ರಮೇಶ್ ರಾಸಲೀಲೆ ಪ್ರಕರಣ : ಪೋಲೀಸ್ ವಿಚಾರಣೆ ಬಳಿಕ ದಿನೇಶ್ ಹೇಳಿದ್ದೇನು?

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಇಂದು ಸತತ 4 ಗಂಟೆಗಳ ಕಾಲ ಪೋಲೀಸ್ ವಿಚಾರಣೆ ಒಳಪಟ್ಟಿದ್ದರು.

ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಯಲ್ಲಿ ವಿಚಾಋಣೆಗೆ ಒಳಗಾದ ದಿನೇಶ್ ಮಾದ್ಯಮದ ಮುಂದೆ ಮಾತನಾಡಿದ್ದು, “ನನ್ನಲ್ಲಿ ಲಭ್ಯವಾಗಿರುವ ಮಾಹಿತಿ ಕೊಟ್ಟಿದ್ದೇನೆ. ಸಂತ್ರಸ್ತೆ ಯುವತಿ ನನ್ನ ಸಂಪರ್ಕದಲ್ಲಿ ಇಲ್ಲ. ಆ ಯುವತಿಯನ್ನು ನಾನು ನೋಡೇ ಇಲ್ಲ.  ದೂರು ಕೊಟ್ಟಂತೆ ಹೇಳಿಕೆ ಕೊಟ್ಟಿದ್ದೇನೆ. ಸಂತ್ರಸ್ತೆಯ ಕುಟುಂಬಸ್ಥರು ಬಂದು ನನಗೆ ಭೇಟಿ ಮಾಡಿದ್ದಾರೆ. ಅವರ ಹೇಳಿಕೆಯೊಂದಿಗೆ ನಾನು ದೂರು ಕೊಟ್ಟಿದ್ದೇನೆ. ಪೋಲೀಸರೇ ತನಿಖೆ ಬಳಿಕೆ ನಮಗೆ ಸತ್ಯಾಂಶ ನೀಡಬೇಕು. ಯಾವುದು ಸರಿ ಅಥವಾ ಯಾವುದು ಸುಳ್ಳು” ಎಂದು 4 ಗಂಟೆಗಳ ವಿಚಾರಣೆ ಬಳಿಕ ಹೇಳಿದ್ದಾರೆ.

ಈ ಮಧ್ಯೆ ಅವರು ಗೊಂದಲದ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಹೇಳಿದ್ದಾರೆ. ಭದ್ರತಾ ಸಿಬ್ಬಂದಿಗೆ ಮದುವೆಗೆ ಹೋಗಬೇಕು ಎಂದು ಹೇಳಿ ಪೋಲೀಸ್ ವಿಚಾರಣೆಗೆ ಹಾಜರಾಗಿದ್ದು ಅನುಮಾನ ವ್ಯಕ್ತವಾಗಿದೆ. ಜೊತೆಗೆ ಸಿಡಿ ವಿಚಾರಕ್ಕೆ ಆರಂಭದಲ್ಲಿ ಅವರ ಸ್ನೇಹಿತ ಸಿಡಿ ನೀಡಿದ್ದ ಎಂದು ಹೇಳಿದ್ದ ದಿನೇಶ್ ಇಂದು ಪೊಲೀಸ್ ವಿಚಾರಣೆ ವೇಳೆ ಸಿಡಿಯನ್ನು ಅಪರಿಚಿತರು ನೀಡಿದ್ದಾರೆಂದು ಹೇಳಿದ್ದು ಒಂದಕ್ಕಿಂದು ತಾಳೆಯಾಗುತ್ತಿಲ್ಲ. ಹೀಗಾಗಿ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಆದರೂ ಸಿಡಿ ನೀಡಿದವರು ಯಾರು? ಎನ್ನುವ ಮಾಹಿತಿ ಮಾತ್ರ ಈವರೆಗೂ ಮಾಹಿತಿ ಲಭ್ಯವಾಗಿಲ್ಲ.

ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್, ” ಕುಮಾರಸ್ವಾಮಿ ಹೇಳಿದ್ದಕ್ಕೆ ನನ್ನ ಸಹಮತವಿದೆ. ಅವರು ಹೇಳಿದಂತೆ ಬ್ಲಾಕ್ ಮೇಲ್ ಆಗುತ್ತಿದ್ದರೆ ತನಿಖೆಯಾಗಲಿ” ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಕುಮಾರಸ್ವಾಮಿ ” ಬ್ಲಾಕ್ ಮೇಲ್ ಮಾಡುವವರನ್ನು ಏರೋಪ್ಲೇನ್ ಹತ್ತಿಸಿ, ಒದ್ದು ಒಳಗಡೆ ಹಾಕಿ ” ಎಂದು ಕಿಡಿಕಾರಿದ್ದರು.

ವಿಚಾರ ತನಿಖಾ ಹಂತದಲ್ಲಿರುವುದರಿಂದ ನಾನು ಹೆಚ್ಚೇನು ಹೇಳುವುದಿಲ್ಲ. ದಯವಿಟ್ಟು ಸಹಕರಿಸಬೇಕು ಎಂದು ದಿನೇಶ್ ಠಾಣೆಯಿಂದ ನಿರ್ಗಮಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights