ಭಾರತವನ್ನು ಮತ್ತೆ ಲಾಕ್‌ಡೌನ್‌ ಮಾಡಬೇಕು; ಸೇನೆಯ ನೆರವು ಪಡೆಯಬೇಕು: ಅಮೆರಿಕಾ ವೈದ್ಯಕೀಯ ಸಲಹೆಗಾರ ಸೂಚನೆ!

ಕೊರೊನಾ ಉಲ್ಬಣದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರ ಡಾಕ್ಟರ್ ಆಂಥೋನಿ ಫೌಚಿ ಅವರು, ಭಾರತದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್‌ ಜಾರಿಮಾಡುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ದಿನೇ-ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಕೆಲ ದಿನಗಳ ಕಾಲ ಲಾಕ್‌ಡೌನ್‌ ಜಾರಿ ಮಾಡಬೇಕು. ಕೊರೊನಾ ಉಲ್ಬಣಗೊಂಡಿರುವ ಈ ಪರಿಸ್ಥಿತಿಯಲ್ಲಿ ಭಾರತದ ಜನರಿಗೆ ಲಸಿಕೆಯು ಅತ್ಯಗತ್ಯವಾದುದು ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾದಿಂದ ಬಳಲುತ್ತಿರುವವರಿಗೆ ಒದಗಿಸಲು ಆಮ್ಲಜನಕದ ಕೊರತೆ ಇದೆ. ಹೀಗಾಗಿ ಅಗತ್ಯವಿರುವಷ್ಟು ಆಕ್ಸಿಜನ್‌ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು. ಇದಕ್ಕಾಗಿ ಆಯೋಗವನ್ನು ರಚಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ನೆರವು ಪಡೆಯಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ದೇಶಗಳ ಜೊತೆ ಮಾತುಕತೆ ನಡೆಸಬೇಕು. ಸಾಧ್ಯವಾಗುವಷ್ಟು ಹೊಸ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು. ಚೀನಾ-ಅಮೆರಿಕಾ ರೀತಿಯಲ್ಲಿ ಸರ್ಕಾರವು ಭಾರತೀಯ ಸೇನೆಯ ನೆರವನ್ನು ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಕೊರೊನಾವನ್ನು ಎದುರಿಸಲು ಸದ್ಯದ ತುರ್ತು ಪರಿಸ್ಥಿತಿಯಲ್ಲಿ ತಾತ್ಕಾಲಿಕ ಉಪಾಯಗಳನ್ನು ರೂಪಿಸಿಬೇಕು. ನಂತರ ಮದ್ಯಮ ಮತ್ತು ದೀರ್ಘಕಾಲಿಕ ಉಪಾಯಗಳನ್ನು ಕಂಡುಕೊಂಡು, ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಡಾ. ಫೌಚಿ ತಿಳಿಸಿದ್ದಾರೆ.

ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿದೆ. ಆದರೆ, 06 ತಿಂಗಳ ಕಾಲದ ಲಾಕ್‌ಡೌನ್‌ ಮಾಡುವ ಅಗತ್ಯವಿಲ್ಲ. ಕೆಲವು ವಾರಗಳಷ್ಟೇ ಲಾಕ್‌ಡೌನ್‌ ಮಾಡಿ, ಹಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾನು ದೇಶಕ್ಕಾಗಿ ಯುದ್ದ ಮಾಡಿದೆ; ಆದರೆ ಈ ವ್ಯವಸ್ಥೆ ನನ್ನ ಮಗನನ್ನು ರಕ್ಷಿಸಲಿಲ್ಲ: ಕಾರ್ಗಿಲ್‌ ಯೋಧನ ಆಕ್ರಂದನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights