ಕೊನೆಗೂ ಸಿಕ್ಕಿಬಿತ್ತು ಬೆಂಗಳೂರು ಅಪಾರ್ಟ್ಮೆಂಟ್ ಬಳಿ ಕಾಣಿಸಿಕೊಂಡಿದ್ದ ಚಿರತೆ!

ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ಒಳಗೆ ಚಿರತೆ ಪ್ರವೇಶಿಸಿದ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದ ಜನ ನೆಮ್ಮಂದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹೌದು… ಜನವರಿ 24ರಂದು ಚಿರತೆ ಅಪಾರ್ಟ್ ಮೆಂಟ್ ಒಳ ಪ್ರವೇಶಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಜನರ ನಿದ್ದೆಗೆಡಿಸಿತ್ತು. ಸದಾಕಾಲ ಗಿಜುಗುಡುತ್ತಿದ್ದ ರಸ್ತೆಗಳಲ್ಲಿ ಜನ ಮನೆ ಬಿಟ್ಟು ಹೊರಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಚಿಕ್ಕ ಮಕ್ಕಳಿಂದ ವಯಸ್ಕರೂ ಕೂಡ ಚಿರತೆಗೆ ಭಯಭೀತರಾಗಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ಹೊತ್ತು ಬಂದು ಹೋಗುವ ಚಿರತೆಯನ್ನು ಹಿಡಿಯುವುದು ಹೇಗೆ ಎನ್ನುವ ಗೊಂದಲದಲ್ಲಿದ್ದರು. ಅರಣ್ಯ ಇಲಾಖೆಯು ಅಪಾರ್ಟ್ಮೆಂಟ್ನ ನಿವಾಸಿಗಳು ಮತ್ತು ಚಿಕ್ಕತೋಗುರ್, ದೊಡ್ಡತೋಗೂರ್, ಕ್ಯಟನಹಳ್ಳಿ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ನೆರೆಹೊರೆಯ ಸ್ಥಳಗಳ ನಿವಾಸಿಗಳನ್ನು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿತ್ತು.

ಜನವರಿ 29 ರ ಶುಕ್ರವಾರದಂದು ಚಿರತೆಯನ್ನು ಮತ್ತೆ ಆ ಪ್ರದೇಶದಲ್ಲಿ ಗುರುತಿಸಲಾಯಿತು. ಆದರೆ ಅರಣ್ಯ ಇಲಾಖೆಗೆ ಆ ಕ್ಷಣದಲ್ಲಿ ಚಿರತೆಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೇಗಾದರೂ, ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೆಲವು ದಿನಗಳ ನಂತರ ಚಿರತೆ ಸಿಕ್ಕಿಬಿದ್ದಿದೆ.

ಇಂದು ಮುಂಜಾನೆ 3.30 ರ ಸುಮಾರಿಗೆ ಅರಣ್ಯ ಇಲಾಖೆ ಹಾಕಿದ್ದ ಬಲೆಗೆ ಚಿರತೆ ಬಿದ್ದಿದೆ. ಚಿರತೆ ಅಪಾರ್ಟ್ಮೆಂಟ್ ಬಳಿಯ ಬಂಡೆಯ ಬೆಟ್ಟದ ಬಳಿ ಹಾಕಲಾಗಿದ್ದ ಬಲೆಗೆ ಚಿರತೆ ಸಿಕ್ಕಿಬಿದ್ದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights