ಶೃಂಗೇರಿ ಆಸಿಡ್ ದಾಳಿ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 2.50 ಲಕ್ಷ ದಂಡ!
ಶೃಂಗೇರಿಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 2.50 ಲಕ್ಷ ದಂಡ ವಿಧಿಸಿ ಅಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
2015ರ ಏಪ್ರಿಲ್ 18ರಂದು ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ಆರೋಪಿಗಳಗಿದ್ದ ಗಣೇಶ್ ಅಲಿಯಾಸ್ ಗಣಿ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಹಾಗೂ ಅಬ್ದುಲ್ ವಾಜೀದ್(37) ಎಂಬುವವರು ಆಸಿಡ್ ದಾಳಿ ನಡೆಸದ್ದರು.
ಈ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ಇಂದು ತೀರ್ಪು ನೀಡಿದ್ದು, ನಾಲ್ವರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 2.50 ಲಕ್ಷ ದಂಡ ವಿಧಿಸಿದೆ.
ಒಂದು ವೇಳೆ ಅಪರಾಧಿಗಳು ಮೇಲ್ಮನವಿ ಸಲ್ಲಿಸುವುದಾದರೆ, ಮೊದಲು ವಿಧಿಸಲಾಗಿರುವ ತಲಾ 2.50 ಲಕ್ಷ ದಂಡ ಪಾವತಿಸಿಬೇಕು. ದಂಡ ಪಾವತಿಯಾದ ಬಳಕ ಮೇಲ್ಮನವಿ ಸಲ್ಲಿಸಬಹುದು. ದಂಡ ಪಾವತಿಸದೇ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ; ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ!