ಭಾರತ v/s ಆಸ್ಟ್ರೇಲಿಯಾ ಟೆಸ್ಟ್: ಸಾಧಾರಣ ಪ್ರದರ್ಶನ ನೀಡಿದ ಭಾರತ ತಂಡ!
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್ ಟೆಸ್ಟ್ ಸರಣಿ ನಡೆಯುತ್ತಿದ್ದು, ಇಂದು ಟೆಸ್ಟ್ನ ಮೊದಲ ಪಂದ್ಯ ಆಸ್ಟ್ರೇಲಿಯಾದ ಅಡಿಲೇಡ್ ಓಎಲ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಪಂದ್ಯದ ಟಾಸ್ ಗೆದ್ದು ಬ್ಯಾಡಿಂಗ್ ಆರಂಭಿಸಿದ ಭಾರತ ತಂಡ 86 ಓವರ್ಗಳಲ್ಲಿ 06 ವಿಕೆಟ್ ನಷ್ಟದೊಂದಿಗೆ 233 ರನ್ಗಳನ್ನು ಭಾರಿಸಿದೆ.
ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಪೃಥ್ವಿ ಷಾ (0) ಇನ್ನಿಂಗ್ಸ್ ಆರಂಭವಾದ ಎರಡನೇ ಬಾಲಿಗೆ ಔಟ್ ಆದರು. ಕರ್ನಾಟಕದ ಮಯಾಂಕ್ ಅಗರ್ವಾಲ್ 40 ಎಸೆತಗಳಿಗೆ 17ರನ್ ಗಳಿಸಿದ್ದು, 2 ಬೌಂಡರಿಗಳನ್ನು ಭಾರಿದರೂ, ಹೆಚ್ಚು ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಔಟ್ ಆಗದೇ ಉಳಿದಿರುವ ವೃದ್ಧಿಮಾನ್ ಸಾಹ (9*) ಹಾಗೂ ಆರ್.ಅಶ್ವಿನ್ (15*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತ: 89 ಓವರ್ಗಳಲ್ಲಿ 6 ವಿಕೆಟ್ಗೆ 233 (ವಿರಾಟ್ ಕೊಹ್ಲಿ 74, ಚೇತೇಶ್ವರ್ ಪೂಜಾರ 43, ಅಜಿಂಕ್ಯ ರಹಾನೆ 42, ಮಯಾಂಕ್ ಅಗರ್ವಾಲ್ 17, ಹನುಮ ವಿಹಾರಿ 16, ಪೃಥ್ವಿ ಷಾ 0, ಸಾಹ 9*, ಆರ್.ಅಶ್ವಿನ್ 15*, ಮಿಚೆಲ್ ಸ್ಟಾರ್ಕ್ 49ಕ್ಕೆ 2, ಜೋಸ್ ಹ್ಯಾಸಲ್ವುಡ್ 47ಕ್ಕೆ 1, ಪ್ಯಾಟ್ ಕಮ್ಮಿನ್ಸ್ 42ಕ್ಕೆ 1, ನಥಾನ್ ಲ್ಯಾನ್ 68ಕ್ಕೆ 1).
ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ; ಬಿಜೆಪಿ ಸರ್ಕಾರಕ್ಕೆ ಮುಖಭಂಗ!

