ಸಿಡಿ ಸಂತ್ರಸ್ತೆ ತಾಯಿಗೆ ಅನಾರೋಗ್ಯ : ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲು…!

ಸಿಡಿ ಸಂತ್ರಸ್ತೆ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದು ವೈದ್ಯರ ಸಲಹೆ ಮೇರೆಗೆ ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೌದು… ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಸಿಡಿ ಸಂತ್ರಸ್ತೆಯ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಆಕೆಯನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈಗಾಗಲೇ ಸಂತ್ರಸ್ತೆಯ ಅಜ್ಜಿಗೆ ಅನಾರೋಗ್ಯದಿಂದಾಗಿ ಬೆಳಗಾವಿಯಿಂದ ವಿಜಯಪುರದ ನಿಡಗುಂದಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಸಂತ್ರಸ್ತೆಯ ಕುಟುಂಬಸ್ಥರು ವಾಸವಿದ್ದಾರೆ. ಸಿಡಿ ಸಂತ್ರಸ್ತೆಯ ಪೋಷಕರು ಸದ್ಯ ಮತ್ತೊಂದು ನೋವಿಗೆ ಸಿಲುಕಿದ್ದಾರೆ. ಸಂತ್ರಸ್ತೆ ತಾಯಿಗೆ ಕೈ-ಕಾಲು ಊತವಾಗಿದ್ದು ಸಕ್ಕರೆ ಪ್ರಮಾಣ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಸಂತ್ರಸ್ತೆ ಸಹೋದರ ಕಾರಿನಲ್ಲಿ ತಾಯಿಯನ್ನು ಆಸ್ಪತ್ರೆಗೆ ಕರೆದಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಬೆಂಗಳೂರಿಗೆ ಆಗಮಿಸಿದಾಗಿನಿಂದಲೂ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತಿದ್ದ ಸಂತ್ರಸ್ತೆಗೆ ಪೋಷಕರ ಭೇಟಿ ಸಾಧ್ಯವಾಗಿಲ್ಲ. ತಾನು ತನ್ನ ಪೋಷಕರ ಬಳಿ ಹೋಗಬೇಕು ಮಾತನಾಡಬೇಕು ಎಂದು ಸಂತ್ರಸ್ತೆ ಕೂಡ ಎಸ್ಐಟಿ ಮುಂದೆ ಕಣ್ಣೀರಿಟ್ಟಿದ್ದಳು. ಆದರೀಗ ಸಂತ್ರಸ್ತೆ ತಾಯಿಗೆ ಆರೋಗ್ಯ ಸರಿ ಇಲ್ಲದೆ ವಿಚಾರ ಸಂತ್ರಸ್ತೆಗೆ ತಿಳಿಸಲಾಗಿದಿಯೋ ಇಲ್ಲವೋ ಎನ್ನುವುದ ಮಾತ್ರ ಸ್ಪಷ್ಟವಾಗಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights