ಈ ಫೋಟೋಗಳು ಜ.26ರ ಟ್ರಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ಸಂಬಂಧಿಸಿವೆ ಎಂಬ ತಪ್ಪು ಸಂದೇಶ ವೈರಲ್!
ಜನವರಿ 26 ರಂದು ದೆಹಲಿಯಲ್ಲಿ ರೈತರ ಪ್ರತಿಭಟನಾ ನಿರತ ಗುಂಪೊಂದು ಸೃಷ್ಟಿಸಿದ ಹಿಂಸಾಚಾರದಲ್ಲಿ 17 ಸರ್ಕಾರಿ ವಾಹನಗಳು ಹಾನಿಗೊಳಗಾಗಿ 300 ಕ್ಕೂ ಹೆಚ್ಚು ಬ್ಯಾರಿಕೇಡ್‌ಗಳನ್ನು ಮುರಿಯಲಾಗಿದೆ. ಸಾಕಷ್ಟು ಜನ ಗಾಯಗೊಂಡಿದ್ದಾರೆ. 22 ಕೇಸ್ ಗಳು ದಾಖಲಾಗಿವೆ.
ಈ ಮಧ್ಯೆ ಬೆಂಕಿ ಹೊತ್ತಿದ ಕಾರುಗಳನ್ನು ತೋರಿಸುತ್ತಿರುವ ಫೋಟೋಗಳ ಒಂದು ಸೆಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇವು ಪ್ರತಿಭಟನೆಯ ದೃಶ್ಯಗಳು ಎಂದು ಹೇಳಿಕೊಳ್ಳಲಾಗುತ್ತಿದೆ. ಫೋಟೋಗಳನ್ನು ಹಂಚಿಕೊಂಡು “ದೆಹಲಿಯ ಇತ್ತೀಚಿನ ಚಿತ್ರಗಳು ..”ಎಂದು ಬರೆಯಲಾಗಿದೆ.

ಆದರೆ ಈ ಫೋಟೋಗಳು 2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ವಿರುದ್ಧ ಜಮ್ಮುವಿನಲ್ಲಿ ನಡೆದ ಪ್ರತಿಭಟನೆಯ ಚಿತ್ರಗಳಾಗಿವೆ.
2019 ರ “ದಿ ಕ್ವಿಂಟ್” ಲೇಖನದಲ್ಲಿ ಈ ಫೋಟೋವನ್ನು ಕಾಣಬಹುದು. ವರದಿಯ ಪ್ರಕಾರ, 2019 ರ ಫೆಬ್ರವರಿ 15 ರಂದು ಜಮ್ಮುವಿನ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವೇಳೆ ಬಾಂಬ್ ಸ್ಪೋಟಿಸಿ ಹತ್ಯೆಗೈದವರ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಈ ಚಿತ್ರಗಳನ್ನು ತೆಗೆಯಲಾಗಿದೆ.

ಮೊದಲ ಚಿತ್ರದ ಶೀರ್ಷಿಕೆ ಹೀಗೆ ಹೇಳುತ್ತದೆ, “ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದವರ ವಿರುದ್ಧ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

“ಜಮ್ಮುವಿನಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಹತ್ಯೆಯ ವಿರುದ್ಧ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ ನಂತರ ಪೊಲೀಸರು ರಸ್ತೆಯಲ್ಲಿ ಗಸ್ತು ತಿರುಗುತ್ತಾರೆ.” ಎಂದು ಎರಡನೇ ಚಿತ್ರದ ಶೀರ್ಷಿಕೆ ಹೇಳುತ್ತದೆ.

ವೈರಲ್ ಸೆಟ್ನಲ್ಲಿನ ಮೂರನೇ ಚಿತ್ರದಲ್ಲಿ ಪ್ರತಿಭಟನಾಕಾರರು ಟೈರ್ಗಳನ್ನು ಸುಡುವ ರಾಶಿಯ ಸುತ್ತಲೂ ಒಟ್ಟುಗೂಡಿದ್ದಾರೆ ಎಂದು ತೋರಿಸುತ್ತದೆ. ಈ ಚಿತ್ರವನ್ನು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ನ ವೆಬ್‌ಸೈಟ್‌ನಲ್ಲಿ ಪತ್ತೆ ಮಾಡಲಾಗಿದೆ.

ಆದ್ದರಿಂದ ಈ ಫೋಟೋಗಳು ಸುಮಾರು ಎರಡು ವರ್ಷ ಹಳೆಯದು. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಜಮ್ಮುವಿನಲ್ಲಿ ನಡೆದ ಪ್ರತಿಭಟನೆಯ ಭಾಗವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರಗಳು ಜನವರಿ 26 ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ.

