ಮುಂದುವರೆಸಿದ್ದ ಮೇರಿ ಮತ್ತೊಮ್ಮೆ ವಿಲಿ ಜತೆ ಕಾರೊಂದರಲ್ಲಿ ಸಿಕ್ಕಿಬಿದ್ದಳು. ಕೋರ್ಟ್​ ಮತ್ತೆ ಮಕ್ಕಳ ಮೇಲಿನ ಅತ್ಯಾಚಾರ ಆರೋಪದಡಿ 7 ವರ್ಷ ಶಿಕ್ಷೆ ವಿಧಸಿತ್ತು. ಮೇರಿ ಜೈಲಿನಲ್ಲಿದ್ದಾಗ ಎರಡನೇ ಮಗುವಿಗೆ ಜನ್ಮ ನೀಡಿದ್ದಳು.

ಮೇರಿ ಜೈಲಿನಿಂದ ಬಿಡುಗಡೆಯಾಗುವ ಹೊತ್ತಿಗೆ 12 ವರ್ಷ ವಿದ್ಯಾರ್ಥಿಗೆ 18 ತುಂಬಿ ವಯಸ್ಕನಾಗಿದ್ದ. ಹೀಗಾಗಿ ವಿಲಿಯನ್ನೇ ಮೇರಿ 2005ರಲ್ಲಿ ಮದುವೆಯಾದರು. ಇಬ್ಬರು ವಿವಾಹದ ನಂತರ ವೈವಾಹಿಕ ಜೀವನ ಅಷ್ಟಕಷ್ಟೇ ಇತ್ತು. ಆದ್ದರಿಂದಲೇ ಮೇರಿ ಮತ್ತು ವಿಲಿ ಕಾನೂನಾತ್ಮಕವಾಗಿ ಡಿವೋರ್ಸ್​ ಮಾಡಿಕೊಂಡರು. ಹೀಗಿದ್ದರೂ ಇಬ್ಬರು ಒಟ್ಟಿಗೆ ಜೀವಿಸುತ್ತಿದ್ದರು.

ಇದರ ನಡುವೆ ಮೇರಿ ಆರೋಗ್ಯ ಹದಗೆಟ್ಟಿತ್ತು. ಆಕೆಗೆ ಕ್ಯಾನ್ಸರ್​ ಇರುವುದು ತಿಳಿಯಿತು. ಆದರೆ, ಆಗಲೇ ಸಮಯ ಮೀರಿದ್ದರಿಂದ ಬದುಕುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಕೊನೆಯ ದಿನಗಳಲ್ಲಿ ವಿಲಿ ಆಕೆಯ ಪಾಲನೆಯನ್ನು ಮಾಡಿದ್ದ. ಕೊನೆಗೂ ಮೇರಿ ಕ್ಯಾನ್ಸರ್​ಗೆ ಬಲಿಯಾದಳು. ಮೇರಿಗೆ ಮೊದಲೇ ಒಂದು ಮದುವೆಯಾಗಿತ್ತು. ವಿಲಿಯೊಂದಿಗೆ ಮೇರಿಯದ್ದು ಎರಡನೇ ಮದುವೆಯಾಗಿತ್ತು.


ಇದನ್ನೂ ಓದಿ: ಒಂದು ವರ್ಷದಿಂದ ಬಿಜೆಪಿಯಲ್ಲಿದ್ದು ಕಡಿದು ಗುಡ್ಡೆ ಹಾಕಿದ್ದೇನು? ಆಪರೇಷನ್‌ಗೆ ಒಳಗಾದವರಿಗೆ ಕಾಂಗ್ರೆಸ್‌ ಪ್ರಶ್ನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights