ಫ್ಯಾಕ್ಟ್‌ಚೆಕ್: ಹಳೆಯ ವಿಡಿಯೊದೊಂದಿಗೆ ಮುಸ್ಲಿಂ ದ್ವೇಷ ಹರಡುತ್ತಿರುವ ಬಲಪಂಥೀಯ ಪ್ರತಿಪಾದಕರು!!

ಮಾರ್ಚ್ 21 ರಂದು, ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯಲ್ಲಿ ನಡೆದ ಕ್ರೂರ ಹಿಂಸಾತ್ಮಕ ಘಟನೆಯಲ್ಲಿ, ಎಂಟು ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಂಟು ಜನರನ್ನು ಸಜೀವ ದಹಿಸಲಾಗಿತ್ತು. ಈ ಕೃತ್ಯಕ್ಕೆ ಸ್ಥಳೀಯ ಪಂಚಾಯತ್ ಪ್ರತಿನಿಧಿಯಾದ ಭಾದು ಶೇಖ್ ಹತ್ಯೆಗೆ ಪ್ರತಿಯಾಗಿ ನಡೆಸಿದ ದಾಳಿ ಎಂದು ಹೇಳಲಾಗಿತ್ತು. ಸುಟ್ಟು ಬೆಂದು ಹೋದ  ದೇಹಗಳ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು, ನಂತರ ಕೋಲ್ಕತ್ತಾ ಹೈಕೋರ್ಟ್ ಹಿಂಸಾಚಾರದ ಸು ಮೋಟೋ ಪ್ರಕರಣ ಎಂದು ಪ್ರತಿಪಾದಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ  ಆದೇಶಿಸಿತು.

https://twitter.com/SarikaJainBJP/status/1508330099300438017

ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಹರಿದಾಡುತ್ತಿದ್ದು, ರಾತ್ರಿ ಸಮಯದಲ್ಲಿ ಮುಸ್ಲಿಮರ ದೊಡ್ಡ ಗುಂಪೊಂದು ನಡುರಸ್ತೆಗೆ ಅಡ್ಡಲಾಗಿ ನಿಂತು ಅದೇ ಮಾರ್ಗದಲ್ಲಿ ಬರುತ್ತಿದ್ದ ಕಾರುಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಮತ್ತು ರಸ್ತೆಯಲ್ಲಿ ನಿಂತಿದ್ದ ಕಾರುಗಳನ್ನು ಅದೇ ಗುಂಪು ಧ್ವಂಸಗೊಳಿಸುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ಪಶ್ಚಿಮ ಬಂಗಾಳದ ಕೋಲ್ಕತ್ತಾದದ್ದು ಮತ್ತು ವಿಡಿಯೋದಲ್ಲಿ ಕಾಣುತ್ತಿರುವವರು ಮುಸ್ಲಿಮರು ಎಂದು ಹೇಳಲಾಗಿದೆ.

“ಭಯಾನಕ” ಮತ್ತು “ಅಪಾಯಕಾರಿ” ವೀಡಿಯೊ “ಕಲ್ಕತ್ತಾ” ಬಂದಿದೆ ಎಂದು ಹೇಳಲಾಗಿದ್ದು ಬಂಗಾಳದ ಪರಿಸ್ಥಿತಿ ಪಾಕಿಸ್ತಾನದಂತಿದೆ, ವಾಹನಗಳ ಗಾಜು ಒಡೆಯುವವರು ಇಸ್ಲಾಮಿಕ್ ಜಿಹಾದಿಗಳು, ಇದೆ ಪರಿಸ್ಥಿತಿ ದೇಶಕ್ಕೆ ವ್ಯಾಪಿಸಲು ಹೆಚ್ಚು ಸಮಯ ಬೇಕಿಲ್ಲ. ಎಂಬ ಬರಹದೊಂದಿಗೆ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ. ಹಾಗಿದ್ದರೆ ವೈರಲ್ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಶೀಲಿಸೋಣ.

https://twitter.com/Sanni40529080/status/1508339519447207938

ಫ್ಯಾಕ್ಟ್‌ಚೆಕ್:

ಈ ಹಿಂದೆ ಇದೆ ವಿಡಿಯೊ ಸ್ವೀಡನ್‌ನಿಂದ ಎಂದು ಆಗಿ ವೈರಲ್ ಆಗಿತ್ತು

ಈ ವೀಡಿಯೊವನ್ನು 2020 ರಲ್ಲಿ Twitter ಬಳಕೆದಾರ @cbpunjabi ಅವರು ಹಂಚಿಕೊಂಡಿದ್ದಾರೆ, ಇದು ಸ್ವೀಡನ್‌ನಿಂದ ಬಂದಿದೆ ಎಂದು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದರು. ಈ ಟ್ವೀಟ್  2,700 ರಿಟ್ವೀಟ್‌ಗಳನ್ನು ಮತ್ತು 50,000 ವೀವ್ಸ್‌ ಪಡೆದುಕೊಂಡಿತ್ತು. ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿ ಹಂದಿಯ ಎಮೋಜಿಯನ್ನು ಸಹ ವೀಡಿಯೊದಲ್ಲಿ ಉಲ್ಲೇಖ ಮಾಡಲಾಗಿತ್ತು.

ಇಸ್ಲಾಂ ಧರ್ಮದ ಪವಿತ್ರ ಪುಸ್ತಕವಾದ ಕುರಾನ್ ಪ್ರತಿಯನ್ನು ಮಾಲ್ಮೋದಲ್ಲಿ ಬಲಪಂಥೀಯ ಡ್ಯಾನಿಶ್ ಪಕ್ಷದ ಸದಸ್ಯರಾದ ಸ್ಟ್ರಾಮ್ ಕುರ್ಸ್ (ಹಾರ್ಡ್ ಲೈನ್) ಸುಟ್ಟುಹಾಕಿದ್ದರು ನಂತರ ಆಗಸ್ಟ್ ತಿಂಗಳ ಅಂತ್ಯದಲ್ಲಿ ಸ್ವೀಡನ್‌ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಯಿತು. ಪಕ್ಷದ ನಾಯಕ ರಾಸ್ಮಸ್ ಪಲುಡಾನ್ ಅವರು “ನಾರ್ಡಿಕ್ ದೇಶಗಳಲ್ಲಿ ಇಸ್ಲಾಮೀಕರಣ” ಕುರಿತು ಸಭೆ ನಡಸಿ ಕುರಾನ್ ಪುಸ್ತಕವನ್ನು ಸುಡುವ ರ್ಯಾಲಿಯಲ್ಲಿ ಭಾಗವಹಿಸಲು ಈ ಹಿಂದೆ ಅನುಮತಿ ನಿರಾಕರಿಸಲಾಯಿತು. ಪಲುಡಾನ್ ಒಬ್ಬ ಕಟ್ಟರ್‌ವಾದಿಯಾಗಿದ್ದು, ಅವರು ಕುರಾನ್ ಅನ್ನು ಬೇಕನ್‌ನಲ್ಲಿ ಇಸ್ಲಾಂನ ಪವಿತ್ರ ಪುಸ್ತಕವನ್ನು ಸುಟ್ಟುಹಾಕಿದ ವೀಡಿಯೊಗಳನ್ನು ಒಳಗೊಂಡಂತೆ ಯೂಟ್ಯೂಬ್‌ನಲ್ಲಿ ವರ್ಣಭೇದ ನೀತಿಯನ್ನು ಪ್ರಚಾರ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಸ್ವೀಡನ್‌ನಲ್ಲಿ ಇಸ್ಲಾಂ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಮುಸ್ಲಿಂ ಸಮುದಾಯದ ಸದಸ್ಯರು ರಸ್ತೆಯಲ್ಲಿ ಹಾದುಹೋಗುವ ಕಾರುಗಳನ್ನು ಧ್ವಂಸಗೊಳಿಸುವುದನ್ನು ಚಿತ್ರಿಸಲು ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗಿತ್ತು.

ಬಲಪಂಥೀಯ ಪ್ರತಿಪಾದನೆಯ ಬೆಂಬಲಿಗರು ಸುಳ್ಳು ಹೇಳಿಕೆಗಳೊಂದಿಗೆ ಹಳೆಯ ವಿಡಿಯೊ ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಕೊಲ್ಕತ್ತಾ ಪೊಲೀಸರ ಸ್ಪಷ್ಟೀಕರಣ

ಮೇ 2018 ರಲ್ಲಿ ಸ್ವಿಟ್ಜರ್ಲೆಂಡ್‌ನ ಬಾಸೆಲ್ ನಗರದಲ್ಲಿ ನಡೆದ ವಿಧ್ವಂಸಕ ಘಟನೆಯನ್ನು ಕೋಲ್ಕತ್ತಾದಲ್ಲಿ ನಡೆದ ಘಟನೆ ಎಂದು ತಪ್ಪಾಗಿ ವಿಹಂಚಿಕೊಳ್ಳಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ  ಹರಡುವ ಇಂತಹ ಸುಳ್ಳು ಮಾಹಿತಿಯನ್ನು ದಯವಿಟ್ಟು ನಂಬಬೇಡಿ, ನಂಬುವ ಮುಂಚೆ ಪರಿಶೀಲಿಸಿ, ಸುಳ್ಳು ಪ್ರಚಾರಕ್ಕೆ ಆಸ್ಪದ ಕೊಡಬೇಡಿ ಎಂದು ತಮ್ಮ ಟ್ವಿಟ್‌ನಲ್ಲಿ ಮನವಿ ಮಾಡಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಹಳೆಯ ವೀಡಿಯೊ

ನಾಲ್ಕು ವರ್ಷಗಳ ಹಿಂದೆ UK ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ರಂಜಾನ್ ಸಮಯದಲ್ಲಿ ಮುಸ್ಲಿಮರು ಗಲಭೆ ನಡೆಸಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಾಗ ಆಲ್ಟ್ ನ್ಯೂಸ್ ಈ ವೀಡಿಯೊವನ್ನು ಹಲ್ಲೆಗೆಳೆದು ಫ್ಯಾಕ್ಟ್‌ಚೆಕ್  ಮಾಡುವ ಮೂಲಕ ವಾಸ್ತವವನ್ನು ವರದಿ ಮಾಡಿತ್ತು. ವೈರಲ್ ವಿಡಿಯೋದಲ್ಲಿರುವ ದೃಶ್ಯಾವಳಿಗಳು ಅಥವಾ ಘಟನೆಯು ಯುಕೆಯಲ್ಲಿ ನಡೆದಿರಲಿಲ್ಲ ಬದಲಿಗೆ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಸಂಭವಿಸಿದೆ ಎಂದು ವರದಿ ಮಾಡಿತ್ತು. ಅದರ ಮೂಲಕ ಘಟನೆಗೂ ಇಸ್ಲಾಂ ಧರ್ಮಕ್ಕೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲಎಂದು ತಿಳಿಸಿತ್ತು.

ವಿಡಿಯೊ ದೃಶ್ಯಾವಳಿಗೆ ಸಂಬಂದಿಸಿದಂತೆ ಬಾಸೆಲ್ ಮತ್ತು ಲುಸರ್ನ್ ಫುಟ್ಬಾಲ್ ಕ್ಲಬ್‌ಗಳ ನಡುವಿನ ಫುಟ್‌ಬಾಲ್ ಪಂದ್ಯಕ್ಕೆ ಸಂಬಂಧಿಸಿದ್ದಾಗಿದೆ.  ಹಿಂಸಾಚಾರವು ಮೇ 19, 2018 ರಂದು ಬಾಸೆಲ್‌ನ ಬಿರ್ಸ್‌ಸ್ಟ್ರಾಸ್ಸೆಯಲ್ಲಿ ನಡೆದಿದ್ದು. ವರದಿಗಳ ಪ್ರಕಾರ, ಸುಮಾರು 90 ಜನರು ಗಲಭೆಯಲ್ಲಿ ತೊಡಗಿದ್ದರು ಮತ್ತು ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದರು ಎಂದು ವರದಿಯಾಗಿತ್ತು. ಈ ಘಟನೆಯನ್ನು ಸ್ವಿಟ್ಜರ್ಲೆಂಡ್‌ನ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ.

ನಾಲ್ಕು ವರ್ಷಗಳ ಹಳೆಯ ವೀಡಿಯೊವನ್ನು ಪಶ್ಚಿಮ ಬಂಗಾಳದ ಘಟನೆಗೆ ಸಂಬಂಧ ಕಲ್ಪಿಸಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋ ವಾಸ್ತವವಾಗಿ  ಸ್ವಿಟ್ಜರ್ಲೆಂಡ್‌ನಲ್ಲಿ ಫುಟ್‌ಬಾಲ್ ಪ್ರೇಮಿಗಳ ಎರಡು ಗುಂಪುಗಳ ನಡುವೆ ನಡೆದ ಹಿಂಸಾ ಕೃತ್ಯ ಎಂಬುದು ಬಯಲಾಗಿದೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳುಎಂಬುದು ಖಚಿವಾಗಿದೆ.

ಕೃಪೆ: ಆಲ್ಟ್‌ನ್ಯೂಸ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಭಗತ್‌ ಸಿಂಗ್‌ಗೆ ಕೇಜ್ರಿವಾಲ್‌ರಿಂದ ಅವಮಾನ ಎಂದು ಸುಳ್ಳು ಸುದ್ದಿ ಹರಡಿದ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights