ಟಿಆರ್‌ಪಿ ಹಗರಣ: ಸುದ್ದಿ ಚಾನೆಲ್‌ಗಳ ರೇಟಿಂಗ್‌ ತಾತ್ಕಾಲಿಕ ಸ್ಥಗಿತಗೊಳಿಸಿದ ಬಾರ್ಕ್‌

ರಿಪಬ್ಲಿಕ್‌ ಟಿವಿ ಮತ್ತು ಮುಂಬೈನ ಎರಡು ಸ್ಥಳೀಯ ಸುದ್ದಿವಾಹಿನಿಗಳ ಮೇಲೆ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣ ಆರೋಪ ಬೆಳಕಿಗೆ ಬಂದಿದೆ. ಅಪರಾಧ ತನಿಖಾ ಸಂಸ್ಥೆ ಮೂರೂ ಚಾನೆಲ್‌ಗಳಿಗೆ ನೋಟಿಸ್‌ ಕೂಡ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಭಾಷೆಗಳ ಸುದ್ದಿ ವಾಹಿನಿಗಳ ಟಿಆರ್‌ಪಿ ರೇಟಿಂಗ್‌ಅನ್ನು ಮೂರು ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್)  ಪ್ರಕಟಿಸಿದೆ.

ಟಿಆರ್‌ಪಿ ರೇಟಿಂಗ್‌ ಸಂಖ್ಯೆಯ ದೃಢತೆಯನ್ನು ಸುಧಾರಿಸುವ ಉದ್ದೇಶದಿಂದ ಈಗಿರುವ ಅಳೆತೆಯ ಮಾನದಂಡಗಳನ್ನು ಪರಿಶೀಲಿಸಲು ಬಾರ್ಕ್‌ ಮುಂದಾಗಿದೆ. ಅದಕ್ಕಾಗಿ 12 ವಾರಗಳವರೆಗೆ ವಾರಕ್ಕೊಮ್ಮೆ ರೇಟಿಂಗ್‌ನಲ್ಲಿ “ವಿರಾಮ”ವನ್ನು ನೀಡುತ್ತದೆ ಎಂದು ಕೌನ್ಸಿಲ್‌ನ ಅಧಿಕೃತ ಹೇಳಿಕೆ ತಿಳಿಸಿದೆ.

Read Also: “ನ್ಯೂಸ್ ಚಾನೆಲ್ಸ್ ನಮ್ಮ ಭಯವನ್ನು TRP ಆಗಿ ಕನ್ವರ್ಟ್ ಮಾಡಿಕೊಳ್ಳುತ್ತಿವೆ”

ಟಿಆರ್‌ಪಿ ರೇಟಿಂಗ್‌ ಹಗರಣವಬನ್ನು ಪತ್ತೆ ಹಚ್ಚಿದ ನಗರ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧನಕ್ಕೊಳಗಾದವರಲ್ಲಿ ನ್ಯೂಸ್ ಚಾನೆಲ್ ನೌಕರರು ಸೇರಿದ್ದಾರೆ. ಅಲ್ಲದೆ, ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಅಧಿಕಾರಿಗಳನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಆದರೆ, ರಿಪಬ್ಲಿಕ್‌ ಟಿವಿ ಆರೋಪವನ್ನು ತಳ್ಳಿಹಾಕಿದೆ.


Read Also: ನಕಲಿ ಟಿಆರ್‌ಪಿ ಪ್ರಕರಣ: ರಿಪಬ್ಲಿಕ್‌ ಟಿವಿಯ ಇಬ್ಬರು ಸಂಪಾದಕರು ಪೊಲೀಸರ ಮುಂದೆ ಹಾಜರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights