ಶಾಕಿಂಗ್ : ಡ್ರೈವರ್ ಇಲ್ಲದೆ ಚಲಿಸಿದ ಟ್ರಕ್ – ಭಯಾನಕ ವಿಡಿಯೋ ವೈರಲ್!

ಗ್ಯಾಸ್ ಸಿಲಿಂಡರ್ ಲೋಡ್ ಗಾಗಿ ಸಿಲ್ಲಿಸಿದ್ದ ಟ್ರಕ್ ಡ್ರೈವರ್ ಇಲ್ಲದೆ ಚಲಿಸಿದ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ಘಟನೆ ಏಪ್ರಿಲ್ 7 ರಂದು ಬ್ರೆಜಿಲ್‌ನ ಮಿನಾಸ್ ಗೆರೈಸ್‌ನ ಇಬಿರೈಟ್‌ನಲ್ಲಿ ಸಂಭವಿಸಿದೆ. ಚಾಲಕ ಹೊರಗೆ ನಿಂತಿದ್ದಾಗ ಸಿಲಿಂಡರ್ ತುಂಬಿದ ಟ್ರಕ್ ತನ್ನಿಂದಾನೆ ಚಲಿಸಲು ಪ್ರಾರಂಭಿಸಿದ ಎದೆ ಬಡಿತ ನಿಲ್ಲಿಸುವ ವೀಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಲಕ ಎಷ್ಟೇ ಪ್ರಯತ್ನ ಪಟ್ಟರು ರಸ್ತೆಗೆ ಅಡ್ಡಲಾಗಿ ಟ್ರಕ್ ಚಲಿಸಿದೆ. ನಂತರ ಚಾಲಕನ ಸತತ ಪ್ರಯತ್ನದಿಂದಾಗಿ ಟ್ರಕ್ ಮೇಲೆತ್ತಲು ಯಶಸ್ವಿಯಾಗಿದ್ದಾನೆ.

ಅದೃಷ್ಟವಶಾತ್ ತಕ್ಷಣ ಚಾಲಕ ಚಾಲಕ ಪ್ರಾಣವನ್ನು ಪಣಕ್ಕಿಟ್ಟು ವಾಹನವನ್ನು ಬಂಡೆಯಿಂದ ಕೆಳಕ್ಕೆ ಬೀಳದಂತೆ ತಡೆದಿದ್ದಾನೆ. ಘಟನೆಗೆ ಕಾರಣ ಟ್ರಕ್ ನಿಲ್ಲಿಸಿದಾಗ ಗೇರ್ ನಲ್ಲಿತ್ತು ಎನ್ನಲಾಗುತ್ತಿದೆ. ಇದರಿಂದಾಗಿ ವಾಹನ ಚಲಿಸಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights