ಫ್ಯಾಕ್ಟ್‌ಚೆಕ್: ಒಬ್ಬ ಬಾಯ್ ಫ್ರೆಂಡ್‌ಗಾಗಿ 5 ಹುಡುಗಿಯರ ಮಾರಾಮಾರಿ ನಡೆದಿದ್ದು ನಿಜವೇ?

ಒಬ್ಬ ಹುಡುಗನ ಎಲ್ಲಾ ಗೆಳತಿಯರು ಒಂದೇ ಸಮಯದಲ್ಲಿ ಒಂದೇ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆತ ಮತ್ತೊಬ್ಬ ಹುಡುಗಿಯ ಜೊತೆಯಲ್ಲಿದ್ದ. ತಮ್ಮ ಮೋಸಗಾರ ಗೆಳೆಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಅವರು ತಮ್ಮ ತಮ್ಮಲೆ ಜಗಳ ಆಡಿಕೊಂಡಿದ್ದಾರೆ. ಬಿಹಾರದ ಸೋನೆಪುರದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಹುಡುಗ ತನ್ನ ಅನೇಕ ಗೆಳತಿಯರಲ್ಲಿ ಒಬ್ಬಳೊಂದಿಗೆ ಸೋನ್‌ಪುರ್ ಮೇಳಕ್ಕೆ ಬಂದಿದ್ದ, ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪ್ರತಿಪಾದಿಸಿ ಜೀ ಕನ್ನಡ ನ್ಯೂಸ್ ವರದಿ ಮಾಡಿದೆ.

 

ಪ್ರೀತಿಯ ಬಲೆಗೆ ಬಿದ್ದು ಜೀವನದಲ್ಲಿ ಮೇಲೆದ್ದವರೂ ಉಂಟು, ಪ್ರೇಮದ ಮೋಹಕ್ಕೆ ಸಿಕ್ಕು ಜೀವನವನ್ನೇ ಹಾಳು ಮಾಡಿಕೊಂಡವರೂ ಇದ್ದಾರೆ. ಅನೇಕ ಬಾರಿ ನಾವು ಒಂದು ಹುಡುಗ ಇಬ್ಬರೂ ಹುಡುಗಿಯರನ್ನು ಪ್ರೀತಿಸಿದ ಸುದ್ದಿ ಕೇಳಿರಬಹುದು. ಇಲ್ಲಿ ಒಬ್ಬನೇ ಒಬ್ಬ ಹುಡುಗನಿಗಾಗಿ ಒಂದಲ್ಲ ಎರಡಲ್ಲ ಐವರು ಹುಡುಗಿಯರ ನಡುವೆ ಮಾರಾಮಾರಿ ನಡೆದಿದೆ. ಈ ಚೋರ ಒಂದೇ ಕಡೆ ಐವರು ಗೆಳತಿಯರಿಗೆ ಸಿಕ್ಕಿಬಿದ್ದಾಗ ಆದದ್ದೇನು ಎಂಬ ಹೇಳಿಕೆಯೊಂದಿಗೆ ಜೀ ನ್ಯೂಸ್‌ ಕನ್ನಡ ವರದಿ ಮಾಡಿದೆ.

ಹಿಂದೂಸ್ಥಾನ್ UP-BIHAR ಎಂಬ ಟ್ವಿಟರ್ ಹ್ಯಾಂಡಲ್‌ನಿಂದ ಇದೇ ವಿಡಿಯೋವನ್ನು ಅದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

Zee ನ್ಯೂಸ್‌ ಕನ್ನಡ ಮಾಡಿದ ವರದಿಯಲ್ಲಿ ಬಿಹಾರದ ಸೋನೆಪುರದ ಜಾತ್ರೆಯಲ್ಲಿ ಒಬ್ಬ ಹುಡುಗನಿಗಾಗಿ 5 ಹುಡುಗಿಯರು ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ ಎಂದು ಮಾಡಿದ ವರದಿಯ ಹಿನ್ನಲೆಯ ವಾಸ್ತವ ಏನೆಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, 04 ಅಕ್ಟೋಬರ್ 2022 ರಂದು ಅಪ್‌ಲೋಡ್ ಮಾಡಿದ YouTube ವೀಡಿಯೊವೊಂದು ಲಭ್ಯವಾಗಿದೆ.  ‘ಹೊಶಿಯಾರ್‌ಪುರ್ ದಸರಾ 2022 ಗರ್ಲ್ಸ್ ಫೈಟ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, ಈ YouTube ವೀಡಿಯೊದ ದೃಶ್ಯಗಳು ವೈರಲ್ ವೀಡಿಯೊದೊಂದಿಗೆ ಹೊಂದಾಣಿಕೆಯಾಗುತ್ತವೆ.

ಲಭ್ಯವಾದ ಮಾಹಿತಿ ಆದಾರದಲ್ಲಿ ಮತ್ತಷ್ಟು ಕೀ ವರ್ಡ್ ಮೂಲಕ ಸರ್ಚ್ ಮಾಡಿದಾಗ, ಪಂಜಾಬ್ ಕೇಸರಿ ಮತ್ತು ಜಲಂಧರ್ ಕೇಸರಿ ಮತ್ತು ದೈನಿಕ್ ಭಾಸ್ಕರ್ ಅವರು 05 ಅಕ್ಟೋಬರ್ 2022 ರ ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ.

ಈ ವರದಿಗಳ ಪ್ರಕಾರ, ಲೂಧಿಯಾನದ ವರ್ಧಮಾನ್ ಮೈದಾನದಲ್ಲಿ ನಡೆದ ದಸರಾ ಜಾತ್ರೆಯಲ್ಲಿ ಟ್ರಾನ್ಸ್‌ಜೆಂಡರ್‌ಗಳ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಏರಿಯಾ ಹಂಚಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಮಾರಾಮಾರಿ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಗುಂಪುಗಳನ್ನು ಸಮಾಧಾನ ಪಡಿಸಿದರು ಎಂದು  ದೈನಿಕ್ ಜಾಗರಣ್ ವರದಿ ಮಾಡಿದೆ. ದೈನಿಕ್ ಜಾಗರಣ್ ಇದನ್ನು ಪಂಜಾಬ್‌ನ ಹೋಶಿಯಾರ್‌ಪುರದ ಘಟನೆ ಎಂದು ತಿಳಿಸಿದೆ.

NDTVIndia TodayABP newsSakshiTV9Zee NewsLive Hindustan, ಮುಂತಾದ ಹಲವಾರು ಮಾಧ್ಯಮಗಳು ಬಿಹಾರದಲ್ಲಿ ನಡೆಯುತ್ತಿರುವ ಸೋನೆಪುರ್ ಮೇಳದಲ್ಲಿ ಒಬ್ಬ ಹುಡುಗನಿಗಾಗಿ ಐವರು ಮಹಿಳೆಯರು ಹೋರಾಡಿದ ಘಟನೆ ಎಂದು ವರದಿ ಮಾಡಿದೆ. ಸೋನೆಪುರ ಮೇಳದ ವೇಳೆ ಹರಿಹರನಾಥ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ ಎಂದು ಬಹುತೇಕ ಎಲ್ಲಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆದರೆ 2022 ರ ಸೋನೆಪುರ್ ಮೇಳವನ್ನು 06 ನವೆಂಬರ್ ಮತ್ತು 07 ಡಿಸೆಂಬರ್ 2022 ರ ನಡುವೆ ನಡೆಸಲಾಗುತ್ತಿದೆ, ಆದರೆ ಈ ವೈರಲ್ ವೀಡಿಯೊ ಅಕ್ಟೋಬರ್ 2022 ರಿಂದ YouTube ನಲ್ಲಿ ಲಭ್ಯವಿದೆ. ಸೋನೆಪುರ್ ಮೇಳವನ್ನು ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯ ಸಮಯದಲ್ಲಿ ಆಯೋಜಿಸಲಾಗುತ್ತದೆ. ಹರಿಹರನಾಥ ಕ್ಷೇತ್ರ ಸೋನೆಪುರ ಮೇಳದ ಪರಿಕಲ್ಪನೆಯು ಭಗವಾನ್ ಹರಿಹರನಾಥನ (ವಿಷ್ಣು ಮತ್ತು ಶಿವ) ಪೂಜೆಯ ಸುತ್ತ ಪ್ರಾರಂಭವಾಯಿತು, ಇದಕ್ಕಾಗಿ ಜನರು ಸೋನೆಪುರಕ್ಕೆ ಬರುತ್ತಾರೆ. ಈ ಮೇಳವು ಏಷ್ಯಾದ ಅತಿದೊಡ್ಡ ಜಾನುವಾರು ಜಾತ್ರೆಯಾಗಿದೆ. ಸೋನೆಪುರ್ ಜಾನುವಾರು ಜಾತ್ರೆಯು ಕಾರ್ತಿಕ ಪೂರ್ಣಿಮೆಯಂದು (ಹುಣ್ಣಿಮೆಯ ದಿನ) ಬಿಹಾರದ ಸೋನೆಪುರದಲ್ಲಿ ಗಂಗಾ ಮತ್ತು ಗಂಡಕ್ ನದಿಯ ಸಂಗಮದಲ್ಲಿ ನಡೆಯುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, 2022 ರ ದಸರಾ ಸಮಯದಲ್ಲಿ ಪಂಜಾಬ್‌ನಲ್ಲಿ ಎರಡು ಟ್ರಾನ್ಸ್‌ಜೆಂಡರ್ ಗುಂಪುಗಳು ಏರಿಯಾಗಳನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿರುವ ಹಳೆಯ ವೀಡಿಯೊವನ್ನು ಬಿಹಾರದ ಸೋನೆಪುರ್ ಮೇಳದಲ್ಲಿ ಒಬ್ಬ ಹುಡುಗನಿಗಾಗಿ 5 ಹುಡುಗಿಯರ ನಡುವೆ ನಡೆದ ಹೊಡೆದಾಟದ ಘಟನೆ ಎಂದು ತಪ್ಪಾಗಿ ವರದಿ ಮಾಡಿವೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಡ್ಯಾನ್ಸರ್ ಉಡುಪಿನಲ್ಲಿರುವ ಫೋಟೊ ಸ್ಮೃತಿ ಇರಾನಿಯವರದ್ದಲ್ಲ, ಅದು ಎಡಿಟೆಡ್ ಫೋಟೋ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights