6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ಕೇಂದ್ರ ನಿರ್ಧಾರ; ಈಗಾಗಲೇ ಮಾರಾಟವಾಗಿವೆ 20 ಸಂಸ್ಥೆಗಳು!

ಕೇಂದ್ರದ ಹಣಕಾಸು ಇಲಾಖೆಯು ದೇಶದ 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ಸೋಮವಾರ ನಿರ್ಧರಿಸಿದೆ. ವಿತ್ತೀಯ ಕೊರತೆ ನೀಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಹಲವು ಕಂಪನಿಗಳಲ್ಲಿ ಬಂಡವಾಳ ಹಿಂಪಡೆತ ಮತ್ತು ಖಾಸಗೀಕರಣದಂತಹ ಯೋಜನೆಗಳಿಗೆ ಒಕ್ಕೂಟ ಸರ್ಕಾರ ಚಾಲನೆ ನೀಡಿದೆ. ಇದರ ಜೊತೆಯಲ್ಲೇ ಈಗ 4 ವರ್ಷಗಳ ಅವಧಿಗೆ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂಲಭೂತ ಸೌಲಭ್ಯಗಳ ಖಾಸಗೀಕರಣದ ಯೋಜನೆಯನ್ನು ಘೋಷಿಸಿದೆ.

ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಯೋಜನೆಯಡಿಯಲ್ಲಿ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧರಿಸಲಾಗಿದೆ. ಇದರ ಮೂಲಕ ಸರ್ಕಾರಿ- ಖಾಸಗಿ ವಲಯಗಳು ಭಾಗಿ ಆಗಬಹುದು. ಆಸ್ತಿಯನ್ನು ಖಾಸಗಿಯವರು ಮಾರಾಟ ಮಾಡುತ್ತಿಲ್ಲ. ಆಸ್ತಿಯ ಮಾಲೀಕತ್ವ ಸರ್ಕಾರದ ಬಳಿಯೇ ಇರುತ್ತದೆ. ಕಡ್ಡಾಯವಾಗಿ ಆಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡಬೇಕು ಎನ್ನಲಾಗಿದೆ.

ಇದನ್ನೂ ಓದಿ: Fact Check: ಆಫ್ಘಾನ್‌ ಮಹಿಳೆಯರನ್ನು ಮಾರಾಟ ಮಾಡುತ್ತಿದೆಯೇ ತಾಲಿಬಾನ್‌?

ನ್ಯಾಷನಲ್ ಮಾನಿಟೈಸೇಷನ್ ಪೈಪ್​​ಲೈನ್ ಯೋಜನೆಯಡಿ ಭಾರತೀಯ ರೈಲ್ವೆ, ವಿಮಾನ ನಿಲ್ದಾಣಗಳು ಮತ್ತು ಕಲ್ಲಿದ್ದಲು ಗಣಿಯನ್ನು ಮುಖ್ಯವಾಗಿ ಖಾಸಗೀಕರಣಗೊಳಿಸಲು ಆಯ್ದೆ ಮಾಡಿಕೊಳ್ಳಲಾಗಿದೆ.

ಇದರಲ್ಲಿ 15 ರೈಲ್ವೆ ಸ್ಟೇಡಿಯಂಗಳು, 25 ವಿಮಾನ ನಿಲ್ದಾಣಗಳು ಮತ್ತು 160 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳನ್ನು ಖಾಸಗೀಕರಣಗೊಳಿಸಲಾಗುವುದು. ಇದರ ಹೊರತಾಗಿ ರಸ್ತೆ, ವಿದ್ಯುತ್ ಪೂರೈಕೆ ವ್ಯವಸ್ಥೆ ಮತ್ತು ಗ್ಯಾಸ್ ಪೈಪ್ ಲೈನ್‌ಗಳನ್ನೂ ಖಾಸಗೀಕರಣಗೊಳಿಸಲಾಗುತ್ತದೆ.

ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಗೆ ಬಂದಾಗಿನಿಂದ ದೇಶದ ಆಸ್ತಿಯನ್ನು ಮಾರಾಟ ಮಾಡುವುದು ಮತ್ತು ಖಾಸಗೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಸಾಮಾಜಿಕ ಹೋರಾಟಗಾರರು ಬ್ಯಾಂಕ್ ನೌಕರರು, ರೈತರು, ವಿದ್ಯಾರ್ಥಿಗಳು ಈ ಬಗ್ಗೆ ದನಿ ಎತ್ತಿದರೂ ಸರ್ಕಾರ ಮಾತ್ರ ಖಾಸಗೀಕರಣಗೊಳಿಸುವ ಪ್ರಕ್ರಿಯೆ ಮುಂದುವರೆಸುತ್ತಿದೆ.

ಈಗಾಗಲೇ ಮಾರಾಟವಾಗಿರುವ ಸಂಸ್ಥೆಗಳು

ಏರ್ ಇಂಡಿಯಾ

ಲೈರ್ಫ ಇನ್ಸೂರೆನ್ಸ್ ಕಾರ್ಪೋರೇಷನ್ (LIC)

ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ(SCI)

ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ (CONCOR)

ಬೆಮೆಲ್

ಹಿಂದೂಸ್ತಾನ್ ಮಷೀನ್ ಟೂಲ್ಸ್ ಲಿಮಿಟೆಡ್ (HMT)

ನೀಲಾಚಲ ಇಸ್ಪತ್ ನಿಗಮ್ ಲಿಮಿಟೆಡ್ (NINS)

ಪವನ್ ಹನ್ಸ್ ಲಿಮಿಟೆಡ್

ಭಾರತ್ ಅರ್ಥ್ ಮೂವರ್‍ಸ್ ಲಿಮಿಟೆಡ್ (BEML)

ಆಸ್ಪತ್ರೆ ಸೇವೆಗಳ ಸಲಹಾ ಲಿಮಿಟೆಡ್ (HSCCL)

ಎಂಜಿನಿಯರಿಂಗ್ ಪ್ರಾಜೆಕ್ಟ್(ಇಂಡಿಯಾ)ಲಿ.

ಫೆರೋ ಸ್ಕ್ರಾಪ್ ನಿಗಮ್ ಲಿಮಿಟೆಡ್ (FSNL)

ಎಚ್‌ಎಲ್‌ಎಲ್ ಲೈಫ್ ಕೇರ್‌

ರಾಷ್ಟ್ರೀಯ ಯೋಜನೆ ನಿರ್ಮಾಣ ನಿಗಮ (NPCC)

ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ

ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್

ಸೆಂಟ್ರಲ್ ಎಲೆಕ್ಟ್ರಾನಿಕ್ ಲಿಮಿಟೆಡ್(CEL)

ಸಿಮೆಂಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ (CCIL) (ನಯಾಂಗಾವ್ ಘಟಕ)

ಬ್ರೀಡ್ಜ್ ಮತ್ತು ರೂಫ್ ಕಂ ಇಂಡಿಯಾ ಲಿಮಿಟೆಡ್

ಇಂಡಿಯನ್ ಮೆಡಿಸಿನ್ ಮತ್ತು ಫಾರ್ಮಸ್ಯೂಟಿಕಲ್ ಕಾರ್ಪೋರೇಷನ್ ಲಿಮಿಟೆಡ್ (IMPCL) ಸೇರಿ ಆರು ವಿಮಾನ ನಿಲ್ದಾಣ ಈಗಾಗಲೇ ಖಾಸಗೀಕರಣಗೊಂಡಿವೆ.

ಮುಂದೆ ಮಾರಲು ಸಿದ್ದಗೊಂಡಿರುವ ಸಂಸ್ಥೆಗಳು

150 ರೈಲುಗಳನ್ನು ಮತ್ತು 50 ರೈಲು ನಿಲ್ದಾಣಗಳನ್ನು ಸರ್ಕಾರವು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ನಡೆದಿದೆ.

ಭಾರತೀಯ ರೈಲ್ವೇ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್)

ಪಂಜಾಬ್ ಸಿಂಧ್ ಬ್ಯಾಂಕ್

ಬ್ಯಾಂಕ್ ಆಫ್ ಮಹಾರಾಷ್ಟ್ರ

ಇಂಡಿಯನ್ ಓವರ್ ಸೀಸ್ ಬ್ಯಾಂಕ್

ಕಲ್ಲಿದ್ದಲು ಗಣಿಗಾರಿಕೆ

ರೈಲ್ವೆ ಸ್ಟೇಡಿಯಂಗಳು

ವಿದ್ಯುತ್ ಪೂರೈಕೆ ವ್ಯವಸ್ಥೆ

BSNL… ಇವೆಲ್ಲವೂ ಮಾರಾಟದ ಸಾಲಿನಲ್ಲಿವೆ.

ಇನ್ನು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಮಾ.15 ಮತ್ತು16 ರಂದು ಪ್ರತಿಭಟನೆ ನಡೆಸಿದೆ.

ಒಕ್ಕೂಟ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆಯ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎನ್ನುವ ಬಿಜೆಪಿ, ಆ ಅವಧಿಯಲ್ಲಿ ಜನರ ಹಣದಿಂದ ನಿರ್ಮಿಸಿದ ಎಲ್ಲಾ ಆಸ್ತಿಯನ್ನು ತಮ್ಮ ಎರಡು-ಮೂರು ಉದ್ಯಮಿ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಆನ್‌ಲೈನ್‌ ಕ್ಲಾಸ್‌: 12 ಮಾವಿನ ಹಣ್ಣುಗಳನ್ನು 1.2 ಲಕ್ಷಕ್ಕೆ ಮಾರಾಟ ಮಾಡಿದ ಬಾಲಕಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights