ಸಿನಿಮಾರಂಗಕ್ಕೆ 2020ರ ಕರಾಳ ವರ್ಷ; 2021 ತರಲಿದೆಯೇ ಬಾಕ್ಸ್‌ಆಫೀಸ್‌ಗೆ ಹರ್ಷ!

ಸಿನಿಮಾರಂಗದವರಿಗೆ  ಕರಾಳ ವರ್ಷ 2020 ಕೊನೆಗೊಳ್ಳುತ್ತಿದೆ. ಕೊರೊನಾ ಹಾವಳಿ, ಲಾಕ್ ಡೌನ್ , ಹೀಗೆ 8-9 ತಿಂಗಳ ಕಾಲ ಸಿನಿಮಾ ಥಿಯೇಟರ್ ಗಳು ಬಂದ್ ಆಗಿಯೇ ಇದ್ದವು. ರಿಲೀಸ್ ಹಂತದಲ್ಲಿರುವ ಚಿತ್ರಗಳು ಯಾವುವೂ ಈವರೆಗೂ ರಿಲೀಸ್ ಆಗ್ತಿಲ್ಲ. ಇತ್ತ ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದ ಸೀಟಿಂಗ್ ವ್ಯವಸ್ಥೆ ಇಲ್ಲದೆ ಇಡೀ ವರ್ಷ ಚಿತ್ರರಂಗ ಸಂಪೂರ್ಣವಾಗಿ ನೆಲಕಚ್ಚಿತ್ತು. ಇನ್ನೂ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಗೆ ಸರದಿಯಲ್ಲಿದ್ರು ಯಾವಾಗ ಬಿಡುಗಡೆಯಾಗಲಿವೆ ಎಂಬ ಖಚಿತ ಮಾಹಿತಿ ಇಲ್ಲ. ನಿರ್ಮಾಪಕರು ಈಗಿನ ಸ್ಥಿತಿಯಲ್ಲಿ ಸಿನಿಮಾ ಬಿಡುಗಡೆಗೆ ಧೈರ್ಯ ಮಾಡ್ತಿಲ್ಲ, ಇದರ ಮಧ್ಯ ಹೊಸ ವರ್ಷದೊಂದಿಗೆ ಹೊಸ ಭರವಸೆ ಹೊಸ ಹುರುಪು ಚಂದನವನದಲ್ಲಿ ಕಂಡುಬರುತ್ತಿದೆ.

ಇದೀಗ 2021 ಸಿನಿಪ್ರಿಯರು ಹಾಗೂ ಚಿತ್ರರಂಗದವರ ಪಾಲಿಗೆ ಒಳ್ಳೆ ವರ್ಷ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಸಾಲು ಸಾಲು ಸಿನಿಮಾಗಳಲ್ಲಿ ಈ ವರ್ಷ ರಿಲೀಸ್ ಆಗಲಿವೆ. ಆದ್ರೆ ಕನ್ನಡದಲ್ಲಿ ಹೊಸ ವರ್ಷದಲ್ಲಿ ರಿಲೀಸ್ ಆಗೋ ಮೊದಲ ಸಿನಿಮಾ ಯಾವುದು, ಯಾವ ನಟರ ಸಿನಿಮಾ ತೆರೆಗಪ್ಪಳಿಸಿದೆ ಎಂದು ಕಾಯುತ್ತಿರೋ ಅಭಿಮಾನಿಗಳ ಕಾತುರಕ್ಕೆ ಕಡೆಗೂ ಬ್ರೇಕ್ ಬಿದ್ದಿದೆ.

ಹೌದು ಜನವರಿ 1 ಹೊಸ ವರ್ಷಕ್ಕೆ ರಿಲೀಸ್ ಆಗುವ ಕನ್ನಡದ ಮೊದಲ ಸಿನಿಮಾ ಕನ್ನಡ ಸಿನಿರಂಗದ ದೊಡ್ಮನೆಯ ನಟನ ಸಿನಿಮಾದಿಂದ ವರ್ಷಾರಂಭವಾಗಲಿದೆ..ಹೌದು ರಾಘವೇಂದ್ರ ರಾಜ್‌ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಾಜತಂತ್ರ’. ಈ ಸಿನಿಮಾ ಮೂಲಕ ಕನ್ನಡದಲ್ಲಿ ಹೊಸ ವರ್ಷಕ್ಕೆ ಬಿಡುಗಡೆಯಾಲಿರುವ ಸಿನಿಮಾಗಳ ಪರ್ವ ಆರಂಭವಾಗಲಿದೆ.

ಅನೇಕ ವರ್ಷಗಳಿಂದ ಸಿನಿಮಾರಂಗದಿಂದ ಅನಾರೋಗ್ಯದ ಕಾರಣದಿಂದಾಗಿ ದೂರ ಉಳಿದಿದ್ದ ರಾಘಣ್ಣನನ್ನ ಮತ್ತೆ ತೆರೆಮೇಲೆ ನೋಡುವ ಅಭಿಮಾನಿಗಳ ಕನಸು ಕೂಡ ನನಸಾಗಲಿದೆ. ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ ಅವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಶ್ರೀ ಸುರೇಶ್ ಅವರ ಸಂಗೀತ, ಸ್ವಾಮಿ ಛಾಯಾಗ್ರಹಣವಿದೆ. ಅಂದ್ಹಾಗೆ ಚಿತ್ರದಲ್ಲಿ ರಾಘಣ್ಣ ಹೊರತಾಗಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ಪ್ರಕಾಶ್ ಕಾರಿಯಪ್ಪ, ನೀನಾಸಂ ಅಶ್ವಥ್ ಸೇರಿದಂತೆ ದೊಡ್ಡ ತಾರಾಬಳಗವಿದೆ.


ಇದನ್ನೂ ಓದಿ: ವಿಷ್ಣು ಪ್ರತಿಮೆ ತೆರವುಗೊಳಿಸುವುದು ಮೊದಲೇ ನಿರ್ಧಾರವಾಗಿತ್ತು: ಸಚಿವ ವಿ.ಸೋಮಣ್ಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.