ಆರನೇ ದಿನಕ್ಕೆ ಸಾರಿಗೆ ನೌಕಕರ ಮುಷ್ಕರ: ಇಂದು ತಟ್ಟೆ-ಲೋಟ ಚಳುವಳಿ!
ಆರನೇ ವೇತನ ಆಯೋಗ ಜಾರಿ ಹಾಗೂ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ರಾಜ್ಯದ ಸಾರಿಗೆ ನೌಕಕರು ನಡೆಸುತ್ತಿರುವ ಹೋರಾಟ 06ನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಸರ್ಕಾರ ನೌಕರರ ಬೇಡಿಕೆಗೆ ಸಹಮತ ಸೂಚಿಸದ ಕಾರಣ ಇಂದು ತಟ್ಟೆ-ಲೋಟ ಚಳುವಳಿ ಮಾಡಲು ಪ್ರತಿಭಟನಾ ನಿರತ ನೌಕಕರು ನಿರ್ಧರಿಸಿದ್ದಾರೆ.
ತಮ್ಮ ಮುಷ್ಕರವನ್ನು ತೀವ್ರಗೊಳಿಸುತ್ತಿರುವ ಸಾರಿಗೆ ಇಲಾಖೆ ನೌಕರರ ಒಕ್ಕೂಟವು ಇಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು, ತಾಲ್ಲೂಕು ತಹಶಿಲ್ದಾರ್ ಕಚೇರಿ ಮುಂದೆ ತಟ್ಟೆ, ಲೋಟ ಬಡಿದು ಚಳವಳಿ ನಡೆಸುತ್ತಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕಕರು ಪ್ರತಿಭಟನೆಯಲ್ಲಿ ನಿರತರಾಗಿದ್ದರೆ, ಇತ್ತ ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿಗಳಲ್ಲಿ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ಸುಗಳು ನಿಂತಿವೆ.
ಮುಷ್ಕರದ ಹಿನ್ನಲೆಯಲ್ಲಿ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬಹುತೇಕ ಪ್ರಯಾಣಿಕರು ರಸ್ತೆಗಿಳಿದಿಲ್ಲ. ದಿನನಿತ್ಯದ ಕೆಲಸ ಕಾರ್ಯಗಳು, ಕಚೇರಿಗಳಿಗೆ ಹೋಗಬೇಕಾದವರು ಮಾತ್ರ ಖಾಸಗಿ ಬಸ್ಸು, ಟ್ಯಾಕ್ಸಿ, ಆಟೋಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ನನ್ನ ಹೋರಾಟಕ್ಕೆ ಪ್ರಧಾನಿ ಮೋದಿ ಬೆಂಬಲವಿದೆ: ಯತ್ನಾಳ್

