ಬಂಗಾಳದ 10 ಶಾಸಕರು bJPಗೆ ಸೇರ್ಪಡೆ; ಒಂಟಿಯಾದ ಮಮತಾ! ಅರಳುವುದೇ ಕಮಲ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ರ್ಯಾಲಿ ನಡೆಸುತ್ತಿದ್ದು, ನಿನ್ನೆ ಅಮಿತ್‌ ಶಾ ಸಮ್ಮುಖದಲ್ಲಿ ಟಿಎಂಸಿಯ 07 ಶಾಸಕರು, ಕಾಂಗ್ರೆಸ್‌, ಸಿಪಿಐ ಮತ್ತು ಸಿಪಿಎಂ ಪಕ್ಷದಿಂದ ತಲಾ ಒಬ್ಬೊಬ್ಬರು ಶಾಸಕರು ಸೇರಿ ಒಟ್ಟು 10 ಶಾಸಕರು ಬಿಜೆಪಿಗೆ ಸೇರಿದ್ದಾರೆ.

ಮಿಡ್ನಾಪುರದಲ್ಲಿ ನಡೆದ ರ್ಯಾಲಿಯಲ್ಲಿ  ಟಿಎಂಪಿಯ ನಾಯಕ, ಮಮತಾ ಬ್ಯಾನರ್ಜಿ ಅವರ ಆಪ್ತ ಸುವೆಂದು ಅಧಿಕಾರಿಯ ನೇತೃತ್ವದಲ್ಲಿ 10 ಶಾಸಕರು ಮತ್ತು 03 ಟಿಎಂಸಿ ಮುಖಂಡರು ಬಿಜೆಪಿ ಸೇರಿದ್ದಾರೆ.

ಇಷ್ಟೆ ಅಲ್ಲದೆ, ಟಿಎಂಸಿಯ ಜಲ್ಲಾ ಮತ್ತು ಬ್ಲಾಕ್‌ ಮಟ್ಟದ ಆರು ಮುಸ್ಲೀಂ ನಾಯಕರು ಹಾಗೂ ಕನಿಷ್ಠ 25 ಕಾರ್ಯಕರ್ತರು ಕೂಡ ಕೇಸರಿ ಪಡೆಗೆ ಸೇರ್ಪಡೆಯಾಗಿದ್ದಾರೆ.

ಪಶ್ವಿಮ ಬಂಗಾಳದಲ್ಲಿ ಸುನಾಮಿ ರೀತಿ ಬದಲಾವಣೆ ಕಂಡುಬರುತ್ತಿದೆ. ರಾಜ್ಯದಲ್ಲಿ 2021ರ ವಿಧಾನಸಭಾ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಜಯಿಸಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಇದನ್ನೂ ಓದಿ: ಪಕ್ಷ ತೊರೆಯುತ್ತಿದೆ ಟಿಎಂಸಿ ಶಾಸಕರ ದಂಡು; ಬಂಗಾಳದಲ್ಲಿ ನಡೆಯುತ್ತಾ ಬಿಜೆಪಿ ಅಟ!

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಯದ ವಾತಾವರಣ ಸೃಷ್ಟಿದ್ದಾರೆ. ಚುನಾವಣೆ ವೇಳೆಗೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಂಗಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಬೆಂಗಾವಲು ಮೇಲೆ ದಾಳಿ ನಡೆಸಲಾಗಿದೆ. ಇಂತಹ ದಾಳಿಗಳಿಂದ ಬಿಜೆಪಿ ಬೆಳೆಯುತ್ತದ್ದಷ್ಟೇ ಎಂದು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಧೃತಿಗೆಡದೆ ಧೈರ್ಯದಿಂದ್ದಾರೆ ಎಂದು ಕರೆ ಕೊಟ್ಟಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸುವ ಭರವಸೆ ನೀಡಿದ್ದ ಮಮತಾ ಬ್ಯಾನರ್ಜಿ, ಅಪರಾಧಿಗಳನ್ನು ಮತ್ತು ಅಪರಾಧ ಆರೋಪ ಹೊತ್ತ ಸೋದರಳಿಯನನ್ನು ರಕ್ಷಿಸಿದ್ದಾರೆ. ಆಂಫಾನ್ ಚಂಡಮಾರುತ ಸಂತ್ರಸ್ಥರಿಗಾಗಿ ಕಳುಹಿಸಿದ ಪರಿಹಾರವನ್ನು ಟಿಎಂಸಿ ‘ಗೂಂಡಾಗಳು’ ಜೇಬಿಗೆ ಇಳಿಸಿದ್ದಾರೆ. ಇನ್ನು ಕೋವಿಡ್ -19 ಪರಿಹಾರ ಹಣವೂ ಸಹ ಜನರಿಗೆ ತಲುಪಿಲ್ಲ ಎಂದು ಅಮಿತ್ ಶಾ ಆರೋಪಿಸಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮುಗಿಯದ ಬಿಕ್ಕಟ್ಟು; NSUI ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights